ಅಮೆರಿಕ ಅಧ್ಯಕ್ಷ ಜೋ ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡನ್

ಆಫ್ಘನ್ ಬಿಕ್ಕಟ್ಟಿನಿಂದ ಪ್ರಭಾವ ತಗ್ಗಿಸಿಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡನ್

ಅಮೆರಿಕಾ ಪಡೆಗಳು ಅಫ್ಘಾನಿಸ್ತಾನದಿಂದ ಮರಳಿದವೋ, ಇಲ್ಲವೋ ಗೊತ್ತಿಲ್ಲ. ತಾಲಿಬಾನ್ ಗಳು ಆ ದೇಶವನ್ನು ವಶಪಡಿಸಿಕೊಂಡಿವೆ. ಸೇನೆ ಹಿಂಪಡೆಯುವ ನಿರ್ಣಯ ಸರಿಯಾದುದಲ್ಲ ಎಂದು ಅಮೆರಿಕ ಅಧ್ಯಕ್ಷ ಬೈಡನ್‌ ವಿರುದ್ದ ಮಾಜಿ ಅಧ್ಯಕ್ಷ ಟ್ರಂಪ್ ಸೇರಿದಂತೆ ಹಲವು ನಾಯಕರು ಟೀಕಿಸುತ್ತಿದ್ದಾರೆ.
Published on

ವಾಷಿಂಗ್ಟನ್: ಅಮೆರಿಕಾ ಪಡೆಗಳು ಅಫ್ಘಾನಿಸ್ತಾನದಿಂದ ಮರಳಿದವೋ, ಇಲ್ಲವೋ ಗೊತ್ತಿಲ್ಲ. ತಾಲಿಬಾನ್ ಗಳು ಆ ದೇಶವನ್ನು ವಶಪಡಿಸಿಕೊಂಡಿವೆ. ಸೇನೆ ಹಿಂಪಡೆಯುವ ನಿರ್ಣಯ ಸರಿಯಾದುದಲ್ಲ ಎಂದು ಅಮೆರಿಕ ಅಧ್ಯಕ್ಷ ಬೈಡನ್‌ ವಿರುದ್ದ ಮಾಜಿ ಅಧ್ಯಕ್ಷ ಟ್ರಂಪ್ ಸೇರಿದಂತೆ ಹಲವು ನಾಯಕರು ಟೀಕಿಸುತ್ತಿದ್ದಾರೆ.

ಚೀನಾ ಕೂಡ ಅಮೆರಿಕಾ ಕ್ರಮವನ್ನು ಟೀಕಿಸಿದೆ. ಅಮೆರಿಕಾದ ನಿರ್ಧಾರದಿಂದ  ಅಫ್ಘಾನಿಸ್ತಾನದಲ್ಲಿ ಘೋರ ಪರಿಸ್ಥಿತಿ ನಿರ್ಮಾಣಗೊಂಡಿದೆ  ಎಂದು  ಆರೋಪಿಸಿದೆ.

ತಾಲಿಬಾನಿಗಳ ವಿಜಯವನ್ನು ಅಮೆರಿಕಾದ ಸೋಲು ಎಂದು ಹಲವರು ಬಣ್ಣಿಸಿದ್ದಾರೆ. ಟ್ರಂಪ್ ಕೂಡಾ ಅಮೆರಿಕದ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ಸೋಲು ಎಂದು ಹೇಳಿದ್ದಾರೆ. ಈ ಕ್ರಮವಾಗಿ ಅಮೆರಿಕಾದಲ್ಲಿ ಜೋ ಬೈಡೆನ್ ಅವರ ಜನಪ್ರಿಯತೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ.

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ  ನಂತರ ಬೈಡನ್‌ ಅವರನ್ನು  ಬೆಂಬಲಿಸುವವರ ಸಂಖ್ಯೆ ಶೇಕಡಾ 7 ರಷ್ಟು ಕುಸಿದಿದೆ ಎಂದು ವರದಿಯಾಗಿದೆ. ಇದು ಮಾಧ್ಯಮ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಜನವರಿಯಲ್ಲಿ ಬೈಡೆನ್ ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಅವರ ಅಪ್ರೋವಲ್‌ ರೇಟಿಂಗ್ ಕಡಿಮೆಯಾಗಿರಲಿಲ್ಲ ಎಂದು ಸಮೀಕ್ಷೆ ಹೇಳಿದೆ.

ಶೇಕಡಾ 51ರಷ್ಟು ಮಂದಿ ಮಾಜಿ ಅಧ್ಯಕ್ಷರಾದ ಡೊನಾಲ್ಡ್‌ ಟ್ರಂಪ್, ಬರಾಕ್‌ ಒಬಾಮಾ ಅವರು ಅಫ್ಘನ್‌ ಯುದ್ಧವನ್ನು ನಿರ್ವಹಿಸಿದ ರೀತಿಯನ್ನು ಶ್ಲಾಘಿಸಿದ್ದಾರೆ ಎಂದು ಸಮೀಕ್ಷೆ  ಹೇಳಿದೆ. ಏನೇ ಆಗಲಿ, ಅಫ್ಘಾನಿಸ್ತಾನದ ಬಗ್ಗೆ ಬೈಡೆನ್ ಅವರ ನಿರ್ಧಾರ ಅವರ ಪ್ರಭಾವ ತಗ್ಗುವಂತೆ ಮಾಡಿರುವುದು ಸತ್ಯ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com