ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ: ವಿವಿಧ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಯಿದ್ದ ಕಟ್ಟಡ ಧ್ವಂಸ!

ಗಾಜಾದಲ್ಲಿ ಶುಕ್ರವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ದಿ ಅಸೋಸಿಯೇಟೆಡ್ ಪ್ರೆಸ್ ಮತ್ತಿತರ ಮಾಧ್ಯಮಗಳಕಚೇರಿಯಿದ್ದ ಬೃಹತ್ ಅಂತಸ್ತಿನ ಕಟ್ಟಡ ಧ್ವಂಸಗೊಂಡಿದೆ.ಹಮಾಸ್ ಬಂಡುಕೋರರ ನಡುವಿನ ಹೋರಾಟದ ಮಧ್ಯೆ ಭೂಪ್ರದೇಶದಿಂದ ವರದಿಯನ್ನು ಮೌನಗೊಳಿಸಲು ಇಸ್ರೇಲ್ ಮಿಲಿಟರಿ ಹೊಸ ಹೆಜ್ಜೆ ಇಟ್ಟಿದೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಧ್ವಂಸಗೊಂಡ ಕಟ್ಟಡ
ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಧ್ವಂಸಗೊಂಡ ಕಟ್ಟಡ
Updated on

ಗಾಜಾ: ಗಾಜಾದಲ್ಲಿ ಶುಕ್ರವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ದಿ ಅಸೋಸಿಯೇಟೆಡ್ ಪ್ರೆಸ್ ಮತ್ತಿತರ ಮಾಧ್ಯಮಗಳ
ಕಚೇರಿಯಿದ್ದ ಬೃಹತ್ ಅಂತಸ್ತಿನ ಕಟ್ಟಡ ಧ್ವಂಸಗೊಂಡಿದೆ.ಹಮಾಸ್ ಬಂಡುಕೋರರ ನಡುವಿನ ಹೋರಾಟದ ಮಧ್ಯೆ ಭೂಪ್ರದೇಶದಿಂದ ವರದಿಯನ್ನು ಮೌನಗೊಳಿಸಲು ಇಸ್ರೇಲ್ ಮಿಲಿಟರಿ ಹೊಸ ಹೆಜ್ಜೆ ಇಟ್ಟಿದೆ.

ಅಲ್ ಜಜೀರಾ ಮತ್ತಿತರ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿ ಹಾಗೂ ಅಪಾರ್ಟ್ ಮೆಂಟ್ ಗಳಿದ್ದ ಕಟ್ಟಡ ತೆರವು ಮಾಡುವಂತೆ
ಮಿಲಿಟರಿ ಆದೇಶ ನೀಡಿದ ಒಂದು ಗಂಟೆಯ ನಂತರ ವೈಮಾನಿಕ ದಾಳಿ ನಡೆಸಲಾಗಿದೆ.ಈ ದಾಳಿಯಲ್ಲಿ 12 ಅಂತಸ್ತಿನ ಕಟ್ಟಡವನ್ನು
ಧ್ವಂಸಗೊಳಿಸಲಾಗಿದೆ. ಆದರೆ, ಏಕೆ ಈ ದಾಳಿ ನಡೆಸಲಾಯಿತು ಎಂಬುದರ ಬಗ್ಗೆ ತತ್ ಕ್ಷಣದ ಮಾಹಿತಿಯನ್ನು ನೀಡಿಲ್ಲ.

ಈ ದಾಳಿ ನಂತರ ಗಾಜಾದಲ್ಲಿನ ಜನ ಸಾಂದ್ರತೆ ಹೆಚ್ಚಿನ ಮತ್ತೊಂದು ಪ್ರದೇಶದಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 10 ಪ್ಯಾಲೆಸ್ತೇನಿಯನ್ನರು  ಸಾವನ್ನಪ್ಪಿದ್ದಾರೆ. ಇತ್ತೀಚಿಗೆ ಜೆರುಸೆಲೆಂನಲ್ಲಿ ಹಿಂಸಾಚಾರ ಉಂಟಾಗಿ, ನಂತರ ಇತರೆಡೆಗೂ ಹರಡಿತು. ಆಕ್ರಮಿತ ಪಶ್ಚಿಮ ದಂಡೆಯಲ್ಲಿ  ಶುಕ್ರವಾರ ವ್ಯಾಪಕವಾಗಿ ಪ್ಯಾಲೆಸ್ತೇನಿಯರು ಪ್ರತಿಭಟನೆ ನಡೆಸಿದರು. ಅಲ್ಲಿ ಇಸ್ರೇಲಿ ಪಡೆಗಳು 11 ಜನರನ್ನು ಗುಂಡಿಕ್ಕಿ ಕೊಂದವು.

ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಮಧ್ಯ ಪ್ರಸ್ತುತ ಉಂಟಾಗಿರುವ ಬಿಕ್ಕಟ್ಟು ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಸಂಘರ್ಷವನ್ನು
ಕಡಿಮೆಗೊಳಿಸುವ ಅಮೆರಿಕದ ಪ್ರಯತ್ನದ ಭಾಗವಾಗಿ ಅಮೆರಿಕದ ರಾಯಬಾರಿ ಹಾಡಿ ಅಮರ್  ಶುಕ್ರವಾರವೇ ಗಾಜಾ ಆಗಮಿಸಿದ್ದರು. ಭಾನುವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಸೇರಲು ನಿರ್ಧರಿಸಲಾಗಿತ್ತು. ಆದರೆ,ಈಜಿಪ್ಟ್ ಪ್ರಸ್ತಾಪಿಸಿದ ಒಂದು ವರ್ಷದ ಒಪ್ಪಂದವನ್ನು ಹಮಾಸ್ ಆಡಳಿತಗಾರರು ಒಪ್ಪಿಕೊಂಡಿದ್ದರೂ ಇಸ್ರೇಲ್ ತಿರಸ್ಕರಿಸಿದೆ ಎಂದು ಈಜಿಪ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ರಾತ್ರಿಯಿಂದಲೂ ಹಮಾಸ್ ಬಂಡುಕೋರರು ಇಸ್ರೇಲ್ ವಿರುದ್ಧ ನೂರಾರು ರಾಕೆಟ್ ದಾಳಿ ನಡೆಸಿದ್ದರಿಂದ ಇದೀಗ
ಇಸ್ರೇಲ್ ಗಾಜಾದಲ್ಲಿ ವೈಮಾನಿಕ ದಾಳಿ ನಡೆಸಿದೆ. ಗಾಜಾದಲ್ಲಿ 39 ಮಕ್ಕಳು, 22 ಮಹಿಳೆಯರು ಸೇರಿದಂತೆ 
ಒಟ್ಟಾರೇ 139 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ನಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ತೇಲ್ ಅವಿವ್ ವರದಿ ಮಾಡಿದೆ.

ವೈಮಾನಿಕ ದಾಳಿ ನಡೆಸುವುದಾಗಿ ಇಸ್ರೇಲ್ ಮಿಲಿಟರಿ ಪಡೆಗಳಿಂದ ಕಟ್ಟಡದ ಮಾಲೀಕರು ಎಚ್ಚರಿಕೆ ಸಂದೇಶ ಪಡೆದ  
ನಂತರ ಅಸೋಸಿಯೇಟೆಡ್ ಪ್ರೆಸ್ ಮತ್ತಿತರರು ಕಟ್ಟಡವನ್ನು ತೆರವುಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com