ಕಬಾ ಸುತ್ತಲೂ ಪ್ರಾರ್ಥನೆ ಸಲ್ಲಿಸುತ್ತಿರುವ ಮುಸ್ಲಿಂರು
ಕಬಾ ಸುತ್ತಲೂ ಪ್ರಾರ್ಥನೆ ಸಲ್ಲಿಸುತ್ತಿರುವ ಮುಸ್ಲಿಂರು

ಈ ಬಾರಿ 60 ಸಾವಿರ ಹಜ್ ಯಾತ್ರಿಕರಿಗೆ ಮಾತ್ರ ಅವಕಾಶ: ಸೌದಿ ಅರೇಬಿಯಾ

ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಈ ಬಾರಿ ಹಜ್ ಯಾತ್ರಿಕರ ಸಂಖ್ಯೆಯನ್ನು 60 ಸಾವಿರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

ದುಬೈ: ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಈ ಬಾರಿ ಹಜ್ ಯಾತ್ರಿಕರ ಸಂಖ್ಯೆಯನ್ನು 60 ಸಾವಿರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಅವರೆಲ್ಲರೂ ರಾಷ್ಟ್ರದ ಒಳಗಿನವರು ಆಗಿರುತ್ತಾರೆ ಎಂದು ಸೌದಿ ಅರೇಬಿಯಾ ಹೇಳಿದೆ. ಸೌದಿ ಅರೇಬಿಯಾ ಕಿಂಗ್ ಡಮ್ ಶನಿವಾರ ಈ ಪ್ರಕಟಣೆ ಹೊರಡಿಸಿರುವುದಾಗಿ ಅದರ ಸರ್ಕಾರಿ ಮಾಧ್ಯಮ ಏಜೆನ್ಸಿಯೊಂದು ತಿಳಿಸಿದೆ.

ಹಜ್ ಸಚಿವಾಲಯ ಮತ್ತು ಉಮ್ರಾ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ. ಕಳೆದ ವರ್ಷ ಹಜ್ ಯಾತ್ರೆಗಾಗಿ ಆಯ್ಕೆಯಾಗಿರುವ 1 ಸಾವಿರ ಜನರು ಈಗಾಗಲೇ ಸೌದಿ ಅರೇಬಿಯಾ ಸುತ್ತಮುತ್ತ ಇದ್ದಾರೆ. 

160 ವಿವಿಧ ರಾಷ್ಟ್ರಗಳ ಮೂರನೇ ಎರಡರಷ್ಟು ವಿದೇಶಿ ನಿವಾಸಿಗಳು ಸಾಮಾನ್ಯವಾಗಿ ಹಜ್ ಪ್ರತಿನಿಧಿಸುತ್ತಿದ್ದರು. ಮೂರನೇ ಒಂದನೇ ರಷ್ಟು ಸೌದಿ ಅರೇಬಿಯಾದ ಭದ್ರತಾ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಯೂ ಇದ್ದಾರೆ. ಜುಲೈ ಮಧ್ಯ ಭಾಗದಿಂದ ಹಜ್ ಆರಂಭವಾಗಲಿದೆ.

Related Stories

No stories found.

Advertisement

X
Kannada Prabha
www.kannadaprabha.com