ಯಾವುದೇ ಅಪಾಯ ಬೇಡವೆಂದಾದರೆ ನಮ್ಮ ಸರ್ಕಾರವನ್ನು ಅಂಗೀಕರಿಸಿ: ಜಾಗತಿಕ ಸಮುದಾಯಕ್ಕೆ ತಾಲೀಬಾನ್ ಬೆದರಿಕೆ

"ಅಫ್ಘಾನಿಸ್ತಾನದಿಂದ ಯಾವುದೇ ಅಪಾಯವೂ ಎದುರಾಗಬಾರದೆಂದರೆ ತಮ್ಮ ನೇತೃತ್ವದ ಸರ್ಕಾರವನ್ನು ಮಾನ್ಯ ಮಾಡಿ ಅಂಗೀಕರಿಸಿ" ಎಂದು ಜಾಗತಿಕ ಸಮುದಾಯಕ್ಕೆ ತಾಲೀಬಾನ್ ಎಚ್ಚರಿಕೆ ನೀಡಿದೆ.
ತಾಲೀಬಾನ್
ತಾಲೀಬಾನ್

 ಕಾಬೂಲ್: "ಅಫ್ಘಾನಿಸ್ತಾನದಿಂದ ಯಾವುದೇ ಅಪಾಯವೂ ಎದುರಾಗಬಾರದೆಂದರೆ ತಮ್ಮ ನೇತೃತ್ವದ ಸರ್ಕಾರವನ್ನು ಮಾನ್ಯ ಮಾಡಿ ಅಂಗೀಕರಿಸಿ" ಎಂದು ಜಾಗತಿಕ ಸಮುದಾಯಕ್ಕೆ ತಾಲೀಬಾನ್ ಎಚ್ಚರಿಕೆ ನೀಡಿದೆ. 

ತಾಲೀಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ತಮ್ಮನ್ನು ಜವಾಬ್ದಾರಿಯುತ ವ್ಯವಸ್ಥೆಯನ್ನಾಗಿ ಗುರುತಿಸಬೇಕಾಗಿದೆ ಎಂದು ಹೇಳಿದ್ದಾರೆ. 

ಅಫ್ಘಾನಿಸ್ತಾನ ತಾಲೀಬಾನ್ ಕೈವಶವಾಗಿ ಎರಡು ತಿಂಗಳುಗಳು ಕಳೆದಿವೆ. ಚೀನಾ, ಪಾಕಿಸ್ತಾನ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವೂ ತಾಲೀಬಾನ್ ಸರ್ಕಾರವನ್ನು ಮಾನ್ಯ ಮಾಡಿ ಅಂಗೀಕರಿಸುವ ಉತ್ಸಾಹವನ್ನಾಗಲೀ ತಾಲೀಬಾನ್ ಜೊತೆಗೆ ಮಾತುಕತೆ ನಡೆಸುವುದಕ್ಕೆ ಮುಂದಾಗುವ ಸೂಚನೆಯನ್ನಾಗಲೀ ನೀಡಿಲ್ಲ.

ಅಂತಾರಾಷ್ಟ್ರೀಯ ಸಮುದಾಯ ಈಗ ಅಫ್ಘಾನಿಸ್ತಾನದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಹಾಗೂ ಬಿಕ್ಕಟ್ಟಿನ ವಿಷಯಗಳತ್ತ ಗಮನ ಕೇಂದ್ರೀಕರಿಸುತ್ತಿದ್ದು, ಕಾದು ನೋಡುತ್ತಿವೆ. 

ಈ ನಡುವೆ ತಾಲೀಬಾನ್ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಅಂತಾರಾಷ್ಟ್ರೀಯ ಸಮುದಾಯ ತಮ್ಮನ್ನು ಮಾನ್ಯ ಮಾಡುವವರೆಗೂ ಅಫ್ಘಾನಿಸ್ತಾನದಿಂದ ಬೇರೆ ಯಾವುದೇ ರಾಷ್ಟ್ರಗಳಿಗೆ ಬರುವ ಬೆದರಿಕೆಯ ವಿಷಯದ ಬಗ್ಗೆ ಯಾವುದೇ ಜವಾಬ್ದಾರಿಯನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಎಚ್ಚರಿಸಿದೆ. 

ನಮ್ಮನ್ನು ಅಂಗೀಕರಿಸದ ಕಾರಣಕ್ಕಾಗಿ ನಾವು ಅಮೆರಿಕ ವಿರುದ್ಧ ಹೋರಾಡಿದೆವು, ತಾಲೀಬಾನ್ ನ್ನು ಮಾನ್ಯ ಮಾಡದೇ ಇದ್ದಲ್ಲಿ ಅಫ್ಘಾನಿಸ್ತಾನ, ಪ್ರಾಂತೀಯ, ಜಾಗತಿಕ ಮಟ್ಟದಲ್ಲಿ ಸಮಸ್ಯೆ ಹೆಚ್ಚಳವಾಗುತ್ತದೆ ಎಂದು ತಾಲೀಬಾನ್ ವಕ್ತಾರರು ಹೇಳ್ದಿದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com