ವಾಷಿಂಗ್ಟನ್: ಸೆಪ್ಟೆಂಬರ್ 11 ರ ಭಯೋತ್ಪಾದಕ ದಾಳಿಯ 20 ನೇ ವಾರ್ಷಿಕೋತ್ಸವಕ್ಕೂ ಮೊದಲು ಅಫ್ಘಾನಿಸ್ತಾನದಿಂದ ಎಲ್ಲಾ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಜ್ಜಾಗಿದ್ದಾರೆ.
ಮುಂಬರುವ ತಿಂಗಳುಗಳಲ್ಲಿ ಅಫ್ಘಾನಿಸ್ತಾನದಿಂದ ಮಿಲಿಟರಿಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಜೋ- ಬೈಡನ್ ಬುಧವಾರ ಪ್ರಕಟಿಸಲಿದ್ದಾರೆ ಎಂದು ಈ ವಿಚಾರಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಯೊಬ್ಬರು ಹೇಳಿರುವುದಾಗಿ ವಾಷಿಂಗ್ಟನ್ ಫೋಸ್ಟ್ ವರದಿಯಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 11, 20021ರಲ್ಲಿ ಅಮೆರಿಕಾದಲ್ಲಿ ನಡೆದ ಮಾರಕ ಭಯೋತ್ವಾದಕ ದಾಳಿಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 102 ನಿಮಿಷಗಳ ಅವಧಿಯಲ್ಲಿ ಅಲ್ ಖೈದಾ ಉಗ್ರರು ಅಪಹರಿಸಲಾದ ವಿಮಾನವನ್ನು ವಿಶ್ವ ವಾಣಿಜ್ಯ ಕೇಂದ್ರ ಸಂಕೀರ್ಣದ ಅವಳಿ ಗೋಪುರಗಳಿಗೆ ಹಾರಿಸಲಾಗಿತ್ತು.
ಟ್ರಂಪ್ ಆಡಳಿತವು ಈ ಹಿಂದೆ ತಾಲಿಬಾನ್ ಜೊತೆಗಿನ ಮಾತುಕತೆಗಳಲ್ಲಿ ಹಿಂತೆಗೆದುಕೊಳ್ಳಲು ಮೇ 1 ರ ಗಡುವನ್ನು ನಿಗದಿಪಡಿಸಿತ್ತು. ಗಡುವಿನೊಳಗೆ ವಿದೇಶಿ ಸೈನ್ಯಗಳು ಹೋಗದಿದ್ದಲ್ಲಿ ಅಮೆರಿಕಾ ಮತ್ತು ನ್ಯಾಟೋ ಸೈನಿಕರ ಮೇಲೆ ಮತ್ತೆ ಹೊಸದಾಗಿ ದಾಳಿ ನಡೆಸುವುದಾಗಿ ತಾಲಿಬಾನ್ ಹೇಳುತ್ತಿದ್ದು, ಈಗ ಮತ್ತು ಸೆಪ್ಟೆಂಬರ್ ನಡುವೆ ಹಂತ ಹಂತವಾಗಿ ಸೇನೆಯನ್ನು ಹಿಂತೆಗೆದುಕೊಳ್ಳುವ ಬೈಡೆನ್ ಅವರ ಯೋಜನೆಯನ್ನು ಉಗ್ರರು ಅನುಸರಿಸುತ್ತಾರೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವಾಷಿಂಗ್ಟನ್ ಫೋಸ್ಟ್ ವರದಿ ಮಾಡಿದೆ.
ಅಧಿಕೃತವಾಗಿ 2500 ಅಮೆರಿಕಾದ ಪಡೆಗಳು ಅಪ್ಘಾನಿಸ್ತಾನದಲ್ಲಿವೆ. ಅಲ್ಲದೇ ಹೆಚ್ಚುವರಿಯಾಗಿ 7 ಸಾವಿರ ವಿದೇಶಿ ಪಡೆಗಳು ಕೂಡಾ ಅದರೊಂದಿಗೆ ಇವೆ. ಅದರಲ್ಲಿ ಬಹುತೇಕ ನ್ಯಾಟೋ ಪಡೆಗಳಾಗಿವೆ.
Advertisement