ದಕ್ಷಿಣ ಅಫ್ಘಾನಿಸ್ತಾನದಲ್ಲಿ 109 ತಾಲೀಬಾನ್ ಉಗ್ರರ ಹತ್ಯೆ

ಯುದ್ಧಗ್ರಸ್ತ ಆಪ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯದಲ್ಲಿ ಅಫ್ಘಾನಿಸ್ತಾನದ ರಕ್ಷಣಾ ಹಾಗೂ ಭದ್ರತಾ ಪಡೆಗಳು (ಎಎನ್ ಡಿಎಸ್ ಎಫ್) ನಡೆಸಿದ ದಾಳಿಗೆ 109 ಮಂದಿ ತಾಲೀಬಾನ್ ಉಗ್ರರು ಸಾವನ್ನಪ್ಪಿದ್ದು 25 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 
ತಾಲಿಬಾನ್ ಬಂಡುಕೋರರು
ತಾಲಿಬಾನ್ ಬಂಡುಕೋರರು

ಕಾಬೂಲ್: ಯುದ್ಧಗ್ರಸ್ತ ಆಪ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯದಲ್ಲಿ ಅಫ್ಘಾನಿಸ್ತಾನದ ರಕ್ಷಣಾ ಹಾಗೂ ಭದ್ರತಾ ಪಡೆಗಳು (ಎಎನ್ ಡಿಎಸ್ ಎಫ್) ನಡೆಸಿದ ದಾಳಿಗೆ 109 ಮಂದಿ ತಾಲೀಬಾನ್ ಉಗ್ರರು ಸಾವನ್ನಪ್ಪಿದ್ದು 25 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 

ಅಫ್ಘಾನ್ ನ 2 ದಕ್ಷಿಣ ಪ್ರಾಂತ್ಯದಲ್ಲಿ ನಡೆದಿರುವ ಈ ಘಟನೆಯನ್ನು ಸೇನೆ ಜು.10 ರಂದು ವರದಿ ಮಾಡಿದೆ.

ಕಂದಹಾರ್ ಪ್ರಾಂತ್ಯದಲ್ಲಿ 70 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದ್ದರೆ 8 ಮಂದಿ ಇತರರು ಗಾಯಗೊಂಡಿದ್ದಾರೆ. 

ಅಫ್ಘಾನ್ ವಾಯು ಪಡೆ (ಎಎಎಫ್) ನ ಸಹಕಾರದಲ್ಲಿ ಎಎನ್ ಡಿಎಸ್ ಎಫ್ ಈ ಕಾರ್ಯಾಚರಣೆ ನಡೆಸಿದೆ. 

ಪ್ರಾಂತೀಯ ರಾಜಧಾನಿ ಕಂದಹಾರ್ ನಗರದ ಪೊಲೀಸ್ ಜಿಲ್ಲೆ 7   ಹಾಗೂ ನೆರೆಯ ಸಬ್ ಅರ್ಬನ್ ದಾಂಡ್ ಜಿಲ್ಲೆಯಲ್ಲಿ  ಸೇನೆಯ ಕಾರ್ಯಾಚರಣೆ ಬಗ್ಗೆ ಸೇನೆಯ 205 ಅಟ್ಟಾಲ್ ಕಾರ್ಪ್ಸ್ ಹೇಳಿಕೆ ಬಿಡುಗಡೆ ಮಾಡಿದೆ. 

ಇದಕ್ಕೂ ಮುನ್ನ ಶುಕ್ರವಾರದಂದು ತಾಲೀಬಾನ್ ಎಎನ್ ಡಿಎಸ್ ಎಫ್ ನ ಸ್ಥಾನಗಳ ಮೇಲೆ ದಾಳಿ ನಡೆಸಿ ಕಂದಹಾರ್ ನಗರಕ್ಕೆ ನುಸುಳಲು ಯತ್ನಿಸಿತ್ತು. ಪರಿಣಾಮ ದಿನವಿಡೀ ಯುದ್ಧಗ್ರಸ್ತ ವಾತಾವರಣ ನಿರ್ಮಾಣವಾಗಿತ್ತು. 

ಈ ವೇಳೆ ಹೆಲ್ಮಾಂಡ್ ಪ್ರಾಂತ್ಯದಲ್ಲಿ 39 ತಾಲೀಬಾನ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು, ಕಾರ್ಯಾಚರಣೆಯಲ್ಲಿ 17 ಮಂದಿ ಗಾಯಗೊಂಡಿದ್ದರು. ಸ್ಥಳೀಯವಾಗಿ ತಾಲೀಬಾನ್ ಗೆ ಪ್ರಮುಖವಾಗಿದ್ದ  ಇಬ್ಬರು ನಾಯಕರನ್ನು ಹತ್ಯೆ ಮಾಡಲಾಗಿದೆ. 
 
ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಪೈಕಿ ಉಂಟಾಗಿರುವ ಪ್ರಾಣಹಾನಿಯ ಬಗ್ಗೆ ಈ ವರೆಗೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com