ಪಾಕಿಸ್ತಾನದಲ್ಲಿ ಅಮೆರಿಕಾ ಸೇನಾ ಸಿಬ್ಬಂದಿಗಳ ವಾಸ್ತವ್ಯ ತಾತ್ಕಲಿಕವಷ್ಟೇ: ಸಚಿವ

ಆಫ್ಘಾನಿಸ್ತಾನದಿಂದ ವಾಪಸ್ಸಾಗುತ್ತಿರುವ ಅಮೆರಿಕ ಸೇನಾ ಸಿಬ್ಬಂದಿಗಳು ಪಾಕಿಸ್ತಾನಕ್ಕೆ ಆಗಮಿಸುತ್ತಿರುವುದರ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಈ ಬಗ್ಗೆ ಪಾಕಿಸ್ತಾನದ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಅಮೆರಿಕ ಸೇನಾ ಸಿಬ್ಬಂದಿಗಳು (ಸಂಗ್ರಹ ಚಿತ್ರ)
ಅಮೆರಿಕ ಸೇನಾ ಸಿಬ್ಬಂದಿಗಳು (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಆಫ್ಘಾನಿಸ್ತಾನದಿಂದ ವಾಪಸ್ಸಾಗುತ್ತಿರುವ ಅಮೆರಿಕ ಸೇನಾ ಸಿಬ್ಬಂದಿಗಳು ಪಾಕಿಸ್ತಾನಕ್ಕೆ ಆಗಮಿಸುತ್ತಿರುವುದರ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಈ ಬಗ್ಗೆ ಪಾಕಿಸ್ತಾನದ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಆಫ್ಘಾನಿಸ್ತಾನದಿಂದ ಬರುವ ಅಮೆರಿಕ ಸಿಬ್ಬಂದಿಗಳು ಪಾಕಿಸ್ತಾನದಲ್ಲಿ ದೀರ್ಘಾವಧಿವರೆಗೆ ಇರುತ್ತಾರೆ ಎಂಬ ಊಹಾಪೋಹಗಳನ್ನು ಸಚಿವರು ತಳ್ಳಿ ಹಾಕಿದ್ದಾರೆ. 

ಪಾಕಿಸ್ತಾನದಲ್ಲಿ ಅಮೆರಿಕ ಪಡೆಗಳ ವಾಸ್ತವ್ಯ ತಾತ್ಕಾಲಿಕವಾಗಿರಲಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ಅಹ್ಮದ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಮೆರಿಕ ಸೇನಾ ಸಿಬ್ಬಂದಿಗಳು ಪಾಕಿಸ್ತಾನಕ್ಕೆ ತಲುಪುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದಿಂದ ಬಂದಿರುವ ವಿದೇಶಿಗರಿಗೆ 21-30 ದಿನಗಳ ತಾತ್ಕಾಲಿಕ ವೀಸಾವನ್ನು ನೀಡಲಾಗಿದೆ ಎಂದೂ ಪಾಕ್ ಸಚಿವ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com