ಪಾಕಿಸ್ತಾನ: ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿದ ದಕ್ಷಿಣ ಬಲೂಚಿಸ್ತಾನ ಪ್ರಾಂತ್ಯದ 70 ಅರೆಸೈನಿಕ ಪಡೆಗಳಿಗೆ ಅಮಾನತು ಶಿಕ್ಷೆ!

ಕೋವಿಡ್-19 ಲಸಿಕೆ ಪಡೆಯಲು ನಿರಾಕರಿಸಿದ್ದಕ್ಕಾಗಿ  70 ಅರೆ ಸೈನಿಕ ಪಡೆಗಳನ್ನು ಪಾಕಿಸ್ತಾನದ ಪ್ರಾಂತ್ಯವೊಂದು ವಜಾಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕ್ವೆಟ್ಟಾ:  ಕೋವಿಡ್-19 ಲಸಿಕೆ ಪಡೆಯಲು ನಿರಾಕರಿಸಿದ್ದಕ್ಕಾಗಿ  70 ಅರೆ ಸೈನಿಕ ಪಡೆಗಳನ್ನು ಪಾಕಿಸ್ತಾನದ ಪ್ರಾಂತ್ಯವೊಂದು ವಜಾಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಲಸಿಕೆ ಪಡೆಯುವಂತೆ ಮೌಖಿಕವಾಗಿ ಮತ್ತು ಲಿಖಿತವಾಗಿ ಪದೇ ಪದೇ ಹೇಳಿದ ನಂತರವೂ ಲಸಿಕೆ ಪಡೆಯಲು ನಿರಾಕರಿಸಿದ್ದಕ್ಕಾಗಿ ದಕ್ಷಿಣ ಬಲೂಚಿಸ್ತಾನ ಪ್ರಾಂತ್ಯದ ಅರೆಸೇನಾ ಪಡೆಗಳನ್ನು ಅಮಾನತು ಮಾಡಲಾಗಿದೆ ಎಂದು ಸ್ಥಳೀಯ  ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಅರೆ ಸೈನಿಕ ಪಡೆಗಳಿಗೆ ಸಂಬಳ ಕೂಡಾ ಪಾವತಿಸಿಲ್ಲ ಎಂದು ಹಿರಿಯ ಅಧಿಕಾರಿ ಹಬಿಬ್ ಅಹ್ಮದ್ ಬಂಗಲ್ಜೈ ಹೇಳಿದ್ದಾರೆ.

ಕಾನೂನು ಪಾಲನೆಗೆ ಪೊಲೀಸರಿಗೆ ಸಹಾಯ ಮಾಡುವ ಅರೆಸೈನಿಕ ಪಡೆ ಬಲೂಚಿಸ್ತಾನ್ ಲೆವೀಸ್‌ನ ಸೈನಿಕರು ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸರ್ಕಾರದ ಇನ್ನೊಬ್ಬ ಹಿರಿಯ ಅಧಿಕಾರಿ ವಾಲಿ ಬ್ರೀಚ್  ಕೂಡಾ ಅಮಾನತನ್ನು ದೃಢಪಡಿಸಿದ್ದಾರೆ. ರಾಷ್ಟ್ರೀಯ ಸರ್ಕಾರ ತನ್ನೆಲ್ಲಾ ನೌಕರರು ಲಸಿಕೆ ಪಡೆಯಬೇಕೆಂದು ಸಲಹೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com