ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಗಾಗಿ 12 ಬಿಲಿಯನ್‌ ಡಾಲರ್ ನೆರವು: ವಿಶ್ವ ಬ್ಯಾಂಕ್‌

ಕೋವಿಡ್‌ ಸೋಂಕಿತರಿಗೆ ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ಖರೀದಿ ಮತ್ತು ವಿತರಣೆಗೆ ಹಣಕಾಸು ಒದಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 12 ಬಿಲಿಯನ್ ಅಮೆರಿಕನ್‌ ಡಾಲರ್‌ಗಳ ನೆರವು ನೀಡಲು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಅನುಮೋದಿಸಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಿಸಿದೆ.
ವಿಶ್ವ ಬ್ಯಾಂಕ್
ವಿಶ್ವ ಬ್ಯಾಂಕ್

ವಾಷಿಂಗ್ಟನ್‌: ಕೋವಿಡ್‌ ಸೋಂಕಿತರಿಗೆ ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ಖರೀದಿ ಮತ್ತು ವಿತರಣೆಗೆ ಹಣಕಾಸು ಒದಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 12 ಬಿಲಿಯನ್ ಅಮೆರಿಕನ್‌ ಡಾಲರ್‌ಗಳ ನೆರವು ನೀಡಲು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಅನುಮೋದಿಸಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಿಸಿದೆ.

1 ಬಿಲಿಯನ್ ಜನರಿಗೆ ಲಸಿಕೆ ಹಾಕುವಿಕೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಹಣಕಾಸಿನ ನೆರವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡಲು ವಿಶ್ವಬ್ಯಾಂಕ್‌ ನೀಡಲಿರುವ ಜೂನ್ 2021ರವರೆಗಿನ 160 ಬಿಲಿಯನ್ ಡಾಲರ್‌ ಒಟ್ಟು ವಿಶ್ವಬ್ಯಾಂಕ್ ಪ್ಯಾಕೇಜಿನ ಭಾಗವಾಗಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. 

ವಿಶ್ವ ಬ್ಯಾಂಕನ್‌ ಕೋವಿಡ್‌-19 ತುರ್ತು ಪ್ರತಿಕ್ರಿಯಾ ಕಾರ್ಯಕ್ರಮಗಳು 111 ದೇಶಗಳನ್ನು ತಲುಪುತ್ತಿದೆ ಎಂದು ಹೇಳಿಕೆ ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com