ಟರ್ಕಿ, ಗ್ರೀಸ್ ನಲ್ಲಿ ಪ್ರಬಲ ಭೂಕಂಪ: ನಾಲ್ವರು ಸಾವು, ಹಲವು ಕಟ್ಟಡಗಳು ನೆಲಸಮ

ಟರ್ಕಿ, ಗ್ರೀಸ್ ನಲ್ಲಿ ಪ್ರಬಲ ಭೂಕಂಪ: ನಾಲ್ವರು ಸಾವು, ಹಲವು ಕಟ್ಟಡಗಳು ನೆಲಸಮ

ಎಜಿಯನ್​ ಸಮುದ್ರದಲ್ಲಿ ಸುನಾಮಿ ಎದ್ದ ಪರಿಣಾಮ  ಗ್ರೀಸ್ ಮತ್ತು ಟರ್ಕಿರಾಷ್ಟ್ರಗಳಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದೆ. ಘಟನೆಯಲ್ಲಿ ಕಟ್ಟಡಗಳು ಕುಸಿದು ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದರು ಮತ್ತು ಅನೇಕರು ಅವಶೇಷಗಳಲ್ಲಿ ಸಿಲುಕಿದ್ದಾರೆ.
Published on

ಎಜಿಯನ್​ ಸಮುದ್ರದಲ್ಲಿ ಸುನಾಮಿ ಎದ್ದ ಪರಿಣಾಮ  ಗ್ರೀಸ್ ಮತ್ತು ಟರ್ಕಿರಾಷ್ಟ್ರಗಳಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದೆ. ಘಟನೆಯಲ್ಲಿ ಕಟ್ಟಡಗಳು ಕುಸಿದು ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದರು ಮತ್ತು ಅನೇಕರು ಅವಶೇಷಗಳಲ್ಲಿ ಸಿಲುಕಿದ್ದಾರೆ.

ರಿಕ್ಟರ್‌ ಮಾಪಕದಲ್ಲಿ 7 ರ ತೀವ್ರತೆ ದಾಖಲಾಗಿದೆ.

ಟರ್ಕಿಯ ಕರಾವಳಿ ಪ್ರಾಂತ್ಯದ ಇಜ್ಮೀರ್ ನಲ್ಲಿ ಕನಿಷ್ಠ 120 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆರೋಗ್ಯ ಸಚಿವ ಫಹ್ರೆತಿನ್ ಕೋಕಾ ಹೇಳಿದ್ದಾರೆ.

20 ಕಟ್ಟಡಗಳು ಕುಸಿದಿರುವ ಬಗ್ಗೆ ಇಜ್ಮಿರ್ ಮೇಯರ್ ಟಂಕ್ ಸೋಯರ್ ಸಿಎನ್ಎನ್ ಟರ್ಕಿಗೆ ತಿಳಿಸಿದ್ದು  ಸುಮಾರು 4,5 ಮಿಲಿಯನ್ ನಿವಾಸಿಗಳಿರುವ ಟರ್ಕಿಯಲ್ಲಿ ಈ ನಗರವು ಮೂರನೇ ದೊಡ್ಡ ನಗರವಾಗಿದೆ.ಟರ್ಕಿಯ ಆಂತರಿಕ ಸಚಿವರು ಇಜ್ಮೀರ್‌ನಲ್ಲಿ ಆರು ಕಟ್ಟಡಗಳು ನಾಶವಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com