ಅಫ್ಘಾನ್ ರಾಜಧಾನಿ ಕಾಬೂಲ್ ನಿಂದ ಕೇವಲ ಏಳು ಮೈಲು ದೂರದ ಚಾರ್ ಅಸ್ಯಾಬ್ ಜಿಲ್ಲೆ ತಲುಪಿದ ತಾಲಿಬಾನ್!

ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ದಕ್ಷಿಣಕ್ಕೆ ಒಂದು ಪ್ರಾಂತ್ಯವನ್ನು ವಶಪಡಿಸಿಕೊಂಡಿದೆ ಮತ್ತು ಉತ್ತರದ ಪ್ರಮುಖ ನಗರವೊಂದರ ಮೇಲೆ ಶನಿವಾರ ಮುಂಜಾನೆ ಪ್ರಬಲ ಮಾಜಿ ಸೇನಾಧಿಕಾರಿಗಳಿಂದ ಸಮರ್ಥಿಸಲ್ಪಟ್ಟ ಬಹುಮುಖಿ ದಾಳಿಯನ್ನು ಆರಂಭಿಸಿತು ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಲಿಬಾನ್ ವಿರೋಧಿ ಮಿಲಿಟರಿ ಪಡೆ
ತಾಲಿಬಾನ್ ವಿರೋಧಿ ಮಿಲಿಟರಿ ಪಡೆ

ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ದಕ್ಷಿಣಕ್ಕೆ ಒಂದು ಪ್ರಾಂತ್ಯವನ್ನು ವಶಪಡಿಸಿಕೊಂಡಿದೆ ಮತ್ತು ಉತ್ತರದ ಪ್ರಮುಖ ನಗರವೊಂದರ ಮೇಲೆ ಶನಿವಾರ ಮುಂಜಾನೆ ಪ್ರಬಲ ಮಾಜಿ ಸೇನಾಧಿಕಾರಿಗಳಿಂದ ಸಮರ್ಥಿಸಲ್ಪಟ್ಟ ಬಹುಮುಖಿ ದಾಳಿಯನ್ನು ಆರಂಭಿಸಿತು ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ತನ್ನ ಕೊನೆಯ ಸೈನ್ಯವನ್ನು ಹಿಂತೆಗೆದುಕೊಳ್ಳಲು ಮೂರು ವಾರಗಳಿಗಿಂತಲೂ ಮುಂಚೆಯೇ ಉಗ್ರರು ಉತ್ತರ, ಪಶ್ಚಿಮ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಬಹುಭಾಗವನ್ನು ಆಕ್ರಮಿಸಿಕೊಂಡಿದ್ದಾರೆ, ಇದು ಸಂಪೂರ್ಣ ಉಗ್ರಗಾಮಿ ಸ್ವಾಧೀನ ಅಥವಾ ಇನ್ನೊಂದು ಅಫ್ಘಾನ್ ನಾಗರಿಕ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ. 

ತಾಲಿಬಾನ್ ಎಲ್ಲಾ ಲೋಗರ್ ಗಳನ್ನು ವಶಪಡಿಸಿಕೊಂಡಿದ್ದು, ಅದರ ಪ್ರಾಂತೀಯ ಅಧಿಕಾರಿಗಳನ್ನು ಬಂಧಿಸಿದೆ ಎಂದು ಪ್ರಾಂತ್ಯದ ಶಾಸಕರಾದ ಹೋಡಾ ಅಹ್ಮದಿ ಶನಿವಾರ ಹೇಳಿದ್ದಾರೆ. ರಾಜಧಾನಿ ಕಾಬೂಲ್‌ನ ದಕ್ಷಿಣಕ್ಕೆ ಕೇವಲ 11 ಕಿಲೋಮೀಟರ್ (7 ಮೈಲಿ) ದೂರದಲ್ಲಿರುವ ಚಾರ್ ಅಶ್ಯಬ್ ಜಿಲ್ಲೆಯನ್ನು ತಾಲಿಬಾನ್ ತಲುಪಿದೆ ಎಂದು ಅವರು ತಿಳಿಸಿದರು.

ಉತ್ತರ ದಿಕ್ಕಿನ ನಗರವಾದ ಮಜರ್-ಇ-ಶರೀಫ್ ಮೇಲೆ ಹಲವಾರು ದಿಕ್ಕುಗಳಿಂದ ತಾಲಿಬಾನ್ ದಾಳಿ ಮಾಡಿದೆ. ಸಾವುನೋವುಗಳ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರಾಂತೀಯ ರಾಜ್ಯಪಾಲರ ವಕ್ತಾರ ಮುನೀರ್ ಅಹ್ಮದ್ ಫರ್ಹಾದ್ ಹೇಳಿದ್ದಾರೆ. ತಾಲಿಬಾನ್ ಪ್ರಾಬಲ್ಯದ ನಂತರ ಇದೇ ಮೊದಲ ಬಾರಿಗೆ ಶನಿವಾರ ಟಿವಿಯೊಂದರಲ್ಲಿ ಮಾತನಾಡಿದ ಅಪ್ಘಾನ್ ಅಧ್ಯಕ್ಷ ಅಶ್ರಾಫ್ ಗಿಲಾನಿ,  9/11 ದಾಳಿ ಹಿನ್ನೆಲೆಯಲ್ಲಿ ತಾಲಿಬಾನ್ ನನ್ನು 20 ವರ್ಷಗಳ ಕಾಲ ಮಟ್ಟ ಹಾಕಿದ ಸಾಧನೆಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. 

ನಮ್ಮ ಅಂತಾರಾಷ್ಟ್ರಿಯ ಮೈತ್ರಿಗಳು ಸೇರಿದಂತೆ ಸರ್ಕಾರದೊಳಗಿನ ಹಿರಿಯರು, ರಾಜಕೀಯ ಮುಖಂಡರು, ಸಮುದಾಯದ ವಿವಿಧ ಹಂತಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆಯನ್ನು ಆರಂಭಿಸಿದ್ದೇವೆ, ಶೀಘ್ರದಲ್ಲಿಯೇ ಫಲಿತಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದರು. ಬುಧವಾರ ಮಜರ್-ಇ-ಶರೀಫ್ ನಲ್ಲಿ ಅನೇಕ ಮಿಲಿಟರಿ ಕಮಾಂಡರ್ ಗೊಂದಿಗೆ ಗಿಲಾನಿ ಸಭೆ ನಡೆಸಿದ್ದರು. ಮಜರ್-ಇ-ಷರೀಫ್ ಜನರು ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com