72 ಮಂದಿ ಆಫ್ಘನ್ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ವಿಮಾನ ಏರಲು ಬಿಡದ ತಾಲಿಬಾನ್

ಅಫ್ಘಾನಿಸ್ತಾನ ಮೂಲದ 72 ಮಂದಿ ಸಿಖ್ಖರು ಮತ್ತು ಹಿಂದೂಗಳ ಗುಂಪು ಭಾರತಕ್ಕೆ ಸ್ಥಳಾಂತರಗೊಳ್ಳುವ ಸಲುವಾಗಿ ವಿಮಾನ ಏರಬೇಕಿತ್ತು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡ ತಾಲಿಬಾನಿಗಳು ಅವರನ್ನು ತಡೆದಿದ್ದಾರೆ ಎಂದು ವಿಶ್ವ ಪಂಜಾಬಿ ಸಂಘದ ಅಧ್ಯಕ್ಷ ವಿಕ್ರಂ ಜಿತ್ ಸಾಹ್ನಿ ತಿಳಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್: ಭಾರತೀಯ ವಾಯುಪಡೆ ವಿಮಾನ ಏರಲು ಸಿದ್ಧರಾಗಿದ್ದ 72 ಮಂದಿ ಆಫ್ಘನ್ ಸಿಖ್ಖರು ಮತ್ತು ಆಫ್ಘನ್ ಹಿಂದೂಗಳನ್ನು ತಾಲಿಬಾನಿಗಳು ತಡೆದು ನಿಲ್ಲಿಸಿದ್ದಾರೆ. 

ಅಫ್ಘಾನಿಸ್ತಾನ ಮೂಲದ 72 ಮಂದಿ ಸಿಖ್ಖರು ಮತ್ತು ಹಿಂದೂಗಳ ಗುಂಪು ಭಾರತಕ್ಕೆ ಸ್ಥಳಾಂತರಗೊಳ್ಳುವ ಸಲುವಾಗಿ ವಿಮಾನ ಏರಬೇಕಿತ್ತು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡ ತಾಲಿಬಾನಿಗಳು ಅವರನ್ನು ತಡೆದಿದ್ದಾರೆ ಎಂದು ವಿಶ್ವ ಪಂಜಾಬಿ ಸಂಘದ ಅಧ್ಯಕ್ಷ ವಿಕ್ರಂ ಜಿತ್ ಸಾಹ್ನಿ ತಿಳಿಸಿದ್ದಾರೆ. 

85 ಮಂದಿಯನ್ನು ಭಾರತಕ್ಕೆ ಹೊತ್ತೊಯ್ದ ಯುದ್ಧವಿಮಾನದಲ್ಲಿಯೇ 72 ಮಂದಿ ಪ್ರಯಾಣಿಸಬೇಕಿತ್ತು. 

ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಮತ್ತು ಸಿಖ್ಖರ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಹಲವು ವರದಿಗಳು ಪ್ರಕಟಗೊಂಡಿದ್ದವು. 

ತಾಲಿಬಾನ್ ರಾಜ್ಯ ಇಲ್ಲದ ಸಂದರ್ಭದಲ್ಲೇ ದೌರ್ಜನ್ಯ ಕಿರುಕುಳ ಅನುಭವಿಸಿದ್ದ ಹಿಂದೂಗಳು, ಸಿಖ್ಖರಿಗೆ ಮುಂದೆ ತಾಲಿಬಾನ್ ಆಡಳಿತದಲ್ಲಿ ಹೆಚ್ಚಿನ ತೊಂದರೆ ಉಂಟಾಗಬಹುದು ಎಂದು ಅಲ್ಲಿನ ಹಿಂದೂಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅದರಿಂದಾಗಿಯೇ ಅಲ್ಲಿನ ಹಿಂದೂಗಳು ದೇಶ ತೊರೆಯಲು ನಿರ್ಧರಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com