ಅಹ್ಮದ್ ಮಸೂದ್
ಅಹ್ಮದ್ ಮಸೂದ್

ಪಂಜ್ ಶೀರ್ ನಾಯಕ ಹೋರಾಟಗಾರ ಅಹ್ಮದ್ ಮಸೂದ್ ಅಫ್ಘಾನಿಸ್ತಾನ ತೊರೆದಿಲ್ಲ  ವರದಿ

ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ವಿರುದ್ಧ ಹೋರಾಟ ಮಾಡುತ್ತಿರುವ ಅಫ್ಘಾನ್ ರೆಸಿಸ್ಟೆನ್ಸ್ ಫೋರ್ಸ್ ನ ನಾಯಕ ಅಹ್ಮದ್ ಮಸೂದ್ ಅಫ್ಘಾನಿಸ್ತಾನ ತೊರೆದಿಲ್ಲ ಎಂದು ಇರಾನ್ ನ ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.
Published on

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ವಿರುದ್ಧ ಹೋರಾಟ ಮಾಡುತ್ತಿರುವ ಅಫ್ಘಾನ್ ರೆಸಿಸ್ಟೆನ್ಸ್ ಫೋರ್ಸ್ ನ ನಾಯಕ ಅಹ್ಮದ್ ಮಸೂದ್ ಅಫ್ಘಾನಿಸ್ತಾನ ತೊರೆದಿಲ್ಲ ಎಂದು ಇರಾನ್ ನ ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.

ಅಫ್ಘಾನಿಸ್ತಾನ ತಾಲೀಬಾನ್ ವಶವಾಗಿರುವ ಹಿನ್ನೆಲೆಯಲ್ಲಿ ಮಸೂದ್ ಕೇಂದ್ರ ಏಷ್ಯಾದ ರಾಷ್ಟ್ರವನ್ನು ತೊರೆದು ಟರ್ಕಿ ಅಥವಾ ಇನ್ನಿತರ ಪ್ರದೇಶಗಳಿಗೆ ತೆರಳಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಇರಾನ್ ನ ಸುದ್ದಿ ಸಂಸ್ಥೆ ಎಫ್ಎಆರ್ ಎಸ್ ತಿಳಿಸಿದೆ.

ಪಂಜ್ ಶೀರ್ ನ ಶೇ.70 ರಷ್ಟು ಪ್ರದೇಶ ತಾಲೀಬಾನಿ ನಿಯಂತ್ರಣಕ್ಕೆ ಒಳಪಟ್ಟಿದ್ದು, ಅಹ್ಮದ್ ಮಸೂದ್ ಪಂಜ್ ಶೀರ್ ಕಣಿವೆಯಲ್ಲಿ ಸುರಕ್ಷಿತ ಪ್ರದೇಶದಲ್ಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.

ತಾಲೀಬಾನ್ ತಾನು ಪಂಜ್ ಶೀರ್ ಪ್ರದೇಶವನ್ನು ವಶಪಡಿಸಿಕೊಂಡಿರುವುದಾಗಿ ಈ ಹಿಂದೆ ಘೋಷಿಸಿತ್ತು. ಆದರೆ ತಾಲೀಬಾನಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್ ಆರ್ ಎಫ್) ತಾಲೀಬಾನಿಗಳ ಹೇಳಿಕೆಯನ್ನು ಅಲ್ಲಗಳೆದಿದೆ.

"ಇತ್ತೀಚಿನ ದಿನಗಳಲ್ಲಿ ತಾಲೀಬಾನ್ ಪಂಜ್ ಶೀರ್ ಗೆ ಪ್ರವೇಶಿಸಿದ್ದು, ಶೇ.70 ರಷ್ಟು ಪ್ರಮುಖ ರಸ್ತೆಗಳು ಹಾಗೂ ಹಾದಿಗಳು ಅವರ ನಿಯಂತ್ರಣದಲ್ಲೇ ಇದೆ. ಆದರೆ ಕಣಿವೆಗಳ ಮೇಲೆ ಎನ್ ಆರ್ ಎಫ್ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಕಾಸಿಮ್ ಮೊಹಮ್ಮದಿ ಎಫ್ಎನ್ಎ ಗೆ ಮಾಹಿತಿ ನೀಡಿದ್ದಾರೆ.

ಕಣಿವೆಯ ಪ್ರಮುಖ, ಆಯಕಟ್ಟಿನ ಪ್ರದೇಶಗಳಲ್ಲಿ ಎನ್ ಆರ್ ಎಫ್ ಅಸ್ತಿತ್ವವಿದ್ದು, ತಾಲೀಬಾನಿಗಳ ವಿರುದ್ಧ ಹೋರಾಟ ಮುಂದುವರೆಸುತ್ತಿದೆ ಎಂದು ಎನ್ ಆರ್ ಎಫ್ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com