ವಿರೋಧಿಗಳ ಸರ್ಕಾರವಿದ್ದಾಗಲೂ ಜೀವಭಯದಲ್ಲಿ ಕಾಬೂಲ್‌ನಲ್ಲೇ ಅಡಗಿದ್ದೆ: ತಾಲಿಬಾನ್ ವಕ್ತಾರ

ಕಳೆದ ತಿಂಗಳು ಕಾಬೂಲ್ ಅನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಕಾಣಿಸಿಕೊಂಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ವಿರೋಧಿಗಳ ಸರ್ಕಾರವಿದ್ದಾಗಲೂ ದೇಶದಲ್ಲೇ ಅಡಗಿದ್ದೆ ಎಂದು ಹೇಳಿಕೊಂಡಿದ್ದಾನೆ.
ಜಬಿಹುಲ್ಲಾ ಮುಜಾಹಿದ್
ಜಬಿಹುಲ್ಲಾ ಮುಜಾಹಿದ್

ಕಾಬೂಲ್: ಕಳೆದ ತಿಂಗಳು ಕಾಬೂಲ್ ಅನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಕಾಣಿಸಿಕೊಂಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ವಿರೋಧಿಗಳ ಸರ್ಕಾರವಿದ್ದಾಗಲೂ ದೇಶದಲ್ಲೇ ಅಡಗಿದ್ದೆ ಎಂದು ಹೇಳಿಕೊಂಡಿದ್ದಾನೆ.

ವರ್ಷಗಳ ಕಾಲ ಮುಜಾಹಿದ್ ನೆರಳಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾನು ವಾಯುವ್ಯ ಪಾಕಿಸ್ತಾನದ ನೌಶೇರಾದಲ್ಲಿರುವ ಹಕ್ಕಾನಿಯಾ ಸೆಮಿನರಿಯಲ್ಲಿ ಅಧ್ಯಯನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದನ್ನು ಅಂತಾರಾಷ್ಟ್ರೀಯವಾಗಿ ತಾಲಿಬಾನ್ ವಿಶ್ವವಿದ್ಯಾಲಯ ಅಥವಾ 'ಜಿಹಾದ್ ವಿಶ್ವವಿದ್ಯಾಲಯ' ಕರೆಯಲಾಗಿದೆ.

ಅಮೆರಿಕಾ ಮತ್ತು ಅಫ್ಘಾನ್ ರಾಷ್ಟ್ರೀಯ ಪಡೆಗಳು ನಾನು ಸಕ್ರಿಯವಾಗಿಲ್ಲ ಎಂದು ಭಾವಿಸುತ್ತಿದ್ದರು ಎಂದು ಮುಜಾಹಿದ್ ಸಂದರ್ಶನವೊಂದರಲ್ಲಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆಗೆ ತಿಳಿಸಿದರು.

ನನ್ನನ್ನು ಸೆರೆಹಿಡಿಯುವ ಪ್ರಯತ್ನಗಳಲ್ಲಿ ಎಷ್ಟೋ ಬಾರಿ ನನ್ನ ಮೇಲೆ ದಾಳಿಗಳು ನಡೆದಿದ್ದು ಅವುಗಳಿಂದ ತಪ್ಪಿಸಿಕೊಂಡೆ. ನಾನು ನಿಜವಾಗಿಯೂ ಬದುಕಿಲ್ಲ ಎಂದು ಅವರು ಭಾವಿಸಿದ್ದರು ಎಂದು ಹೇಳಿದ್ದಾರೆ. 

ಇನ್ನೂ ನಾನು ಕಾಬೂಲ್ ನಲ್ಲೇ ಉಳಿದುಕೊಂಡಿದ್ದು ಅಫ್ಘಾನಿಸ್ತಾನವನ್ನು ಮುಕ್ತವಾಗಿ ಚಲಿಸುವಲ್ಲಿ ಯಶಸ್ವಿಯಾಗಿದ್ದೇನೆ. ತಾಲಿಬಾನ್ ಚಟುವಟಿಕೆಗಳ ಪ್ರತಿಯೊಂದು ಮಾಹಿತಿಯನ್ನೂ ಪಡೆದುಕೊಳ್ಳುತ್ತಿದೆ ಎಂದು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com