ಪ್ರಧಾನಿ ಇಮ್ರಾನ್ ಖಾನ್ ರನ್ನು ಟೀಕಿಸಿ ಸೆರ್ಬಿಯಾ ರಾಯಭಾರ ಕಚೇರಿ ಟ್ವೀಟ್, ಅಕೌಂಟ್ ಹ್ಯಾಕ್ ಆಗಿದೆ ಎಂದ ಪಾಕ್!

ದಾಖಲೆ ಪ್ರಮಾಣದ ಹಣದುಬ್ಬರ ಮತ್ತು ಕಳೆದ ಮೂರು ತಿಂಗಳಿನಿಂದ ಸಂಬಳ ಪಾವತಿಸದ ಆರೋಪ ಕುರಿತು ಪಾಕಿಸ್ತಾನ ಸರ್ಕಾರ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಟೀಕಿಸಿದ್ದ ವಿಡಿಯೋವನ್ನು ಸರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿತ್ತು
ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ದಾಖಲೆ ಪ್ರಮಾಣದ ಹಣದುಬ್ಬರ ಮತ್ತು ಕಳೆದ ಮೂರು ತಿಂಗಳಿನಿಂದ ಸಂಬಳ ಪಾವತಿಸದ ಆರೋಪ ಕುರಿತು ಪಾಕಿಸ್ತಾನ ಸರ್ಕಾರ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಟೀಕಿಸಿದ್ದ ವಿಡಿಯೋವನ್ನು ಸರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿತ್ತು. ಆದರೆ, ಇದರ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಪಾಕಿಸ್ತಾನ ಶುಕ್ರವಾರ ಹೇಳಿದೆ. 

ಇಮ್ರಾನ್ ಖಾನ್ ಅವರ ಘೋಷ ವಾಕ್ಯವಾಗಿರುವ 'ಘಬ್ರಾನಾ ನಹೀ ಹೈ (ನಾವು ಚಿಂತಿಸಬೇಕಾಗಿಲ್ಲ)  ಬಳಸಿಕೊಂಡು ಸರ್ಕಾರ ಎಲ್ಲಿ ಎಡವಿದೆ ಎಂಬುದನ್ನು ವಿಡಿಯೋದಲ್ಲಿ ವಿಮರ್ಶೆ ಮಾಡಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ, ಸರ್ಬಿಯಾದಲ್ಲಿರುವ ರಾಯಭಾರ ಕಚೇರಿಯ ಸಾಮಾಜಿಕ ತಾಣಗಳ ಖಾತೆಗಳು ಹ್ಯಾಕ್ ಆಗಿದ್ದು, ಪೋಸ್ಟ್ ಗಳನ್ನು ಈಗ ಡಿಲೀಟ್ ಮಾಡಲಾಗಿದೆ ಎಂದು ಹೇಳಿದೆ. ಟ್ವೀಟರ್ ಅಕೌಂಟ್ ಹ್ಯಾಕ್ ಆಗಿದೆ. ವಿದೇಶಿ ಕಚೇರಿಯೊಂದು ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಪ್ರಧಾನ ಮಂತ್ರಿಗಳ ಡಿಜಿಟಲ್ ಮಾಧ್ಯಮ ಸಹಚರ ಅರ್ಸ್ಲಾನ್ ಖಾಲಿದ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com