ಜೂಮ್ ಕಾಲ್ ವೇಳೆ ಎಡವಟ್ಟು: ನಗ್ನವಾಗಿ ಕಾಣಿಸಿಕೊಂಡ ಕೆನಡಾ ಎಂಪಿ, ಫೋಟೋ ವೈರಲ್!

ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್ ಸಭೆ ವೇಳೆ ಕೆನಡಾದ ಶಾಸಕರೊಬ್ಬರು ಬೆತ್ತಲೆಯಾಗಿ ಕಾಣಿಸಿಕೊಂಡು ಮುಜುಗರಕ್ಕೀಡಾಗಿದ್ದು ಇದೀಗ ತಮ್ಮ ಸಹೋದ್ಯೋಗಿಗಳಿಗೆ ಕ್ಷಮೆಯಾಚಿಸಿದ್ದಾರೆ.

Published: 15th April 2021 05:11 PM  |   Last Updated: 04th May 2021 01:33 AM   |  A+A-


zoom-call

ಜೂಮ್ ಕಾಲ್

Posted By : Vishwanath S
Source : AFP

ಒಟ್ಟಾವಾ: ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್ ಸಭೆ ವೇಳೆ ಕೆನಡಾದ ಶಾಸಕರೊಬ್ಬರು ಬೆತ್ತಲೆಯಾಗಿ ಕಾಣಿಸಿಕೊಂಡು ಮುಜುಗರಕ್ಕೀಡಾಗಿದ್ದು ಇದೀಗ ತಮ್ಮ ಸಹೋದ್ಯೋಗಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಲಿಬರಲ್ ಸಂಸದ ವಿಲಿಯಂ ಅಮೋಸ್ ವರ್ಚುವಲ್ ಅಧಿವೇಶನದ ವೇಳೆ ಲ್ಯಾಪ್‌ಟಾಪ್ ಕ್ಯಾಮೆರಾ ಆನ್ ಆಗಿದ್ದಾಗ ಕ್ವಿಬೆಕ್ ಮತ್ತು ಕೆನಡಾದ ಧ್ವಜಗಳ ನಡುವೆ ಬೆತ್ತಾಗಿ ನಿಂತಿದ್ದರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇನ್ನು ಫೋಟೋದಲ್ಲಿ ವಿಲಿಯಂ ಅಮೋಸ್ ಮೊಬೈಲ್ ನಿಂದ ಖಾಸಗಿ ಅಂಗವನ್ನು ಮುಚ್ಚಿಕೊಂಡಿದ್ದರು. 

'ಇಂದು ನಾನು ನಿಜವಾಗಿಯೂ ದುರದೃಷ್ಟಕರ ತಪ್ಪು ಮಾಡಿದ್ದೇನೆ. ಅದರಿಂದ ಮುಜುಗರಕ್ಕೊಳಗಾಗಿದ್ದೇನೆ ಎಂದು 46 ವರ್ಷದ ವಿಲಿಯಂ ತಿಳಿಸಿದ್ದಾರೆ. 

"ನಾನು ಜೋಕಿಂಗ್ ಹೋಗುವ ಸಲುವಾಗಿ ಕೆಲಸದ ಬಟ್ಟೆಯನ್ನು ಬದಲಾಯಿಸಿದ್ದೆ ಆದರೆ ಕ್ಯಾಮೆರಾ ಆನ್ ಆಗಿರುವುದನ್ನು ಮರೆತಿದ್ದೆ. ಹೀಗಾಗಿ ಸದನದಲ್ಲಿನ ನನ್ನ ಎಲ್ಲ ಸಹೋದ್ಯೋಗಿಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಇದು ಪ್ರಾಮಾಣಿಕ ತಪ್ಪು. ಇಂತಹ ಘಟನೆ ಮುಂದೆ ಸಂಭವಿಸುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.

'ರೂಲ್ಸ್ ಆಫ್ ಆರ್ಡರ್ ಮತ್ತು ಡೆಕೋರಮ್' ವಿಭಾಗದ ಅಡಿಯಲ್ಲಿ ಚರ್ಚೆಗೆ ಕೂರಲು ಯಾವುದೇ ಡ್ರೆಸ್ ಕೋಡ್ ಅಗತ್ಯವಿಲ್ಲ, ಆದರೆ ಪುರುಷ ಭಾಷಣಕಾರರು ಜಾಕೆಟ್, ಶರ್ಟ್ ಮತ್ತು ಟೈಗಳಂತಹ ಸಮಕಾಲೀನ ವ್ಯವಹಾರಿಕ ಉಡುಪನ್ನು ಧರಿಸಿರಬೇಕು ಎಂದು ಹೇಳುತ್ತದೆ. 

Stay up to date on all the latest ಅಂತಾರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp