ವಿಮಾನದಿಂದ ಬಿದ್ದು ಸತ್ತ ಆಫ್ಘನ್ನರನ್ನು ಅವಹೇಳನ ಮಾಡಿದ ಟೀ ಶರ್ಟ್ ಸಂಸ್ಥೆ

ಇ ಕಾಮರ್ಸ್ ಸಂಸ್ಥೆ ಈ ಟೀ ಶರ್ಟುಗಳ ಮಾರಾಟವನ್ನು ಸ್ಥಗಿತಗೊಳಿಸಿ ಅವುಗಳಿಗೆ ನಿಷೇಧ ಹೇರಬೇಕೆನ್ನುವ ಒತ್ತಾಸೆ ಇದೇ ವೇಳೆ ಕೇಳಿಬಂದಿದೆ. 
ಘಟನೆಯ ದೃಶ್ಯ
ಘಟನೆಯ ದೃಶ್ಯ
Updated on

ವಾಷಿಂಗ್ಟನ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿನಿಂದ ಹೊರಟಿದ್ದ ಅಮೆರಿಕ ವಾಯುಪಡೆಯ ವಿಮಾನ ಹಾರಾಟ ನಡೆಸುವ ವೇಳೆ ಅದನ್ನು ಹಿಡಿದುಕೊಂಡಿದ್ದ ಇಬ್ಬರು ವ್ಯಕ್ತಿಗಳು ಆಗಸದಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಇನ್ನೂ ಮಾಸಿಲ್ಲ. ಈ ಸಮಯದಲ್ಲಿ ಈ ಘಟನೆಯನ್ನು ಅಣಕ ಮಾಡುವ ಟೀ ಶರ್ಟ್ ಗಳನ್ನು ಅಮೆರಿಕದ ಜನಪ್ರಿಯ ಇ ಕಾಮರ್ಸ್ ತಾಣದಲ್ಲಿ ಮಾರಾಟಕ್ಕಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಆ ಟೀ ಶರ್ಟಿನಲ್ಲಿ ವಿಮಾನದಿಂದ ಇಬ್ಬರು ವ್ಯಕ್ತಿಗಳು ಕೆಳಕ್ಕೆ ಬೀಳುತ್ತಿರುವ ಚಿತ್ರವನ್ನು ಅಚ್ಚು ಹಾಕಲಾಗಿದ್ದು, ಪಕ್ಕದಲ್ಲಿ 'ಕಾಬೂಲ್ ಸ್ಕೈ ಡೈವಿಂಗ್ ಕ್ಲಬ್' ಎಂದು ಹಾಸ್ಯ ಮಾಡಲಾಗಿದೆ. ತಾಲಿಬಾನ್ ಆಡಳಿತಕ್ಕೆ ಹೆದರಿ ರಕ್ಷಣೆಗಾಗಿ ಮೊರೆಯಿಡುತ್ತಾ ವಿಮಾನಕ್ಕೆ ಆತುಕೊಂಡು ಮೃತಪಟ್ಟ ವ್ಯಕ್ತಿಗಳ ಸಾವನ್ನು ಸ್ಕೈ ಡೈವಿಂಗ್ ಸಾಹಸ ಕ್ರೀಡೆಗೆ ಹೋಲಿಸಿ ಅಣಕ ಮಾಡಿರುವುದರ ವಿರುದ್ಧ ಇಂಟರ್ನೆಟ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದೇ ವಿನ್ಯಾಸದ ಟೀಶರ್ಟುಗಳನ್ನು ಹಲವು ಚಿಕ್ಕ ಪುಟ್ಟ ವಸ್ತ್ರ ತಯಾರಕ ಸಂಸ್ಥೆಗಳು ನಕಲು ಮಾಡಿದ್ದು, ಅಮೆರಿಕದ ಇ ಕಾಮರ್ಸ್ ತಾಣವಾದ ಎಟ್ಸಿ ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಇ ಕಾಮರ್ಸ್ ಸಂಸ್ಥೆ ಈ ಟೀ ಶರ್ಟುಗಳ ಮಾರಾಟವನ್ನು ಸ್ಥಗಿತಗೊಳಿಸಿ ಅವುಗಳಿಗೆ ನಿಷೇಧ ಹೇರಬೇಕೆನ್ನುವ ಒತ್ತಾಸೆ ಇದೇ ವೇಳೆ ಕೇಳಿಬಂದಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com