ಕಿರೀಟ ಎಳೆದಾಡಿದ್ದ ಜೂರಿ ರಾಜೀನಾಮೆ; ಮಿಸೆಸ್ ಐರ್ಲೆಂಡ್ ಗೆ ಮಿಸೆಸ್ ವರ್ಲ್ಡ್ 2020 ಪ್ರಶಸ್ತಿ

ಮಿಸೆಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯ ವಿಜೇತರ ತಲೆಯಿಂದ ಕಿರೀಟವನ್ನು ಎಳೆದಾಡಿ ವಿವಾದವಾದ ನಂತರ ತೀರ್ಪು ನೀಡಿದ್ದ ಜೂರಿ ರಾಜೀನಾಮೆ ಸಲ್ಲಿಸಿದ ಪರಿಣಾಮ ಐರ್ಲೆಂಡ್‌ನ ಕೇಟ್ ಷ್ನೇಯ್ಡರ್ ಅವರನ್ನು ನೂತನ ಮಿಸೆಸ್ ವರ್ಲ್ಡ್ ಎಂದು ಹೆಸರಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಿರೀಟ ಎಳೆದಾಡಿದ್ದ ಜೂರಿ ರಾಜೀನಾಮೆ; ಮಿಸೆಸ್ ಐರ್ಲೆಂಡ್ ಗೆ ಮಿಸೆಸ್ ವರ್ಲ್ಡ್ 2020 ಪ್ರಶಸ್ತಿ

ಕೊಲಂಬೋ: ಮಿಸೆಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯ ವಿಜೇತರ ತಲೆಯಿಂದ ಕಿರೀಟವನ್ನು ಎಳೆದಾಡಿ ವಿವಾದವಾದ ನಂತರ ತೀರ್ಪು ನೀಡಿದ್ದ ಜೂರಿ ರಾಜೀನಾಮೆ ಸಲ್ಲಿಸಿದ ಪರಿಣಾಮ ಐರ್ಲೆಂಡ್‌ನ ಕೇಟ್ ಷ್ನೇಯ್ಡರ್ ಅವರನ್ನು ನೂತನ ಮಿಸೆಸ್ ವರ್ಲ್ಡ್ ಎಂದು ಹೆಸರಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಿಸೆಸ್ ವರ್ಲ್ಡ್ ಇಂಕ್. ಕ್ಯಾರೋಲಿನ್ ಜೂರಿಯ ರಾಜೀನಾಮೆಯನ್ನು ಸ್ವೀಕರಿಸಿದೆ ಮತ್ತು ಮೊದಲ ರನ್ನರ್ ಅಪ್ ಮಿಸೆಸ್ ಐರ್ಲೆಂಡ್ ಕೇಟ್ ಅವರನ್ನು ಮಿಸೆಸ್ ವರ್ಲ್ಡ್ 2020 ಎಂದು ಘೋಷಿಸಿರುವುದಾಗಿ ಸಂಘಟಕರು ಹೇಳಿದ್ದಾರೆ.

ವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆಯಾದ ಮಿಸೆಸ್ ವರ್ಲ್ಡ್ ವೆಬ್‌ಸೈಟ್ ಮಿಸೆಸ್ ವರ್ಲ್ಡ್ ಎಂಬ ಶೀರ್ಷಿಕೆಯೊಂದಿಗೆ ಷ್ನೇಯ್ಡರ್ ಅವರ ಫೋಟೋವನ್ನು ಪ್ರಕಟಿಸಿತು.

ಈ ವರ್ಷದ ಆರಂಭದಲ್ಲಿ ಜೂಲಿ ತನ್ನ ಪ್ರಶಸ್ತಿಯನ್ನು ತ್ಯಜಿಸಿದರು, ಆದರೆ ಈ ವರ್ಷದ ಮಿಸೆಸ್ ಶ್ರೀಲಂಕಾ ಪ್ರಶಸ್ತಿ ವಿಜೇತರಾಗಿದ್ದ ಪುಷ್ಪಿಕಾ ಡಿ ಸಿಲ್ವಾ ವಿಜೇತರ ತಲೆಯಲ್ಲಿದ್ದ ಕಿರೀಟ ಎಳೆದಾಡಿದ್ದ ಕಾರಣ ವಿವಾದವಾಗಿತ್ತು. ಇದಕ್ಕೆ ಸಮರ್ಧನೆ ನೀಡಿದ್ದ ಜೂರಿ ಕಿರೀಟ ಹೊಂದಿರುವ ಸ್ಪರ್ಧಿ ವಿಚ್ಚೇದನ ಪಡೆದ ಕಾರಣ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅನರ್ಹರಿದ್ದಾರೆ ಎಂದರು. ಡಿ ಸಿಲ್ವಾ ಅವರು ಪತಿಯಿಂದ ಬೇರೆ ಇದ್ದಾರೆಯೇ ಹೊರತು ವಿಚ್ಚೇದನ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಬೇರೆ ಇರುವುದು ಹಾಗೂ ವಿಚ್ಚೇದನ ಎರಡೂ ಬೇರೆ ಬೇರೆ ವಿಷಯಗಳೆಂದು ಅವರು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. ಶ್ರೀಲಂಕಾ ಜೂರಿ ಟಿವಿ ಸ್ಪರ್ಧೆಯಲ್ಲಿ  ಡಿ ಸಿಲ್ವಾ ಅವರನ್ನು ಆಘಾತಕ್ಕೀಡು ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಆದರೆ ತಾನು "ಅನ್ಯಾಯ" ದ ವಿರುದ್ಧ ನಿಂತಿದ್ದೇನೆ ಮತ್ತು ಸ್ಪರ್ಧೆಯು "ಕಳಂಕಿತ" ಎಂದು ಜೂರಿ ಹೇಳಿದರು.

ಪ್ರಧಾನ ಮಂತ್ರಿಯ ಪತ್ನಿ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ನಡೆದ ಘಟನೆ ಶ್ರೀಲಂಕಾದಲ್ಲಿ ಕೋಲಾಹಲ ಸೃಷ್ಟಿಸಿತು, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com