ದುಬೈ: ಅರೇಬಿಯನ್ ಪೆನಿನ್ಸುಲಾದ ಪೂರ್ವ ಭಾಗದಲ್ಲಿ ಮಧ್ಯಪ್ರಾಚ್ಯದ ಅತ್ಯಂತ ಜನನಿಬಿಡವಾದ ನಿರ್ಣಾಯಕ ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿ ದೈತ್ಯ ಬೆಂಕಿ ಜ್ವಾಲೆಗಳು ಕಾಣಿಸಿದೆ.
ಹಡಗಿನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಪರಿಣಾಮ ಪಕ್ಕದ ಮೂರು ಮನೆಗಳ ಕಿಟಕಿ ಬಾಗಿಲು ಕಂಪಿಸಿವೆ ಎಂದು ವರದಿಯಾಗಿದೆ. ಉರಿಯುತ್ತಿರುವ ಬೆಂಕಿ ಚೆಂಡು ರಾತ್ರಿ ಆಕಾಶವನ್ನು ಬೆಳಗಿದಂತೆ ನಿವಾಸಿಗಳು ಭಯಭೀತರಾಗಿದ್ದಾರೆ.
ಹಡಗಿನಲ್ಲಿ ಸ್ಫೋಟ ಸಂಭವಿಸಿದ ನಂತರ ಕಂಟೈನರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ನಿಯಂತ್ರಣಕ್ಕೆ ತರಲಾಗಿದೆ.ಸದ್ಯ ಯಾವುದೇ ಜೀವ ಹಾನಿಯಾಗಿಲ್ಲ ಎಂದು ವರದಿಯಾಗಿದೆ ಸ್ಫೋಟದ ಸುಮಾರು ಎರಡೂವರೆ ಗಂಟೆಗಳ ನಂತರ, ದುಬೈನ ನಾಗರಿಕ ರಕ್ಷಣಾ ತಂಡಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ ಮತ್ತು ಬೆಂಕಿ ನಂದಿಸುವ ಕಾರ್ಯ ಪ್ರಾರಂಭಿಸಿವೆ. ಬೆಂಕಿ ಅನಾಹುತದಿಂದ ಬಂದರು ಮತ್ತು ಸುತ್ತಮುತ್ತಲಿನ ಸರಕುಗಳಿಗೆ ಎಷ್ಟು ಹಾನಿಯಾಗಿದೆ ಎಂದು ತಕ್ಷಣ ಸ್ಪಷ್ಟವಾಗಿಲ್ಲ
ದುಬೈನ ಉತ್ತರ ತುದಿಯಲ್ಲಿರುವ ಜೆಬೆಲ್ ಅಲಿ ಬಂದರು ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಆಳ ನೀರಿನಲ್ಲಿನ ಬಂದರು. ಭಾರತೀಯ ಉಪಖಂಡ, ಆಫ್ರಿಕಾ ಮತ್ತು ಏಷ್ಯಾದಿಂದ ಸರಕುಗಳು ಇಲ್ಲಿಗೆ ಆಗಮಿಸುತ್ತದೆ. ಬಂದರು ನಿರ್ಣಾಯಕ ಜಾಗತಿಕ ಸರಕು ಕೇಂದ್ರವಲ್ಲ, ಆದರೆ ದುಬೈ ಮತ್ತು ಸುತ್ತಮುತ್ತಲಿನ ಎಮಿರೇಟ್‌ಗಳಿಗೆ ಜೀವಸೆಲೆಯಾಗಿದ್ದು, ಅಗತ್ಯ ಆಮದುಗಳಿಗೆ ಪ್ರವೇಶ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
Advertisement