ಪಾಕಿಸ್ತಾನದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಹಾರಾಡಿತು ಭಾರತದ ಧ್ವ
ವಿದೇಶ
ಪಾಕಿಸ್ತಾನದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಹಾರಾಡಿತಾ ಭಾರತದ ಧ್ವಜ!!?
ಪಾಕಿಸ್ತಾನದ ಕರಾಚಿಯಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಭಾರತದ ಧ್ವಜ ಹಾರಾಡಿರುವುದು ವೈರಲ್ ಆಗತೊಡಗಿವೆ.
ಪಾಕಿಸ್ತಾನದ ಕರಾಚಿಯಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಭಾರತದ ಧ್ವಜ ಹಾರಾಡಿರುವುದು ವೈರಲ್ ಆಗತೊಡಗಿವೆ.
ಕರಾಚಿಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಿಡಿಎಂ ಎಂಬ ರಾಜಕೀಯ ಪಕ್ಷ ನಡೆಸಿದ ಬೃಹತ್ ಸಮಾವೇಶದಲ್ಲಿ ಭಾರತದ ಧ್ವಜ ಹಾರಾಡಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆದಿದ್ದು, ಇದೊಂದು ತಿರುಚಿದ ಚಿತ್ರ ಎಂಬುದು ತಿಳಿದುಬಂದಿದೆ.
ಅ.18 ರಂದು ನಡೆದಿದ್ದ ಪ್ರತಿಪಕ್ಷಗಳ ಬೃಹತ್ ಸಮಾವೇಶದ ಫೋಟೊದಲ್ಲಿ ಭಾರತದ ಧ್ವಜವನ್ನು ಹಾಕಲಾಗಿದೆ. ಇದನ್ನು ಟ್ವಿಟರ್ ನ ಹಲವಾರು ಅಧಿಕೃತ ಖಾತೆಗಳಲ್ಲಿಯೂ ಹಂಚಿಕೊಳ್ಳಲಾಗಿದೆ.
ವೈರಲ್ ಆಗತೊಡಗಿರುವ ಬಿಳಿಯ ಕಂಬದ ಮೇಲೆ ಭಾರತದ ಧ್ವಜ ಕಂಡುಬಂದಿದ್ದು ಅದನ್ನು ಯಾರೂ ಸಹ ಹಿಡಿದುಕೊಳ್ಳದೇ ಇರುವುದು ಸ್ಪಷ್ಟವಾಗುತ್ತದೆ. ರಿವರ್ಸ್ ಇಮೇಜ್ ಮೂಲಕ ಈ ಚಿತ್ರವನ್ನು ಸರ್ಚ್ ಮಾಡಿದರೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಈ ಫೋಟೋವನ್ನು ಪ್ರಕಟಿಸಿದ್ದು, ಅವುಗಳಲ್ಲಿ ಭಾರತದ ಧ್ವಜ ಇರಲಿಲ್ಲ ಎಂಬುದೂ ಸ್ಪಷ್ಟವಾಗಿದೆ.


