
ನವದೆಹಲಿ: ಭಾರತದ ಕಲಾವಿದರಾದ ಅಮೃತ ಶೇರ್ಗಿಲ್ ಅವರ ಕಲಾಕೃತಿ ದಾಖಲೆಯ ಬೆಲೆಗೆ ಬಿಕರಿಯಾಗಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಎರಡನೇ ಕಲಾಕೃತಿ ಇದಾಗಿದ್ದು 37.8 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ.
ಸಾಫ್ರನ್ ಆರ್ಟ್ಸ್ ನ ಬೇಸಿಗೆ ಲೈವ್ ಹರಾಜಿನಲ್ಲಿ ಈ ಕಲಾಕೃತಿಯಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಸಾಫ್ರನ್ ಆರ್ಟ್ ಸೇಲ್ ನಲ್ಲಿ ಈ ವರ್ಷ 39.98 ಕೋಟಿಗಳಿಗೆ ಬಿಕರಿಯಾದ, 1961 ರಲ್ಲಿ ವಿಎಸ್ ಗೈಟೊಂಡೆ ಅವರ ಕಲಾಕೃತಿ ಅತಿ ಹೆಚ್ಚು ಬೆಲೆಗೆ ಜಾಗತಿಕವಾಗಿ ಮಾರಾಟವಾಗಿದ್ದ ಭಾರತದ ಕಲಾಕೃತಿಯಾಗಿತ್ತು.
1983 ರಲ್ಲಿ ಶೇರ್ ಗಿಲ್ ಅವರು ಭಾರತಕ್ಕೆ ವಾಪಸ್ಸಾದ ಕೆಲವು ವರ್ಷಗಳ ನಂತರ ರಚಿಸಿದ್ದ ಕಲಾಕೃತಿ ಇದಾಗಿದ್ದು ಗೋರಖ್ ಪುರದ ಎಸ್ಟೇಟ್ ನಲ್ಲಿ ರಚಿಸಲಾಗಿತ್ತು. ಕೃಷಿ ಭೂಮಿಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವ ಚಿತ್ರ ಇದಾಗಿದೆ.
Advertisement