ಪ್ರಪಂಚದ ಎತ್ತರದ ಕಟ್ಟಡದ ತುದಿಯಲ್ಲಿ ನಿಂತ ಯುವತಿ: ನಿಜವೋ ಸುಳ್ಳೋ?

ಜಗತ್ತಿನ ಅತಿ ಎತ್ತರದ ಗಗನಚುಂಬಿ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ದುಬೈನ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಯುವತಿಯೋರ್ವಳು ನಿಂತಿರುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಪ್ರಪಂಚದ ಎತ್ತರದ ಕಟ್ಟಡದ ತುದಿಯಲ್ಲಿ ನಿಂತ ಯುವತಿ: ನಿಜವೋ ಸುಳ್ಳೋ?

ದುಬೈ: ಜಗತ್ತಿನ ಅತಿ ಎತ್ತರದ ಗಗನಚುಂಬಿ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ದುಬೈನ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಯುವತಿಯೋರ್ವಳು ನಿಂತಿರುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅನೇಕರು ಇದು ಗ್ರಾಫಿಕ್ಸ್ ಕೈಚಳಕ ಎಂದು ತಮ್ಮ ಬುದ್ಧಿಮತ್ತೆ ಪ್ರದರ್ಶಿಸಿದರೆ, ಇನ್ನು ಕೆಲವರು ಆ ಯುವತಿಯ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಲಕ್ಷಾಂತರ ಮಂದಿಯ ಗಮನವನ್ನು ಈ ವಿಡಿಯೋ ಸೆಳೆದಿರುವುದು ಸುಳ್ಳಲ್ಲ. 

ವಿಡಿಯೋದಲ್ಲಿ ಮೊದಲಿಗೆ ಯುವತಿಯನ್ನು ಕ್ಲೋಸಪ್ ಶಾಟ್ ನಲ್ಲಿ ತೋರಿಸಲಾಗುತ್ತದೆ. ಹೀಗಾಗಿ ಯುವತಿ ಯಾವ ಸ್ಥಳದಲ್ಲಿ ನಿಂತಿದ್ದಾಳೆ ಎನ್ನುವುದು ವೀಕ್ಷಕರಿಗೆ ತಿಳಿಯುವುದಿಲ್ಲ. ಆಕೆ ಸಂದೇಶವನ್ನು ಬರೆಯಲಾದ ಫಲಕಗಳನ್ನು ಹಿಡಿದು ನಿಂತಿದ್ದಾಳೆ. ನಂತರ ನಿಧಾನವಾಗಿ ಕ್ಯಾಮೆರಾ ಹಿಂದಕ್ಕೆ ಸರಿಯುತ್ತಿದ್ದಂತೆಯೇ ಯುವತಿ ನಿಂತಿರುವುದು ನೆಲದ ಮೇಲಲ್ಲ ಜಗತ್ತಿನ ಅತಿ ಎತ್ತರದ ಕಟ್ಟಡದ ಮೇಲೆ ಎನ್ನುವುದು ಕಂಡುಬರುತ್ತದೆ. 

ಮೊದಲಿಗೆ ಈ ವಿಡಿಯೋ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಸೂಕ್ತ. ಇದು ಯುಎಇ ಒಕ್ಕೂಟ ರಾಷ್ಟ್ರದ ವಿಮಾನ ಸಂಸ್ಥೆಯಾದ ಫ್ಲೈ ಎಮಿರೇಟ್ಸ್ ಜಾಹೀರಾತು. ಒಂದು ಜಾಹೀರಾತಿಗಾಗಿ ಇಷ್ಟೆಲ್ಲಾ ಸರ್ಕಸ್ ಮಾಡಿರುವ ಬಗ್ಗೆ ಏನೇ ಪರ ವಿರೋಧ ಮಾತುಗಳು ಕೇಳಿಬರುತ್ತಿದ್ದರೂ ವಿಡಿಯೋ ಹಿಟ್ ಆಗಿರುವುದಂತೂ ನಿಜ. 

ಅಸಲಿಗೆ ಈ ವಿಡಿಯೋ ಗ್ರಾಫಿಕ್ಸ್ ಕೈಚಳಕವಲ್ಲ. ವಿಡಿಯೋದಲ್ಲಿ ಯುವತಿಯನ್ನು ನಿಜಕ್ಕೂ ಬುರ್ಜ್ ಖಲೀಫಾ ಮೇಲೆ ನಿಲ್ಲಿಸಲಾಗಿದೆ. ಅಂದ ಹಾಗೆ ವಿಡಿಯೋದಲ್ಲಿ ಕಂಡುಬಂದಿರುವ ಯುವತಿ ಓರ್ವ ಸ್ಕೈ ಡೈವ್ ತರಬೇತುದಾರಳಾಗಿದ್ದಾಳೆ. 

ಈ ಜಾಹಿರಾತಿನಲ್ಲಿ ಅಭಿನಯಿಸಲು ಫ್ಲೈ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯ ಕೆಲ ಗಗನಸಖಿಯರೇ ಮುಂದೆ ಬಂದಿದ್ದರು. ಆದರೆ ಸುರಕ್ಷತಾ ದೃಷ್ಟಿಯಿಂದ ದೈಹಿಕವಾಗಿ ಫಿಟ್ ಆದ ಯುವತಿಯರಿಗಾಗಿ ಹುಡುಕಾಟ ನಡೆಸಲಾಗಿತ್ತು ಎನ್ನುವುದು ಅಚ್ಚರಿಯ ವಿಷಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com