ಅಫ್ಘನ್ ತೊರೆಯಲು ಐಎಫ್ ಜೆಗೆ ಅರ್ಜಿ 2,000 ಪತ್ರಕರ್ತರ ಅರ್ಜಿ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ  ಉದ್ವಿಗ್ನ ಪರಿಸ್ಥಿತಿ   ಸೃಷಿಯಾಗಿರುವುದು  ಜಗತ್ತಿಗೆ ತಿಳಿದಿದೆ. ಇದರಿಂದ ಭಯ ಭೀತಗೊಂಡು ಸಾವಿರಾರು ನಾಗರೀಕರು  ದೇಶ  ತೊರೆಯಲು ಪ್ರಯತ್ನಿಸುತ್ತಿದ್ದಾರೆ. ಈ  ಭಾಗವಾಗಿ ಅಲ್ಲಿನ ಪತ್ರಕರ್ತರು ಕೂಡ ಅಫ್ಘಾನಿಸ್ತಾನ ತೊರೆಯಲು ತಯಾರಿ ನಡೆಸುತ್ತಿದ್ದಾರೆ.
ಅಫ್ಘನ್ ಪತ್ರಕರ್ತರು
ಅಫ್ಘನ್ ಪತ್ರಕರ್ತರು
Updated on

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ  ಉದ್ವಿಗ್ನ ಪರಿಸ್ಥಿತಿ   ಸೃಷಿಯಾಗಿರುವುದು  ಜಗತ್ತಿಗೆ ತಿಳಿದಿದೆ. ಇದರಿಂದ ಭಯ ಭೀತಗೊಂಡು ಸಾವಿರಾರು ನಾಗರೀಕರು  ದೇಶ  ತೊರೆಯಲು ಪ್ರಯತ್ನಿಸುತ್ತಿದ್ದಾರೆ. ಈ  ಭಾಗವಾಗಿ ಅಲ್ಲಿನ ಪತ್ರಕರ್ತರು ಕೂಡ ಅಫ್ಘಾನಿಸ್ತಾನ ತೊರೆಯಲು ತಯಾರಿ ನಡೆಸುತ್ತಿದ್ದಾರೆ. ಸುಮಾರು 2 ಸಾವಿರ ಮಂದಿ ಅಫ್ಘನ್‌ ಪತ್ರಕರ್ತರು  ದೇಶ ತೊರೆಯುವುದಾಗಿ ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟಕ್ಕೆ (ಐಎಫ್‌ಜೆ) ಅರ್ಜಿ ಸಲ್ಲಿಸಿದ್ದಾರೆ ಎಂದು  ಸಂಸ್ಥೆ ತಿಳಿಸಿದೆ.   

ಪತ್ರಕರ್ತರು ಕಾಬೂಲ್ ವಿಮಾನ ನಿಲ್ದಾಣವನ್ನು ಸುರಕ್ಷಿತವಾಗಿ ತಲುಪಲು  ರಕ್ಷಣೆ  ಕಲ್ಪಿಸುವಂತೆ  ಐಎಫ್‌ಜೆ ತಾಲಿಬಾನ್‌ಗಳನ್ನು ಸಂಪರ್ಕಿಸಿದೆ. ಅಮೆರಿಕಾ,ನ್ಯಾಟೋ   ಪಡೆಗಳ ವಾಪಸಾದ ನಂತರ  ಅಫ್ಘಾನಿಸ್ತಾನದಲ್ಲಿ  ಸೃಷ್ಟಿಯಾಗಿರುವ  ಪರಿಸ್ಥಿತಿಯ ಬಗ್ಗೆ ಎಲ್ಲಾ  ದೇಶಗಳು ಕಳವಳಗೊಂಡಿವೆ.  ಹಲವು ದೇಶಗಳು ಈಗಾಗಲೇ  ತನ್ನ  ನಾಗರೀಕರನ್ನು   ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. 

ಇತರ ದೇಶಗಳು ಆಗಸ್ಟ್ 31 ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಶ್ರಮಿಸುತ್ತಿವೆ. ಇದರ ಬೆನ್ನಲ್ಲೇ, ಅಫ್ಘಾನಿಸ್ತಾನದ ವಿವಿಧ ಮಾಧ್ಯಮ ಸಂಸ್ಥೆಗಳಿಂದ 2,000ಕ್ಕೂ  ಹೆಚ್ಚು  ಸಿಬ್ಬಂದಿ ಬೇರೆ ದೇಶಗಳಿಗೆ ಸ್ಥಳಾಂತರಗೊಳ್ಳಲು IFJ ಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ವೀಸಾ ನೀಡಬೇಕೆಂದು ಸ್ಪೇನ್, ಫ್ರಾನ್ಸ್, ಮೆಕ್ಸಿಕೋ, ಇಟಲಿ, ಜರ್ಮನಿ, ಬ್ರಿಟನ್, ಅಮೆರಿಕಾ, ಕೆನಡಾ  ಹಾಗೂ ಇತರ ಕೆಲವು ದೇಶಗಳಿಗೆ  IFJ ಮನವಿ ಮಾಡಿದೆ.

ಆದರೆ, ಪ್ರತಿಯೊಂದು ದೇಶ ಕೇವಲ 10 ರಿಂದ 15  ಮಂದಿ ಪತ್ರಕರ್ತರಿಗೆ ಮಾತ್ರ  ಆಶ್ರಯ ನೀಡಲು  ಆಸಕ್ತಿ ಹೊಂದಿವೆ.  ಅದೇ ಸಮಯದಲ್ಲಿ, ವಿದೇಶಗಳಿಗೆ ತೆರಳಲು  ಬಯಸಿರುವ  ಮಾಧ್ಯಮ ಪ್ರತಿನಿಧಿಗಳು  ವಿಮಾನ ನಿಲ್ದಾಣಕ್ಕೆ ಪ್ರವೇಶಿಸದಂತೆ ತಾಲಿಬಾನ್ ಸೈನ್ಯ  ಅಡ್ಡಿಪಡಿಸುತ್ತಿದೆ ಎಂದು ಐಎಫ್‌ಜೆ ಆರೋಪಿಸಿದೆ.  

ಈ ವಿಷಯದಲ್ಲಿ ಸಹಕಾರ ನೀಡುವಂತೆ  ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ತಾಲಿಬಾನ್‌ಗಳಿಗೆ  ಮನವಿ  ನೀಡಿದೆ.ಈ ನಡುವೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ಹೆಚ್ಚುತ್ತಿರುವ  ಸುದ್ದಿ ಜಗತ್ತನ್ನು ಆತಂಕಕ್ಕೀಡು ಮಾಡಿದೆ.  ಹಿಂಸಾ ಕೃತ್ಯಗಳನ್ನು ನಡೆಸುವುದಿಲ್ಲ ಎಂದು ಹೇಳುತ್ತಲೇ ನಾಗರಿಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸೆಲೆಬ್ರಿಟಿಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಹಲವಾರು ಸಂದರ್ಭಗಳಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ, ಇತ್ತೀಚೆಗೆ ಒಬ್ಬ ಜನಪದ ಗಾಯಕನನ್ನು ಕ್ರೂರವಾಗಿ ಕೊಲ್ಲಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com