ಎಚ್ಚರಿಕೆಯ ನಡುವೆಯೂ ರೈತರ ಪ್ರತಿಭಟನೆಗೆ ಜಸ್ಟಿನ್ ಟ್ರುಡೋ ಬೆಂಬಲ; ಕೆನಡಾ ನೇತೃತ್ವದ ಕೋವಿಡ್ ಸಭೆಗೆ ಜೈ ಶಂಕರ್ ಬಹಿಷ್ಕಾರ

ಭಾರತದ ವಿದೇಶಾಂಗ ಸಚಿವಾಲಯದ ಎಚ್ಚರಿಕೆಯ ಹೊರತಾಗಿಯೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಮೊಂಡಾಟ ಪ್ರದರ್ಶಿಸಿದ್ದು, ಮತ್ತೆ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಕೆನಡಾ ಪ್ರಧಾನಿ
ಕೆನಡಾ ಪ್ರಧಾನಿ

ನವದೆಹಲಿ: ಭಾರತದ ವಿದೇಶಾಂಗ ಸಚಿವಾಲಯದ ಎಚ್ಚರಿಕೆಯ ಹೊರತಾಗಿಯೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಮೊಂಡಾಟ ಪ್ರದರ್ಶಿಸಿದ್ದು, ಮತ್ತೆ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಮತ್ತೆ ತಮ್ಮ ಈ ಹಿಂದಿನ ಹೇಳಿಕೆಯನ್ನೇ ಪುನರುಚ್ಚರಿಸಿರುವ ಜಸ್ಟಿನ್ ಟ್ರೂಡೋ ಕೆನಡಾ ಶಾಂತಿಯುತ ಪ್ರತಿಭಟನೆಯ ಹಕ್ಕುಗಳಿಗೆ ಎಂದಿಗೂ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಬ್ರಿಟನ್ ನ ಸಿಖ್ ಪರಿಷತ್ ಸಹ ಕೆನಡಾ ಪ್ರಧಾನಿಗಳ ಹೇಳಿಕೆಗೆ ಎಲ್ಲಾ ರಾಜಕಾರಣಿಗಳೂ ಬೆಂಬಲಿಸಬೇಕೆಂದು ಒತ್ತಡ ಹೇರಿದೆ.

"ಭಾರತದ ಅಧಿಕಾರಿಗಳು ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸುತ್ತಿರುವ ಜಸ್ಟಿನ್ ಟ್ರೂಡೋ ಅರಿಗೆ ಎಲ್ಲಾ ರಾಜಕಾರಣಿಗಳೂ ಬೆಂಬಲ ನೀಡಬೇಕು" ಎಂದು ಬ್ರಿಟನ್ ನ ಸಿಖ್ ಪರಿಷತ್ ಟ್ವೀಟ್ ಮೂಲಕ ಆಗ್ರಹಿಸಿದೆ.

ಇನ್ನು ಮೊಂಡುತನ ಪ್ರದರ್ಶಿಸುತ್ತಿರುವ ಕೆನಡಾ ಸರ್ಕಾರದ ವರ್ತನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತೀಕ್ಷ್ಣ ಪ್ರತಿಕ್ರಿಯೆ ನೀಡತೊಡಗಿದೆ. 

ಮುಂದಿನ ವಾರ ಕೆನಡಾದ ನೇತೃತ್ವದಲ್ಲಿ ಕೋವಿಡ್-19 ಸಂಬಂಧ ನಡೆಯಬೇಕಿದ್ದ ವಿದೇಶಾಂಗ ಸಚಿವರುಗಳ ಸಭೆಯನ್ನು ಬಹಿಷ್ಕರಿಸಲು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀರ್ಮಾನಿಸಿದ್ದಾರೆ. 

ಕೋವಿಡ್-19 ಗೆ ಸಂಬಂಧಿಸಿದಂತೆ ನವೆಂಬರ್ ತಿಂಗಳಲ್ಲಿ ನಡೆದ ಮಂತ್ರಿಗಳ ಸಮನ್ವಯ ಗುಂಪಿನ 11ನೇ ಸಭೆಯಲ್ಲಿ ಮೊದಲ ಬಾರಿಗೆ ಭಾರತ ಅಧಿಕೃತವಾಗಿ ಭಾಗವಹಿಸಿತ್ತು. 

ಈ ಬಾರಿ ಕೆನಡಾ ನೇತೃತ್ವದಲ್ಲಿ ನಡೆದ ಸಭೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗೆ ಆಹ್ವಾನ ನೀಡಲಾಗಿತ್ತು. ಆದರೆ ರೈತರ ಪ್ರತಿಭಟನೆ ಸಂಬಂಧ ಕೆನಡಾ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸಲು ಭಾರತ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com