ನಜರ್ ಮೊಹಮ್ಮದ್
ವಿದೇಶ
ಆಫ್ಘಾನಿಸ್ತಾನದಲ್ಲಿ ಖ್ಯಾತ ಹಾಸ್ಯನಟ ನಜರ್ ಮೊಹಮ್ಮದ್ ಬರ್ಬರ ಹತ್ಯೆ
ಆಫ್ಘಾನಿಸ್ಥಾನದ ಕಂದಹಾರ್ ಪ್ರಾಂತ್ಯದಲ್ಲಿ ಖ್ಯಾತ ಹಾಸ್ಯ ನಟ ನಜರ್ ಮೊಹಮ್ಮದ್ ಅವರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಜರ್ ಈ ಹಿಂದೆ ಸ್ಥಳಿಯ ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಕಾಬೂಲ್: ಆಫ್ಘಾನಿಸ್ಥಾನದ ಕಂದಹಾರ್ ಪ್ರಾಂತ್ಯದಲ್ಲಿ ಖ್ಯಾತ ಹಾಸ್ಯ ನಟ ನಜರ್ ಮೊಹಮ್ಮದ್ ಅವರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಜರ್ ಈ ಹಿಂದೆ ಸ್ಥಳಿಯ ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ನಜರ್ ಮೊಹಮ್ಮದ್ ಹತ್ಯೆಯನ್ನು ಆನೇಕ ದೇಶಗಳು ಖಂಡಿಸಿವೆ. ಕಂದಹಾರ್ ನ ಅವರ ನಿವಾಸದ ಸಮೀಪದಲ್ಲೇ ಹತ್ಯೆ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ರಾತ್ರಿ ನಜರ್ ನಿವಾಸಕ್ಕೆ ಬಂದ ದುಷ್ಕರ್ಮಿಗಳು ನಜರ್ ಅವರನ್ನು ಕರೆದೊಯ್ದು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನ್ ಭದ್ರತಾ ಪಡೆಗಳ ಮೇಲೆ ತಾಲಿಬಾನ್ ದಾಳಿ ತೀವ್ರಗೊಳಿಸಿದ್ದು, ಈಗಾಗಲೇ ಕಂದಹಾರ್ ಪ್ರಾಂತ್ಯದ ಶೇ. 70ರಷ್ಟು ವಶಪಡಿಸಿಕೊಂಡಿರುವುದಾಗಿ ಉಗ್ರ ಸಂಘಟನೆ ಘೋಷಣೆ ಮಾಡಿದೆ.
ಕಂದಹಾರ್ ಪ್ರಾಂತ್ಯದಲ್ಲಿ ನೆಲೆಸಿದ್ದ ಕುಟುಂಬಗಳು ಪಲಾಯನ ಮಾಡುತ್ತಿದ್ದು, ಅಫ್ಘನ್ ಸರ್ಕಾರ ಸ್ಥಾಪಿಸಿದ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ