ಮಹಾರಾಜ ರಣಜಿತ್ ಸಿಂಗ್ ಖಜಾನೆಯ ಆಭರಣಗಳು ಯುಕೆನಲ್ಲಿ ಹರಾಜು

ಇತಿಹಾಸ ಪ್ರಸಿದ್ಧ ಸಿಖ್ಖ್ ದೊರೆ ಮಹಾರಾಜ ರಣಜಿತ್ ಸಿಂಗ್ ಅವರ ಕೊನೆಯ ಪತ್ನಿ ಮಹಾರಾಣಿ ಜಿಂದಾನ್ ಕೌರ್ ಗೆ ಸೇರಿದ್ದ ಆಭರಣಗಳು ಮತ್ತುಅವರ ಮೊಮ್ಮಗಳು ರಾಜಕುಮಾರಿ ಬಂಬಾ ಸುತರ್ಲ್ಯಾಂಡ್ ಗೆ ಅನುವಂಶಿಕವಾಗಿ ಬಂದ ಆಭರಣಗಳನ್ನು ಲಂಡನ್ ನಲ್ಲಿ ಹರಾಜಿಗೆ ಇರಿಸಲಾಗಿದೆ.
ಮಹಾರಾಜ ರಣಜಿತ್ ಸಿಂಗ್ ಖಜಾನೆಯ ಆಭರಣಗಳು ಯುಕೆನಲ್ಲಿ ಹರಾಜು
Updated on

ಲಂಡನ್: ಇತಿಹಾಸ ಪ್ರಸಿದ್ಧ ಸಿಖ್ಖ್ ದೊರೆ ಮಹಾರಾಜ ರಣಜಿತ್ ಸಿಂಗ್ ಅವರ ಕೊನೆಯ ಪತ್ನಿ ಮಹಾರಾಣಿ ಜಿಂದಾನ್ ಕೌರ್ ಗೆ ಸೇರಿದ್ದ ಆಭರಣಗಳು ಮತ್ತುಅವರ ಮೊಮ್ಮಗಳು ರಾಜಕುಮಾರಿ ಬಂಬಾ ಸುತರ್ಲ್ಯಾಂಡ್ ಗೆ ಅನುವಂಶಿಕವಾಗಿ ಬಂದ ಆಭರಣಗಳನ್ನು ಲಂಡನ್ ನಲ್ಲಿ ಹರಾಜಿಗೆ ಇರಿಸಲಾಗಿದೆ.

ರತ್ನಖಚಿತ ಆಭರಣಗಳ ಸೆಟ್ ಹಣೆ ಮೇಲೆ ಧರಿಸುವ ಚಿನ್ನದ  ಪೆಂಡೆಂಟ್, ಅಥವಾ ಚಾಂದ್-ಟಿಕ್ಕಾ, ರತ್ನದ ಸೆಟ್  ಚಿನ್ನದ ರೌಂಡೆಲ್ ಮತ್ತು ಮುತ್ತುಗಳಿಂದ ಕೂಡಿದ ಚಿನ್ನದ ಪೆಂಡೆಂಟ್ 62,500 ಪೌಂಡ್‌ಗ ಹರಾಜಿನಲ್ಲಿ ಬಿಕರಿಯಾಗಿದೆ. ಇದಲ್ಲದೆ 19 ನೇ ಶತಮಾನದ ಇತರ ಅಪರೂಪದ ಕಲಾಕೃತಿಗಳು ಸಹ ಈ ವಾರ ನಡೆದ ಹರಾಜಿನ ಕೇಂದ್ರಬಿಂದುವಾಗಿದ್ದವು,

"ರಣಜಿತ್ ಸಿಂಗ್ ಅವರ ಏಕೈಕ ವಿಧವೆ ಪತ್ನಿ ಜಿಂದಾನ್ ಕೌರ್ (1817-1863) ಬ್ರಿಟಿಷರನ್ನು ಪಂಜಾಬಿಗೆ ಬರದಂತೆ ತೀವ್ರ ಪ್ರತಿರೋಧವನ್ನು ಒಡ್ಡಿದ್ದರು ಆದರೆ ಅಂತಿಮವಾಗಿ ಅವರನ್ನು ಶರಣಾಗಲು ಕೇಳಲಾಗಿತ್ತು. ಆ ನಂತರ ಪಾರಂಪರಿಕ ಖಜಾನೆಯಿಂದ 600 ಕ್ಕೂ ಹೆಚ್ಚು ಆಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು, ಮತ್ತು 1848 ರಲ್ಲಿ ನೇಪಾಳಕ್ಕೆ ಪರಾರಿಯಾಗುವ ಮೊದಲು ಆಕೆ ಜೈಲುವಾಸ ಅನುಭವಿಸಿದ್ದಳು."

ಈ ವಾರ ಮಾರಾಟಕ್ಕಿರುವ ಆಭರಣಗಳು ಖಂಡಿತವಾಗಿಯೂ ಮಹಾರಾಣಿ ಜಿಂದಾನ್ ಕೌರ್ ಅವರಿಗೆ ಬ್ರಿಟಿಷ್ ಅಧಿಕಾರಿಗಳು ಹಸ್ತಾಂತರಿಸಿದ ಆಭರಣಗಳ ಪೆಟ್ಟಿಗೆಯೊಳಗೆ ಇದ್ದವು ಎಂದು ಹರಾಜಿನ ತಾಣದಲ್ಲಿ ಹೇಳಲಾಗಿದೆ.  ಆಕೆ ತನ್ನ ಮಗ ದುಲೀಪ್ ಸಿಂಗ್ ಅವರೊಂದಿಗೆ ಲಂಡನ್ ನಲ್ಲಿ ವಾಸಿಸಲು ಒಪ್ಪಿದ್ದಾಗ ಅವರಿಗೆ ಇದನ್ನು ಹಸ್ತಾಂತರ ಮಾಡಲಾಗಿತ್ತು.

ರಾಜಕುಮಾರ ದುಲೀಪ್ ಸಿಂಗ್ ಅಂತಿಮವಾಗಿ ಲಾಹೋರ್‌ಗೆ ಮರಳಿದರೂ, ಅವರ ಹಿರಿಯ ಮಗಳು ರಾಜಕುಮಾರಿ ಬಂಬಾ  ಇಂಗ್ಲೆಂಡ್‌ನಲ್ಲಿಯೇ ಇದ್ದರು, ಅಲ್ಲಿಯೇ ಅವರು ಜನಿಸಿದ್ದು ಬೆಳೆದಿದ್ದಾಗಿತ್ತು.ಯುಎಸ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತುಮೆಡಿಕಲ್ ಸ್ಕೂಲ್ ಗೆ ಸೇರಿದ್ದ ಅವರು ತನ್ನ ಪೂರ್ವಜರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಆದರೆ ಅಂತಿಮವಾಗಿ ತನ್ನ ಜೀವನದ ಅಂತ್ಯದವರೆಗೆ ಲಾಹೋರ್‌ನಲ್ಲಿ ಶಾಶ್ವತವಾಗಿ ನೆಲೆಸಿದಳು,  ಆ ವೇಳೆ ವಂಶ ಪಾರಂಪರ್ಯವಾಗಿ ಬಂದ ಆಭರಣಗಳನ್ನು ತನ್ನ ಸಹಚರ ಮತ್ತು ಸ್ನೇಹಿತೆ  ಶ್ರೀಮತಿ ಡೋರಾ ಕ್ರೋವ್‌ಗೆ ನೀಡೀದ್ದಳು.

"ಇವುಗಳು ತಮ್ಮದೇ ಆದ ಅದ್ಭುತ ಮೌಲ್ಯ ಹೊಂದಿವೆ.ಇದರ  ಶ್ರೀಮಂತ ಮತ್ತು ಆಕರ್ಷಕ ಇತಿಹಾಸದಿಂದ ಇನ್ನೂ ಹೆಚ್ಚು ವಿಶೇಷವಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ಖಜಾನೆಗಳಲ್ಲಿ ಒಂದರಿಂದ ತೆಗೆದ ಆಭರಣವಿದಾಗಿದೆ" ಬೊನ್ಹ್ಯಾಮ್ಸ್ ಇಸ್ಲಾಮಿಕ್ ಮತ್ತು ಇಂಡಿಯನ್ ಆರ್ಟ್‌ನ ಮುಖ್ಯಸ್ಥ ಆಲಿವರ್ ವೈಟ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com