ಡಬ್ಲ್ಯುಎಚ್ ಓಗೆ ಹಣಕಾಸು ನೆರವು ನಿಲ್ಲಿಸುವ ಬೆದರಿಕೆವೊಡ್ಡಿದ್ದ ಟ್ರಂಪ್ ಈಗ ಯೂಟರ್ನ್

ಜಗತ್ತಿನೆಲ್ಲೆಡೆ ಕೊರೋನಾ ವೈರಸ್ ಹಬ್ಬುವುದನ್ನು ನಿಯಂತ್ರಿಸಲು ಮುಂದಾಳತ್ವವಹಿಸಿರುವ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್)ಗೆ ಅಮೆರಿಕ ಒದಗಿಸುತ್ತಿರುವ ಹಣಕಾಸು ನೆರವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದ ಅಮೆರಿಕ ಅಧ್ಯಕ್ಷ ....
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಜಗತ್ತಿನೆಲ್ಲೆಡೆ ಕೊರೋನಾ ವೈರಸ್ ಹಬ್ಬುವುದನ್ನು ನಿಯಂತ್ರಿಸಲು ಮುಂದಾಳತ್ವವಹಿಸಿರುವ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್)ಗೆ ಅಮೆರಿಕ ಒದಗಿಸುತ್ತಿರುವ ಹಣಕಾಸು ನೆರವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೆಲವೇ ನಿಮಿಷಗಳ ನಂತರ ನಡೆದ ಶ್ವೇತಭವನ ಮಾಧ್ಯಮಗೋಷ್ಟಿಯಲ್ಲಿ ಯೂಟರ್ನ್ ಹೊಡೆದಿದ್ದು, ತಾವು ಅಂತಹ ಯಾವುದೇ ಹೇಳಿಕೆಯನ್ನೇ ನೀಡಿಲ್ಲ ಎಂದಿದ್ದಾರೆ.

ಕೊರೋನಾ ವೈರಸ್ ಸೋಂಕು ನಿಭಾಯಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ ಪಕ್ಷಪಾತ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಚೀನಾ ಪರ ಪಕ್ಷಪಾತ ಮಾಡುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಕ್ರಮ ತಪ್ಪು. ನಾವು ಇದನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಿದ್ದೇವೆ. ನಾವು ವಿಶ್ವ ಆರೋಗ್ಯ ಸಂಸ್ಥೆಗೆ ವೆಚ್ಚಮಾಡುವ ಹಣವನ್ನು ತಡೆಹಿಡಿಯಲಿದ್ದೇವೆ ಎಂದು ಎಂದು ಟ್ರಂಪ್ ಹೇಳಿದ್ದರು.

ಈ ಹೇಳಿಕೆ ನೀಡಿದ ಕೆಲವು ನಿಮಿಷಗಳ ನಂತರ ಟ್ರಂಪ್ ತಮ್ಮ ಹೇಳಿಕೆಯನ್ನು ನಿರಾಕರಿಸಿದರು. ವಿಶ್ವ ಸಂಸ್ಥೆಗೆ ಹಣ ನೀಡುವುದನ್ನು ನಿಲ್ಲಿಸಲಿದ್ದೇನೆ ಎಂದು ಹೇಳಿಲ್ಲ ಎಂದು ಟ್ರಂಪ್ ನಿರಾಕರಿಸಿದರು. ಇಲ್ಲ ನಾನು ಆ ರೀತಿ ಹೇಳಿಲ್ಲ ಎಂದು ಉಲ್ಟಾ ಹೊಡೆದರು.

ಜನವರಿ ೨೩ ರಂದು, ಡಬ್ಲ್ಯುಎಚ್ ಓ ಮಹಾ ನಿರ್ದೇಶಕ ಟೆಡ್ರೊಸ್ ಘೆಬ್ರೆಯೆಸಸ್ ಅಧ್ಯಕ್ಷತೆಯಲ್ಲಿ ಜಿನಿವಾದಲ್ಲಿ ನಡೆದ ಕೊರೋನಾ ವೈರಸ್ ಕುರಿತ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಭೆಯಲ್ಲಿ, ಪ್ರಯಾಣ ಅಥವಾ ವ್ಯಾಪಾರದ ಮೇಲೆ ಯಾವುದೇ ವ್ಯಾಪಕ ನಿರ್ಬಂಧಗಳನ್ನು ಸಂಸ್ಥೆ ಶಿಫಾರಸು ಮಾಡಿಲ್ಲ, ಆದರೆ ವಿಮಾನ ನಿಲ್ದಾಣಗಳಲ್ಲಿ ನಿರ್ಗಮನ ತಪಾಸಣೆ ನಡೆಸುವುದನ್ನು ಶಿಫಾರಸು ಮಾಡಿರುವುದಾಗಿ ಹೇಳಿದ್ದರು.

ಆ ಸಮಯದಲ್ಲಿ ಚೀನಾದಲ್ಲಿ ೬೦೦ಕ್ಕೂ ಹೆಚ್ಚು ಕೊವಿಡ್ -೧೯ ಪ್ರಕರಣಗಳು ವರದಿಯಾಗಿ, ರೋಗದಿಂದ ೧೭ ಮಂದಿ ಮೃತಪಟ್ಟಿದ್ದರು. ವೈರಸ್ ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ಸಿಂಗಪುರ ಥೈಲ್ಯಾಂಡ್ ಹಾಗೂ ಸೌದಿ ಅರೆಬಿಯಾ ದೇಶಗಳನ್ನು ವ್ಯಾಪಿಸಿತ್ತು.

ಫೆಬ್ರವರಿ ೨ ರಂದು ಅಮೆರಿಕ, ಚೀನಾದಿಂದ ಅಮೆರಿಕಾಯೇತರ ಜನರು ತನ್ನ ದೇಶ ಪ್ರವೇಶದ ಮೇಲೆ ನಿರ್ಬಂಧ ವಿಧಿಸಿ, ಚೈನಾದಿಂದ ಅಮೆರಿಕ ನಾಗರೀಕರನ್ನು ತಪಾಸಣೆಗೆ ಒಳಪಡಿಸಿ, ಶಂಕಿತ ಲಕ್ಷಣ ಹೊಂದಿರುವವರನ್ನು ೧೪ ದಿನಗಳ ಕ್ವಾರಂಟೈನ್ ಒಳಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com