ಶೇ.6ಕ್ಕಿಂತ ಹೆಚ್ಚು ಬಡತನ ರೇಖೆಗಿಂತ ಕೆಳಗಿರುವ ಭಾರತೀಯ-ಅಮೆರಿಕನ್ನರು: ವರದಿ

ಸಾಮಾನ್ಯವಾಗಿ ಅಮೆರಿಕದಲ್ಲಿರುವ ಭಾರತೀಯರೆಲ್ಲರೂ ಶ್ರೀಮಂತರು ಎಂದೇ ಭಾವಿಸಲಾಗುತ್ತದೆ. ಆದರೆ, ಅಲ್ಲಿಯೂ ಕೂಡಾ ಶೇ. 6ಕ್ಕಿಂತಲೂ ಹೆಚ್ಚು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುವುದನ್ನು ವರದಿಯೊಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಸಾಮಾನ್ಯವಾಗಿ ಅಮೆರಿಕದಲ್ಲಿರುವ ಭಾರತೀಯರೆಲ್ಲರೂ ಶ್ರೀಮಂತರು ಎಂದೇ ಭಾವಿಸಲಾಗುತ್ತದೆ. ಆದರೆ, ಅಲ್ಲಿಯೂ ಕೂಡಾ ಶೇ. 6ಕ್ಕಿಂತಲೂ ಹೆಚ್ಚು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುವುದನ್ನು ವರದಿಯೊಂದು ತಿಳಿಸಿದೆ.

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ 4.2 ಮಿಲಿಯನ್ ಭಾರತೀಯ- ಅಮೆರಿಕನ್ನರಲ್ಲಿ ಅಂದಾಜು ಶೇ. 6.5 ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಡೆ ವಾಸಿಸುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ ಭಾರತೀಯ ಸಮುದಾಯದವರಲ್ಲಿ ಬಡತನವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿರುವುದಾಗಿ ತಿಳಿದುಬಂದಿದೆ.

ದೇವೇಶ್ ಕಫೂರ್ ಮತ್ತು ಜಶಾನ್ ಬಜ್ವಾತ್ ಆಫ್ ಜಾನ್ಸ್ ಹಾಪ್ ಕಿನ್ಸ್ ಅವರ ಪೌಲ್ ನಿಟ್ಜ್ ಸ್ಕೂಲ್ ಆಫ್ ಅಡ್ವಾನ್ಸ್ಡ್ ಇಂಟರ್ ನ್ಯಾಷನಲ್ ಸ್ಟಡೀಸ್ , ಭಾರತೀಯ ಅಮೆರಿಕನ್ ಜನತೆಯಲ್ಲಿ ಬಡತನ ಕುರಿತು ನಡೆಸಿರುವ ಸಂಶೋಧನಾ ವರದಿ ಗುರುವಾರ ನಡೆದ ಇಂಡಿಯಾಸ್ಪೋರಾ ಲೋಕೋಪಕಾರ ಶೃಂಗಸಭೆ 2020 ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಬೆಂಗಾಲಿ ಮತ್ತು ಪಂಜಾಬಿ ಮಾತನಾಡುವ ಭಾರತೀಯ ಅಮೆರಿಕ ಜನರು ಹೆಚ್ಚಾಗಿ ಬಡತನ ರೇಖೆಯಲ್ಲಿರುವುದಾಗಿ ಕಫೂರ್ ತಿಳಿಸಿದ್ದಾರೆ."ಈ ವರದಿಯೊಂದಿಗೆ, ನಾವು ಅತ್ಯಂತ ಹಿಂದುಳಿದ ಭಾರತೀಯ ಅಮೆರಿಕನ್ನರ ದುಃಸ್ಥಿತಿಯ ಬಗ್ಗೆ ಗಮನ ಸೆಳೆಯಲು ಬಯಸಿದ್ದೇವೆ ಎಂದು ಇಂಡಿಯಾಸ್ಪೋರಾ ಸಂಸ್ಥಾಪಕ ರಂಗಸ್ವಾಮಿ ತಿಳಿಸಿದ್ದಾರೆ.

ಈ ಅಧ್ಯಯನವು ಭಾರತೀಯ ಅಮೆರಿಕನ್ ಸಮುದಾಯದ ಬಡತನದ ವಿವರವಾದ ವಿಶ್ಲೇಷಣೆಯನ್ನು ಒದಗಿಸುತ್ತದೆಯಾದರೂ,  ಕಪ್ಪು ಮತ್ತು ಹಿಸ್ಪಾನಿಕ್ ಅಮೆರಿಕನ್ನರಿಗೆ ಹೋಲಿಸಿದರೆ ಭಾರತೀಯ ಅಮೆರಿಕನ್ನರ ಬಡತನ ಕಡಿಮೆ ಇರುವುದಾಗಿ ಕಫೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com