ಬ್ರೆಜಿಲ್: 24 ಗಂಟೆಯಲ್ಲಿ 2914 ಹೊಸ ಕೊರೋನಾ ಸಾವು ಪ್ರಕರಣ ವರದಿ

ಬ್ರೆಜಿಲ್ ನಲ್ಲಿ ಶುಕ್ರವಾರ ಕೇವಲ 24 ಗಂಟೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ನಿಂದ 2914 ಮಂದಿ ಮೃತಪಟ್ಟಿದ್ದಾರೆ. ಇದರ ಪರಿಣಾಮ ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ  3ಲಕ್ಷದ 86 ಸಾವಿರ ಮೀರಿದೆ.

ಸಾವೊ ಪಾಲೊ: ಬ್ರೆಜಿಲ್ ನಲ್ಲಿ ಶುಕ್ರವಾರ ಕೇವಲ 24 ಗಂಟೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ನಿಂದ 2914 ಮಂದಿ ಮೃತಪಟ್ಟಿದ್ದಾರೆ. ಇದರ ಪರಿಣಾಮ ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ  3ಲಕ್ಷದ 86 ಸಾವಿರ ಮೀರಿದೆ.

ಕಳೆದ 24 ಗಂಟೆಗಳಲ್ಲಿ 69,105 ಹೊಸ ಕರೋನಾ  ಪ್ರಕರಣಗಳು ಪತ್ತೆಯಾಗಿದೆ. ಎಂದು  ಬ್ರೆಜಿಲ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ ವಾರದಲ್ಲಿ 14 ರಾಜ್ಯಗಳು ಮತ್ತು ರಾಜಧಾನಿ ಬ್ರೆಸಿಲಿಯಾ 90% ರಷ್ಟು ತೀವ್ರ ನಿಗಾ ಘಟಕಗಳನ್ನು(ಐಸಿಯು) ನೋಂದಾಯಿಸಿಕೊಂಡಿದೆ ಎಂದು ಬ್ರೆಜಿಲ್ ನ ಸರ್ಕಾರಿ ವೈದ್ಯಕೀಯ ಸಂಶೋಧನಾ ಕೇಂದ್ರವಾದ ಓಸ್ವಾಲ್ಡೋ ಕ್ರೂಜ್ ಫೌಂಡೇಶನ್ (ಫಿಯೋಕ್ರಜ್) ವರದಿ ಮಾಡಿದೆ.

ಬ್ರೆಜಿಲ್ ನಲ್ಲಿ ಕಳೆದ ಎರಡು ವಾರಗಳಲ್ಲಿಕರೋನ  ಸಾವಿನ ಪ್ರಮಾಣ ಬಹಳ ಹೆಚ್ಚಾಗಿದೆ. 

ಬ್ರೆಜಿಲ್ ನ ಪ್ರಮುಖ ಪ್ರವಾಸಿ ತಾಣವಾದ ರಿಯೊ ಡಿ ಜನೈರೊದಲ್ಲಿ, ಮೇಯರ್ ಕಚೇರಿಯು ಸೋಮವಾರದಿಂದ ಶುಕ್ರವಾರದವರೆಗೆ ಪಟ್ಟಣದ ಪ್ರಸಿದ್ಧ ಕಡಲತೀರಗಳಿಗೆ ಭೇಟಿ ನೀಡಲು ಜನರಿಗೆ ಅನುಕೂಲವಾಗುವಂತೆ ಲಾಕ್ ಡೌನ್ ನಿಯಮ ಸಡಿಲಗೊಳಿಸಿದೆ. ಆದರೆ ವಾರಾಂತ್ಯದಲ್ಲಿ ಕಡಲತೀರಗಳು ಮುಚ್ಚಲಿದ್ದು, ರಾತ್ರಿಯ ನಿರ್ಬಂಧಗಳು ಎಂದಿನಂತೆ ಮುಂದುವರೆಯಲಿದೆ ಎಂದೂ ಸ್ಪಷ್ಟಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com