90 ವರ್ಷದ ಬೆಲ್ಜಿಯಂ ಮಹಿಳೆಗೆ ಏಕಕಾಲಕ್ಕೆ ಆಲ್ಫಾ, ಬೀಟಾ ಕೋವಿಡ್-19 ರೂಪಾಂತರಿ ಸೋಂಕು!

 90 ವರ್ಷದ ಬೆಲ್ಜಿಯನ್ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದು, ಆಲ್ಫಾ, ಬೀಟಾ ಕೋವಿಡ್-19 ಸೋಂಕು ಏಕ ಕಾಲಕ್ಕೆ ತಗುಲಿದೆ. 
ಕೊರೋನಾ ಸೋಂಕು
ಕೊರೋನಾ ಸೋಂಕು

ಬೆಲ್ಜಿಯಂ: 90 ವರ್ಷದ ಬೆಲ್ಜಿಯನ್ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದು, ಆಲ್ಫಾ, ಬೀಟಾ ಕೋವಿಡ್-19 ಸೋಂಕು ಏಕ ಕಾಲಕ್ಕೆ ತಗುಲಿದೆ. 

ಬೆಲ್ಜಿಯಂ ನ ಸಂಶೋಧಕರು ಈ ಬಗ್ಗೆ ಮಾಹಿತಿ ನೀಡಿದ್ದು ಇದೊಂದು ಅಪರೂಪದ ಪ್ರಕರಣವಾಗಿದೆ ಎಂದು ಹೇಳಿದ್ದಾರೆ. ಲಸಿಕೆ ಹಾಕಿಸಿಕೊಳ್ಳದ ಮಹಿಳೆಗೆ ಎರಡೂ ರೂಪಾಂತರಿ ಸೋಂಕು ತಗುಲಿದ್ದು, ಒಎಲ್ ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಗೆ ಮಾರ್ಚ್ ನಲ್ಲಿ ಕೋವಿಡ್-19 ಸೋಂಕು ತಗುಲಿತ್ತು.

ಪ್ರಾರಂಭಿಕ ಹಂತದಲ್ಲಿ ಆಕ್ಸಿಜನ್ ಮಟ್ಟ ಚೆನ್ನಾಗಿತ್ತು. ಏಕಾ ಏಕಿ ಅವರ ಆರೋಗ್ಯ ಹದಗೆಟ್ಟು 5 ದಿನದಲ್ಲಿ ಸಾವನ್ನಪ್ಪಿದರು ಎಂಬ ಮಾಹಿತಿ ಲಭ್ಯವಾಗಿದೆ. ಕೊರೋನಾ ಸೋಂಕಿನಲ್ಲಿರುವ ರೂಪಾಂತರಿಗಳ ಬಗ್ಗೆ ವೈದ್ಯಾಧಿಕಾರಿಗಳು ತಪಾಸಣೆ ಮಾಡಿದಾಗ ಆಕೆಯಲ್ಲಿ ಎರಡೂ ರೀತಿಯ ರೂಪಾಂತರಿಗಳಿರುವುದು ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com