ಜೋ ಬೈಡನ್ ನನ್ನನ್ನು 'ಕೊಲೆಗೆಡುಕ' ಎಂದಿದ್ದಕ್ಕೆ ನನಗೆ ಚಿಂತೆಯಿಲ್ಲ: ವ್ಲಾಡಿಮಿರ್ ಪುಟಿನ್

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮನ್ನು ʼಹಂತಕʼ ಎಂದು ಕರೆದಿದ್ದರ ಬಗ್ಗೆ ತಾವು ಹೆಚ್ಚು ಚಿಂತಿಸಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಹೇಳಿದ್ದಾರೆ.
ವ್ಲಾಡಿಮಿರ್ ಪುಟಿನ್
ವ್ಲಾಡಿಮಿರ್ ಪುಟಿನ್
Updated on

ವಾಷಿಂಗ್ಟನ್:  ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮನ್ನು ʼಹಂತಕʼ ಎಂದು ಕರೆದಿದ್ದರ ಬಗ್ಗೆ ತಾವು ಹೆಚ್ಚು ಚಿಂತಿಸಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಹೇಳಿದ್ದಾರೆ.

ನನ್ನ ಆಡಳಿತಾವಧಿಯಲ್ಲಿ, ಎಲ್ಲಾ ರೀತಿಯ ಕಾರಣಗಳು ಮತ್ತು ನೆಪಗಳಿಂದಾಗಿ ನಾನು ಎಲ್ಲಾ ಆಯಾಮಗಳಿಂದ, ಕ್ಷೇತ್ರಗಳಿಂದ ದಾಳಿ ಎದುರಿಸಿದ್ದೇನೆ. ಇದ್ಯಾವುದೂ ನನ್ನನ್ನು ಅಚ್ಚರಿಗೊಳಿಸಿಲ್ಲʼ ಎಂದು ಪುಟಿನ್‌ ಹೇಳಿದ್ದಾರೆ.

ಈ ವೇಳೆ ರಷ್ಯಾ-ಅಮೆರಿಕ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳ ಸಂಬಂಧ ತೀರಾ ಕೆಳಮಟ್ಟದಲ್ಲಿದೆ ಎಂದಿದ್ದಾರೆ.

ಯುಎಸ್‌ ಮಾಜಿ ಅಧ್ಯಕ್ಷ ಟ್ರಂಪ್‌ ಅಸಾಧಾರಣ ಮತ್ತು ಪ್ರತಿಭಾವಂತ ವ್ಯಕ್ತಿ ಎಂದು ನಾನು ಈಗಲೂ ನಂಬುತ್ತೇನೆ. ಇಲ್ಲದಿದ್ದರೆ ಅವರು ಅಮೆರಿಕದ ಅಧ್ಯಕ್ಷರಾಗುತ್ತಿರಲಿಲ್ಲ. ಅವರದು ವರ್ಣರಂಜಿತ ವ್ಯಕ್ತಿತ್ವ. ನೀವು ಅವರನ್ನು ಇಷ್ಟಪಡಬಹುದು ಅಥವಾ ಇಷ್ಟಪಡದೆಯೂ ಇರಬಹುದು. ಈ ಹಿಂದೆ ಅವರೇನು ತುಂಬಾ ಕಾಲದಿಂದ ರಾಜಕೀಯದಲ್ಲಿ ಇದ್ದವರಲ್ಲ. ಕೆಲವರು ಅವರನ್ನು ಇಷ್ಟಪಡುತ್ತಾರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ. ಆದರೆ ಅದೇ ವಾಸ್ತವʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com