ತಾಲಿಬಾನ್ ವಶವಾದಾಗಿನಿಂದ ಅಫ್ಘಾನಿಸ್ತಾನದಲ್ಲಿ ಶೇ.50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಬಂದ್!

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಾಗಿನಿಂದ ಕಳೆದ ಮೂರು ತಿಂಗಳಲ್ಲಿ ಶೇ. 50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಮುಚ್ಚಲ್ಪಟ್ಟಿರುವುದಾಗಿ ಖಾಸಗಿ ಶಿಕ್ಷಣ ಕೇಂದ್ರಗಳ ಯೂನಿಯನ್ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತಾಲಿಬಾನ್ ಹೋರಾಟಗಾರರು
ತಾಲಿಬಾನ್ ಹೋರಾಟಗಾರರು
Updated on

ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಾಗಿನಿಂದ ಕಳೆದ ಮೂರು ತಿಂಗಳಲ್ಲಿ ಶೇ. 50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಮುಚ್ಚಲ್ಪಟ್ಟಿರುವುದಾಗಿ ಖಾಸಗಿ ಶಿಕ್ಷಣ ಕೇಂದ್ರಗಳ ಯೂನಿಯನ್ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಯೂನಿಯನ್ ಪ್ರಕಾರ, ಕುಟುಂಬಗಳ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚಲು ಪ್ರಮುಖ ಕಾರಣವಾಗಿದೆ. ಅಫ್ಘಾನಿಸ್ತಾನದಲ್ಲಿ ಆಡಳಿತ ಬದಲಾವಣೆ ನಂತರ ಶೇಕಡ 40 ರಿಂದ 50 ರಷ್ಟು ಶಿಕ್ಷಣ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿವೆ. ಇದರಿಂದಾಗಿ ಶಿಕ್ಷಣ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿರುವುದಾಗಿ ಯೂನಿಯನ್ ಮುಖ್ಯಸ್ಥ ಸಂಜರ್ ಖಲೀದ್ ಹೇಳಿದ್ದಾರೆ. 

ಶಿಕ್ಷಣವನ್ನು ಮುಂದುವರೆಸಲು ತಮ್ಮ ಆತ್ಮಸ್ಥೈರ್ಯದ ಮೇಲೆ ಹೆಚ್ಚಿನ ಸಮಯ ಪರಿಣಾಮ ಬೀರಲಿದೆ ಎಂದು ಕೆಲ ವಿದ್ಯಾರ್ಥಿಗಳು ಹೇಳಿದ್ದಾರೆ. ಶಿಕ್ಷಣದಿಂದ ದೇಶವನ್ನು ರಕ್ಷಿಸುವ ವ್ಯಕ್ತಿಯಾಗಬಹುದು ಎಂಬ ವಿಶ್ವಾಸ ಈಗಲೂ ಇದೆ ಎಂದು ವಿದ್ಯಾರ್ಥಿಯೊಬ್ಬ ಟೊಲೊ ನ್ಯೂಸ್ ಗೆ ಹೇಳಿದ್ದಾರೆ. ಮುಂದಿನ ವರ್ಷ ಶಾಲೆಗೆ ಹೋಗಬೇಕೆ ಅಥವಾ ಬೇಡವೇ ಎಂಬುದು ಇನ್ನೂ ದೃಢವಾಗಿಲ್ಲ ಎಂದು ಮತ್ತೋರ್ವ ವಿದ್ಯಾರ್ಥಿ ನಾಜಿಯಾ ಸರ್ವಾರಿ ಹೇಳಿದ್ದಾರೆ.

ಕಳೆದ ವರ್ಷ 34 ಪ್ರಾಂತ್ಯಗಳಿಂದ 200,000 ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ತಾಲಿಬಾನ್ ಅಧಿಕಾರಕ್ಕೆ ಬಂದ ಮೇಲೆ ಅನೇಕ ಪ್ರಾಂತ್ಯಗಳಲ್ಲಿ 7-12 ಗ್ರೇಡ್ ಗಳಲ್ಲಿ ಹುಡುಗಿಯರು ಭಾಗವಹಿಸುವುದನ್ನು ನಿಷೇಧಿಸಲಾಗಿದೆ ಎಂದು ಟೊಲೊ ನ್ಯೂಸ್ ವರದಿ ಮಾಡಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com