ಅಗತ್ಯಬಿದ್ದರೆ ತಾಲಿಬಾನಿಗಳ ಜೊತೆ ಕೆಲಸ ಮಾಡುವೆ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯಬಿದ್ದರೆ ತಾಲಿಬಾನ್ ಗಳ ಜೊತೆ ಕೆಲಸ ಮಾಡುವುದಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ.
ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್

ಲಂಡನ್: ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯಬಿದ್ದರೆ ತಾಲಿಬಾನ್ ಗಳ ಜೊತೆ ಕೆಲಸ ಮಾಡುವುದಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ.

ಆ ನಿಟ್ಟಿನಲ್ಲಿ ರಾಜಕೀಯ ಹಾಗೂ ರಾಜತಾಂತ್ರಿಕ ಕ್ರಮಗಳನ್ನು ಕೈಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಮತ್ತೊಂದೆಡೆ, ವಿದೇಶಗಳಿಗೆ ವಲಸೆ ಹೋಗಲು ಆಗಮಿಸುತ್ತಿರುವ ಅಫ್ಘನ್‌ ಪ್ರಜೆಗಳಿಂದ ತುಂಬಿಹೋಗಿರುವ ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿ ನಿಧಾನವಾಗಿ ಶಾಂತ ಸ್ಥಿತಿಗೆ ಬರುತ್ತಿದೆ. ಪ್ರಸ್ತುತ ಈ ವಿಮಾನ ನಿಲ್ದಾಣ ವಿದೇಶಿ ಸೇನಾ ಪಡೆಗಳ ನಿಯಂತ್ರಣದಲ್ಲಿದೆ ಎಂದು ತಿಳಿದಿದೆ.

ಈವರೆಗೆ 1,615 ಮಂದಿಯನ್ನು ಅಫ್ಘಾನಿಸ್ತಾನದಿಂದ ಬ್ರಿಟನ್‌ಗೆ  ಸ್ಥಳಾಂತರಿಸಲಾಗಿದೆ ಎಂದು ಬೋರಿಸ್‌ ಹೇಳಿದ್ದಾರೆ. ಈ ಪೈಕಿ 399 ಮಂದಿ ಬ್ರಿಟಿಷ್ ಪ್ರಜೆಗಳು, 320 ರಾಯಭಾರ ಸಿಬ್ಬಂದಿ  402 ಮಂದಿ ಅಫ್ಘಾನಿಸ್ತಾನಿ ನಾಗರೀಕರು ಎಂದು ವಿವರಿಸಿದ್ದಾರೆ. 

ಮತ್ತೊಂದೆಡೆ, ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ವಿಫಲರಾಗಿದ್ದಾರೆ ಎಂದು ವ್ಯಾಪಕ ಟೀಕೆಗಳು ಕೇಳಿಬಂದಿವೆ. ವಿರೋಧ ಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸಿವೆ. ಆದರೆ ಪ್ರಧಾನಿ ಬೋರಿಸ್ ಮಾತ್ರ ರಾಬ್ ಅವರ ಪರ ನಿಂತಿದ್ದಾರೆ. 

ಅಫ್ಘಾನಿಸ್ತಾನದಿಂದ ನಾಗರಿಕರ  ಸ್ಥಳಾಂತರಿಸುವಲ್ಲಿ ರಾಬ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ  ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com