ಕೋವಿಡ್ ನಿಂದ 10 ಕುಟುಂಬ ಸದಸ್ಯರನ್ನು ಕಳೆದುಕೊಂಡ ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ

ಕೋವಿಡ್-19 ಸಾಂಕ್ರಾಮಿಕದಿಂದ ಭಾರತ ಮತ್ತು ಅಮೆರಿಕಾದಲ್ಲಿ 10 ಕುಟುಂಬ ಸದಸ್ಯರನ್ನು ಕಳೆದು ಕೊಂಡಿರುವುದಾಗಿ ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಹೇಳಿದ್ದು, ಮಾರಕ ವೈರಾಣುವಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಮೆರಿಕ ಪ್ರಜೆಗಳು ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಡಾ. ವಿವೇಕ್ ಮೂರ್ತಿ
ಡಾ. ವಿವೇಕ್ ಮೂರ್ತಿ

ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕದಿಂದ ಭಾರತ ಮತ್ತು ಅಮೆರಿಕಾದಲ್ಲಿ 10 ಕುಟುಂಬ ಸದಸ್ಯರನ್ನು ಕಳೆದು ಕೊಂಡಿರುವುದಾಗಿ ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಹೇಳಿದ್ದು, ಮಾರಕ ವೈರಾಣುವಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಮೆರಿಕ ಪ್ರಜೆಗಳು ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ತಪ್ಪು ಮಾಹಿತಿಯ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದ ಭಾರತೀಯ-ಅಮೆರಿಕದ ತಜ್ಞ ವೈದ್ಯ ಡಾ. ವಿವೇಕ್ ಮೂರ್ತಿ, ಆರೋಗ್ಯ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೊದಲು ಅವುಗಳು ನಂಬಲಾರ್ಹ ವೈಜ್ಞಾನಿಕ ಮೂಲಗಳಿಂದ ಬೆಂಬಲಿತವಾಗಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.  ಈವರೆಗೂ 160 ಮಿಲಿಯನ್ ಅಮೆರಿಕನ್ನರು ಲಸಿಕೆ ಹಾಕಿಸಿಕೊಂಡಿರುವುದು ಒಳ್ಳೆಯ ಸುದ್ದಿ ಎಂದಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಲಕ್ಷಾಂತರ ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲ, ಇಂತಹ ಜನರಲ್ಲಿ ಹೆಚ್ಚಿನ ಸೋಂಕನ್ನು ನಾವು ನೋಡುತ್ತಿದ್ದೇವೆ. ಕೋವಿಡ್ ನಿಂದ ಸಂಭವಿಸಿದ ಪ್ರತಿಯೊಂದು ಸಾವುಗಳು ನೋವನ್ನುಂಟು ಮಾಡಿವೆ. ಯಾರೇ ಆಗಲೀ ಲಸಿಕೆ ಪಡೆದುಕೊಳ್ಳಲು ಅವಕಾಶ ಇರುವುದಾಗಿ ಅವರು ಹೇಳಿದರು. 

ಲಸಿಕೆಗೆ ಇನ್ನೂ ಅರ್ಹತೆ ಪಡೆಯದ ಇಬ್ಬರು ಚಿಕ್ಕ ಮಕ್ಕಳ ತಂದೆಯಾಗಿ ನಾನು ನೋಡುತ್ತೇನೆ. ಆದರೆ, ಈ ವೈರಸ್‌ನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯಲು ನಮ್ಮ ಮಕ್ಕಳು ನಮ್ಮೆಲ್ಲರನ್ನೂ ಅವಲಂಬಿಸಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಡಾ. ವಿವೇಕ್ ಮೂರ್ತಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com