ಉರಿಯುತ್ತಿದ್ದ ಕ್ರೂಸ್ ಹಡಗಿನಿಂದ ಹಾರಿ ಜೀವ ಉಳಿಸಿಕೊಂಡ ದಂಪತಿ: ಉರಿದುಹೋದ 40 ಪ್ರಯಾಣಿಕರು

ನತದೃಷ್ಟ ಹಡಗಿನಲ್ಲಿ ಒಟ್ಟು 800 ಮಂದಿ ಪ್ರಯಾಣಿಕರಿದ್ದರು. ಅದರಲ್ಲಿ 40 ಮಂದಿ ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ. 
ನತದೃಷ್ಟ ಹಡಗು
ನತದೃಷ್ಟ ಹಡಗು
Updated on

ಧಾಕಾ: ಬಾಂಗ್ಲಾದೇಶದ ಸುಗಂಧ ನದಿಯಲ್ಲಿ ಅಗ್ನಿ ಅವಘಡಕ್ಕೆ ತುತ್ತಾದ ಹಡಗಿನಿಂದ ಪಾರಾಗಲು ಇಬ್ಬರು ದಂಪತಿ ಹಾರಿ ಜೀವ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. 

ಹಡಗಿನ ಮೂರನೇ ಮಹಡಿಯಿಂದ ದಂಪತಿ ನದಿಗೆ ಹಾರಿದ್ದರು. ಈ ಪ್ರಕ್ರಿಯೆಯಲ್ಲಿ ಪತ್ನಿ ಕಾಲು ಮುರಿದಿದೆ. ನತದೃಷ್ಟ ಹಡಗಿನಲ್ಲಿ ಒಟ್ಟು 800 ಮಂದಿ ಪ್ರಯಾಣಿಕರಿದ್ದರು. ಅದರಲ್ಲಿ 40 ಮಂದಿ ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ. 

ಉರಿಯುತ್ತಿದ್ದ ಹಡಗಿನಿಂದ ಹಾರಿ ಜೀವ ಉಳಿಸಿಕೊಂಡಿರುವ ದಂಪತಿ ಹಡಗಿನ ವಿಐಪಿ ಕ್ಯಾಬಿನ್ ನಲ್ಲಿ ಪ್ರಯಾಣಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com