ಅಫ್ಘಾನಿಸ್ತಾನದಿಂದ ಕಜಕಿಸ್ತಾನ್ ಗೆ ವಿಶ್ವಸಂಸ್ಥೆಯ ನೂರಾರು ಸಿಬ್ಬಂದಿ ಸ್ಥಳಾಂತರ

ಕಾಬೂಲ್ ನಲ್ಲಿ ಭದ್ರತೆ ಮತ್ತಿತರ ನಿರ್ಬಂಧಗಳ ದೃಷ್ಟಿಯಿಂದ ತನ್ನ ಸುಮಾರು 100  ಸಿಬ್ಬಂದಿಯನ್ನು ಅಫ್ಘಾನಿಸ್ತಾನದಿಂದ ಕಜಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ವಕ್ತಾರ ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿ
ಭದ್ರತಾ ಸಿಬ್ಬಂದಿ

ಕಾಬೂಲ್: ಕಾಬೂಲ್ ನಲ್ಲಿ ಭದ್ರತೆ ಮತ್ತಿತರ ನಿರ್ಬಂಧಗಳ ದೃಷ್ಟಿಯಿಂದ ತನ್ನ ಸುಮಾರು 100  ಸಿಬ್ಬಂದಿಯನ್ನು ಅಫ್ಘಾನಿಸ್ತಾನದಿಂದ ಕಜಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ವಕ್ತಾರ ತಿಳಿಸಿದ್ದಾರೆ.

 ಭಾನುವಾರ ತಾಲಿಬಾನ್ ಕ್ಷಿಪ್ರಗತಿಯಲ್ಲಿ ಅಫ್ಘಾನಿಸ್ತಾನವನ್ನು ತಕ್ಕೆ ತೆಕ್ಕೆಗೆ ತೆಗೆದುಕೊಂಡ ನಂತರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಉಂಟಾಗಿತ್ತು. ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ತಮ್ಮ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಕ್ಕೆ ಪ್ರಯತ್ನಿಸಿದ್ದವು.  

ಬುಧವಾರ ಸುಮಾರು 100 ವಿಶ್ವಸಂಸ್ಥೆ ಸಿಬ್ಬಂದಿ ಕಾಬೂಲ್‌ನಿಂದ ಅಲ್ಮಾಟಿಗೆ ಪ್ರಯಾಣ ಬೆಳೆಸಿತು, ಅಲ್ಲಿಂದಲೇ ಅವರು ತಮ್ಮ ಕೆಲಸವನ್ನು ಮುಂದುವರೆಸುತ್ತಾರೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಜನರಲ್ ಅಂಟೊನಿಯೊ ಗುಟೆರೆಸ್ ಸುದ್ದಿಗಾರರಿಗೆ ತಿಳಿಸಿದರು.

ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ನೆರವು ಕಾರ್ಯಾಚರಣೆಗೆ ತಾತ್ಕಾಲಿಕ ಕಚೇರಿಗೆ ಅವಕಾಶ ನೀಡಿದ್ದಕ್ಕೆ ಕಜಕಿಸ್ತಾನ್ ಸರ್ಕಾರಕ್ಕೆ ವಿಶ್ವಸಂಸ್ಥೆ ಧನ್ಯವಾದ ಸಲ್ಲಿಸಲಿದೆ.  ಪ್ರಧಾನ ಕಾರ್ಯದರ್ಶಿ ಆಗಸ್ಟ್ 16 ರಂದು ಭದ್ರತಾ ಮಂಡಳಿಗೆ ಹೇಳಿದಂತೆ, ಅಫ್ಘಾನಿಸ್ತಾದಲ್ಲಿ ವಿಶ್ವಸಂಸ್ಥೆಯ ಉಪಸ್ಥಿತಿಯು ಭದ್ರತಾ ಪರಿಸ್ಥಿತಿಗೆ ಹೊಂದಿಕೊಳ್ಳುತ್ತದೆ ಎಂದು ಡುಜಾರಿಕ್ ಹೇಳಿದರು.

ಈ ಸಮಯದಲ್ಲಿ ಕಾಬೂಲ್ ಮತ್ತು ದೇಶದ ಇತರ ಭಾಗಗಳಲ್ಲಿನ ಭದ್ರತೆ ಮತ್ತು ಇತರ ನಿರ್ಬಂಧಗಳ ಹಿನ್ನೆಲೆಯಲ್ಲಿ, ಯುಎನ್ ಸಿಬ್ಬಂದಿಯ ಒಂದು ಭಾಗವನ್ನು ದೇಶದಿಂದ ಹೊರಹಾಕಲು ನಿರ್ಧರಿಸಲಾಗಿದೆ. ಪರಿಸ್ಥಿತಿ ತಿಳಿಯಾದ ನಂತರ ಸಿಬ್ಬಂದಿ ಅಫ್ಘಾನಿಸ್ತಾನಕ್ಕೆ ಮರಳಲಿದ್ದಾರೆ ಎಂದು ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com