ಮಾನಸಿಕ ಆರೋಗ್ಯ, ಮಾನವ ಹಕ್ಕು ಆಧಾರದಲ್ಲಿ ಮೇಲ್ಮನವಿ ಸಲ್ಲಿಸಲು ನೀರವ್ ಮೋದಿಗೆ ಬ್ರಿಟನ್ ಹೈಕೋರ್ಟ್ ಅನುಮತಿ

ಭಾರತಕ್ಕೆ ಗಡಿಪಾರು ಮಾಡುವ ಬ್ರಿಟನ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶದ ವಿರುದ್ಧ ಮಾನಸಿಕ ಆರೋಗ್ಯ, ಮಾನವಹಕ್ಕು ಆಧಾರದಲ್ಲಿ ಮೇಲ್ಮನವಿ ಸಲ್ಲಿಸಲು ನೀರವ್ ಮೋದಿ ಗೆ  ಬ್ರಿಟನ್ ನ ಹೈಕೋರ್ಟ್ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ. 
ನೀರವ್ ಮೋದಿ
ನೀರವ್ ಮೋದಿ

ಬ್ಯಾಂಕ್ ಗಳಿಗೆ ವಂಚನೆ ಮಾಡಿರುವ ಆರೋಪದ ಅಡಿ ಭಾರತಕ್ಕೆ ಗಡಿಪಾರು ಮಾಡುವ ಬ್ರಿಟನ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶದ ವಿರುದ್ಧ ಮಾನಸಿಕ ಆರೋಗ್ಯ, ಮಾನವಹಕ್ಕು ಆಧಾರದಲ್ಲಿ ಮೇಲ್ಮನವಿ ಸಲ್ಲಿಸಲು ನೀರವ್ ಮೋದಿ ಗೆ  ಬ್ರಿಟನ್ ನ ಹೈಕೋರ್ಟ್ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ. 

ಬ್ಯಾಂಕ್ ಗಳಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. ಬ್ರಿಟನ್ ಹೈಕೋರ್ಟ್ ನ ಮಾರ್ಟಿನ್ ಚೇಂಬರ್ಲಿನ್ ಈ ಆದೇಶ ನೀಡಿದ್ದಾರೆ. 50 ವರ್ಷ ವಯಸ್ಸಿನ ವಜ್ರ ವ್ಯಾಪಾರಿಯ ಕಾನೂನು ತಂಡ ಉದ್ಯಮಿಗೆ ತೀವ್ರ ಖಿನ್ನತೆ ಹಾಗೂ ಆತ್ಮಹತ್ಯೆಯಂತಹ ಅಪಾಯವಾಗಿರುವುದರ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. 

ನೀರವ್ ಮೋದಿ ಅವರನ್ನು ಗಡಿಪಾರು ಮಾಡಿದ ಬಳಿಕ ಇರಿಸಲಾಗುವ ಮುಂಬೈ ನ ಅರ್ಥೂರ್ ರಸ್ತೆಯ ಜೈಲಿನಲ್ಲಿ ಯಶಸ್ವಿ ಆತ್ಮಹತ್ಯೆ ಯತ್ನಗಳನ್ನು ತಡೆಗಟ್ಟುವ ಸಮರ್ಪಕ ಕ್ರಮಗಳಿರುವುದೂ ಸಹ ವಾದ-ಪ್ರತಿವಾದಗಳ ವ್ಯಾಪ್ತಿಗೆ ಬರಲಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮೇಲ್ಮನವಿ ಸಲ್ಲಿಸುವುದಕ್ಕೆ 3 ಹಾಗೂ 4 ನೇ ಗ್ರೌಂಡ್ಸ್ ಆಧಾರದಲ್ಲಿ ಅನುಮತಿ ನೀಡಲಾಗುತ್ತಿದೆ ಎಂದು ನ್ಯಾ.  ಮಾರ್ಟಿನ್ ಚೇಂಬರ್ಲಿನ್ ಹೇಳಿದ್ದಾರೆ. ಗ್ರೌಂಡ್ಸ್ 3-4 ಯುರೋಪಿಯನ್ ಕನ್ವೆನ್ಷನ್ ಆಫ್ ಹ್ಯೂಮನ್ ರೈಟ್ಸ್ ನ ಆರ್ಟಿಕಲ್ 3ಕ್ಕೆ ಸಂಬಂಧಿಸಿದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com