ತಾಲಿಬಾನ್ ಸುಪ್ರೀಮ್ ಲೀಡರ್ ಮತ್ತೆ ಪ್ರತ್ಯಕ್ಷ! ಕಂದಾಹಾರ್ ನಲ್ಲಿ ಸಭೆ

ತೆರೆಮರೆಯಲ್ಲಿ ಭಯೋತ್ಪಾದನೆ ಸಂಘಟನೆಯನ್ನು ಕಟ್ಟಿದ ತಾಲಿಬಾನ್ ಸುಪ್ರೀಂ ಲೀಡರ್ ಮುಲ್ಲಾ ಹೈಬತುಲ್ಲಾ ಅಖುಂದ್ಜಾದ ಮೊದಲ ಬಾರಿಗೆ ವಿಶ್ವದ ಮುಂದೆ ಪ್ರತ್ಯಕ್ಷನಾಗಿದ್ದಾನೆ. 
ಮುಲ್ಲಾ ಹೈಬತುಲ್ಲಾ ಅಖುಂದ್ಜಾದ
ಮುಲ್ಲಾ ಹೈಬತುಲ್ಲಾ ಅಖುಂದ್ಜಾದ

ಕಾಬೂಲ್:  ತೆರೆಮರೆಯಲ್ಲಿ ಭಯೋತ್ಪಾದನೆ ಸಂಘಟನೆಯನ್ನು ಕಟ್ಟಿದ ತಾಲಿಬಾನ್ ಸುಪ್ರೀಂ ಲೀಡರ್ ಮುಲ್ಲಾ ಹೈಬತುಲ್ಲಾ ಅಖುಂದ್ಜಾದ ಮೊದಲ ಬಾರಿಗೆ ವಿಶ್ವದ ಮುಂದೆ ಪ್ರತ್ಯಕ್ಷನಾಗಿದ್ದಾನೆ. 

ತಾಲಿಬಾನ್ ಅಧಿಕಾರಿಗಳು ಇಂದು ನೀಡಿದ ಹೇಳಿಕೆ ಪ್ರಕಾರ, ಅಫ್ಘಾನಿಸ್ಥಾನದ ಕಂದಾಹಾರ್ ನಲ್ಲಿ ಅಖುಂದ್ಜಾದ, ಹೋರಾಟಗಾರರನ್ನು ಭೇಟಿಯಾಗಿದ್ದರು. ಅಲ್ಲದೆ, ಅವರನ್ನು ಉದ್ದೇಶಿಸಿ ಅಖುಂದ್ಜಾದ ಭಾಷಣ ಮಾಡಿದ್ದಾರೆ ಅಂತಾ ತಿಳಿಸಿದ್ದಾರೆ.

ಆಗಸ್ಟ್ 15ರ ನಂತರ ತಾಲಿಬಾನಿಗಳು ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬಳಿಕ, ಅಖುಂದ್ಜಾದ ಸಾವಿನ ಬಗ್ಗೆ ವದಂತಿಗಳು ಹಬ್ಬಿದ್ದವು. ಅಲ್ಲದೆ, ಹೈಬುತುಲ್ಲಾ ಅಖುಂದ್ಜಾದ ಯಾರಿಗೂ ಕಾಣಿಸಿಕೊಂಡಿರಲಿಲ್ಲ. 

ದೋಹಾದಲ್ಲಿ ಅಮೆರಿಕ, ಪಾಕಿಸ್ತಾನ, ಭಾರತ, ರಷ್ಯಾದೊಂದಿಗೆ ನಡೆಯುತ್ತಿದ್ದ ಮಾತುಗಳಲ್ಲಿಯೂ ಆತ ಪಾಲ್ಗೊಂಡಿರಲಿಲ್ಲ. ಅಫ್ಘಾನಿಸ್ತಾನ ಕೈವಶವಾದ ಮೇಲೆ ಸರ್ಕಾರ ರಚಿಸುವ ಬಗ್ಗೆ ಸಂಘಟನೆಯಲ್ಲಿ ಭಿನ್ನಾಭಿಪ್ರಾಯಗಳು ಕೇಳಿಬಂದಿದ್ದವು. ಈ ವೇಳೆ ಅಖುಂದ್ಜಾದ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಅಂತಾ ವದಂತಿಗಳು ಹಬ್ಬಿದ್ದವು.

2016ರಲ್ಲಿ ಯುಎಸ್ ಡ್ರೋಣ್ ದಾಳಿಯಲ್ಲಿ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಸತ್ತ ಮೇಲೆ ಅಖುಂದ್ಜಾದ ಸಂಘಟನೆಯ ಮುಖ್ಯಸ್ಥನಾಗಿ ಹೊಣೆ ಹೊತ್ತುಕೊಂಡಿದ್ದ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com