ಯುನಿಸೆಫ್ ಮುಂದಾಳತ್ವದಲ್ಲಿ ಕೋವಿಡ್-19 ಲಸಿಕೆ ಪೂರೈಕೆ

ಮಾರಕ ಕೊರೋನಾ ಸೋಂಕಿಗೆ ಔಷಧಗಳು ಲಭ್ಯವಾದ ಕೂಡಲೇ ಅವುಗಳನ್ನು ಖರೀದಿಸಿ ಸುರಕ್ಷಿತ, ಕ್ಷಿಪ್ರಗತಿಯಲ್ಲಿ ಎಲ್ಲಾ ರಾಷ್ಟ್ರಗಳಿಗೂ ಸಮಾನ ರೀತಿಯಲ್ಲಿ ದೊರೆಯುವಂತೆ ಪೂರೈಕೆ ಮಾಡಲಾಗುವುದು ಎಂದು ಯುನಿಸೆಫ್ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಮಾರಕ ಕೊರೋನಾ ಸೋಂಕಿಗೆ ಔಷಧಗಳು ಲಭ್ಯವಾದ ಕೂಡಲೇ ಅವುಗಳನ್ನು ಖರೀದಿಸಿ ಸುರಕ್ಷಿತ, ಕ್ಷಿಪ್ರಗತಿಯಲ್ಲಿ ಎಲ್ಲಾ ರಾಷ್ಟ್ರಗಳಿಗೂ ಸಮಾನ ರೀತಿಯಲ್ಲಿ ದೊರೆಯುವಂತೆ ಪೂರೈಕೆ ಮಾಡಲಾಗುವುದು ಎಂದು ಯುನಿಸೆಫ್ ಹೇಳಿದೆ.

ವಿಶ್ವಸಂಸ್ಥೆ ಮಕ್ಕಳ ನಿಧಿ- ಯುನಿಸೆಫ್ ವಿಶ್ವದ ಅತಿದೊಡ್ಡ ಲಸಿಕೆ ಖರೀದಿದಾರನಾಗಿದ್ದು, ವಾರ್ಷಿಕವಾಗಿ ವಾಡಿಕೆಯಂತೆ  ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಸುಮಾರು 2 ಬಿಲಿಯನ್ ಗೂ ಹೆಚ್ಚು ವಿವಿಧ ಲಸಿಕೆಗಳನ್ನು 100 ರಾಷ್ಟ್ರಗಳ ಪರವಾಗಿ ಖರೀದಿಸುತ್ತಿದೆ.

ಮಾನವ ಪ್ರಯೋಗದಲ್ಲಿ ಹಲವು ಲಸಿಕೆಗಳು ಭರವಸೆ ತೋರಿಸುವುದರೊಂದಿಗೆ ಯುನಿಸೆಫ್, ಪ್ಯಾನ್ ಅಮೆರಿಕನ್ ಹೆಲ್ತ್ ಆರ್ಗನೈಷನ್ ಸಹಭಾಗಿತ್ವದೊಂದಿಗೆ 92 ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳಿಗೆ ಕೋವಾಕ್ಸ್ ಗ್ಲೋಬಲ್ ಲಸಿಕೆಗಳ
ಸೌಲಭ್ಯದ ಪರವಾಗಿ  ಕೋವಿಡ್-19 ಲಸಿಕೆಯನ್ನು ಖರೀದಿಸಿ ಪೂರೈಕೆ ಮಾಡಲು ಪ್ರಯತ್ನಿಸುತ್ತಿದೆ.

ಹೆಚ್ಚಿನ ಆದಾಯವಿರುವ 80 ರಷ್ಟಗಳು ಔಷಧ ಖರೀದಿಸಲು ಬೆಂಬಲವನ್ನು ಸಹ ಯುನಿಸೆಫ್ ನೀಡುತ್ತಿದೆ. ತಮ್ಮ ಸ್ವಂತ ಹಣದಲ್ಲಿ ಔಷಧವನ್ನು ಖರೀದಿಸುವುದಾಗಿ ಹೇಳಿರುವ ಯುನಿಸೆಫ್, 170 ರಾಷ್ಟ್ರಗಳಿಗೆ ಕ್ಷಿಪ್ರಗತಿಯಲ್ಲಿ ಪೂರೈಕೆ ಮಾಡುವುದಾಗಿಯೂ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಸರ್ಕಾರಗಳು, ಔಷಧಿ ತಯಾರಿಕಾ ಸಂಸ್ಥೆಗಳು, ಬಹು ಸಂಖ್ಯೆಯ ಪಾಲುದಾರರು ಕೈ ಜೋಡಿಸಬೇಕು ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕರಾದ  ಹೆನ್ರಿಯೆಟ್ಟಾ ಫೊರ್ ಹೇಳಿದ್ದಾರೆ. ಕೋವಿಡ್-19 ಔಷಧ ಲಭ್ಯವಾದ ಕೂಡಲೇ ಅವುಗಳನ್ನು ಎಲ್ಲಾ ರಾಷ್ಟ್ರಗಳಿಗೆ ಸುರಕ್ಷಿತವಾಗಿ, ಕ್ಷಿಪ್ರಗತಿಯಲ್ಲಿ ಪೂರೈಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮುಂದೆ ಎಲ್ಲಾ ದೇಶಗಳಿಗೂ ಕೋವಿಡ್-19 ಲಸಿಕೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ,  ಸಿಇಪಿಐ, ಪಾಹೋ,  ವಿಶ್ವ ಬ್ಯಾಂಕ್,  ಬಿಲ್ ಮತ್ತು ಮಿಲಿಂದಾ ಗೇಟ್ಸ್  ಫೌಂಡೇಷನ್, ಮತ್ತಿತರ ಪಾಲುದಾರರೊಂದಿಗೆ ಸಹಭಾಗಿತ್ವಕ್ಕೆ ಯುನಿಸೆಫ್ ಪ್ರಯತ್ನಿಸುತ್ತಿದೆ. 

2023ರವರೆಗೂ ವಾರ್ಷಿಕ ಕೋವಿಡ್-19 ಲಸಿಕೆ ತಯಾರಿಕೆ ಯೋಜನೆ ಬಗ್ಗೆ 28 ತಯಾರಿಕಾ ಸಂಸ್ಥೆಗಳು  ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ಯುನಿಸೆಫ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com