ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ತಾಲಿಬಾನ್ ನೆರವು: ಇಮ್ರಾನ್ ಖಾನ್' ಪಾರ್ಟಿ ಲೀಡರ್ ಹೇಳಿಕೆ; ವಿಡಿಯೋ

ಪಾಕಿಸ್ತಾನ ಸರ್ಕಾರ  ಕಾಶ್ಮೀರದಲ್ಲಿ ತಾಲಿಬಾನ್ ನೆರವನ್ನು ಪಡೆಯುವ ಬಗ್ಗೆ ಮಾತನಾಡಿರುವುದಾಗಿ ಆ ದೇಶದ ಆಡಳಿತಾರೂಢ ತೆಹ್ರಿಕ್ -ಇ- ಇನ್ಸಾಫ್ ಪಕ್ಷದ ಮುಖಂಡೆಯೊಬ್ಬಳು ಟಿವಿ ಶೋ ವೊಂದರಲ್ಲಿ ಹೇಳುವುದರೊಂದಿಗೆ ಪಾಕಿಸ್ತಾನ ಮಿಲಿಟರಿ ತಾಲಿಬಾನ್ ನೊಂದಿಗೆ ನಿಕಟ ಒಪ್ಪಂದ ಮತ್ತು ಅದರ ಭಾರತ ವಿರೋಧಿ ಅಜೆಂಡಾವನ್ನು ಒಪ್ಪಿಕೊಂಡಿದ್ದಾರೆ.
ಟಿವಿ ಶೋನಲ್ಲಿ ಮಾತನಾಡುತ್ತಿರುವ ನೀಲಂ ( ಮಧ್ಯಭಾಗ)
ಟಿವಿ ಶೋನಲ್ಲಿ ಮಾತನಾಡುತ್ತಿರುವ ನೀಲಂ ( ಮಧ್ಯಭಾಗ)

ಇಸ್ಲಾಮಬಾದ್: ಪಾಕಿಸ್ತಾನ ಸರ್ಕಾರ  ಕಾಶ್ಮೀರದಲ್ಲಿ ತಾಲಿಬಾನ್ ನೆರವನ್ನು ಪಡೆಯುವ ಬಗ್ಗೆ ಮಾತನಾಡಿರುವುದಾಗಿ ಆ ದೇಶದ ಆಡಳಿತಾರೂಢ ತೆಹ್ರಿಕ್ -ಇ- ಇನ್ಸಾಫ್ ಪಕ್ಷದ ಮುಖಂಡೆಯೊಬ್ಬಳು ಟಿವಿ ಶೋ ವೊಂದರಲ್ಲಿ ಹೇಳುವುದರೊಂದಿಗೆ ಪಾಕಿಸ್ತಾನ ಮಿಲಿಟರಿ ತಾಲಿಬಾನ್ ನೊಂದಿಗೆ ನಿಕಟ ಒಪ್ಪಂದ ಮತ್ತು ಅದರ ಭಾರತ ವಿರೋಧಿ ಅಜೆಂಡಾವನ್ನು ಒಪ್ಪಿಕೊಂಡಿದ್ದಾರೆ.

ಕಾಶ್ಮೀರದಲ್ಲಿ ಪಾಕಿಸ್ತಾನದೊಂದಿಗೆ ಕೈ ಜೋಡಿಸುವುದಾಗಿ ತಾಲಿಬಾನ್ ಘೋಷಿಸಿದೆ.  ನಿಮ್ಮೊಂದಿಗೆ ಇದ್ದೇವೆ. ಕಾಶ್ಮೀರದಲ್ಲಿ ನೆರವು ನೀಡುವುದಾಗಿ ತಾಲಿಬಾನ್ ಹೇಳಿರುವುದಾಗಿ  ಪಿಟಿಐ ಮುಖಂಡೆ ನೀಲಂ ಇರ್ಶಾದ್ ಶೇಕ್  ಟಿವಿ ಚಾನೆಲ್ ವೊಂದರ ಚರ್ಚೆ ವೇಳೆಯಲ್ಲಿ ಹೇಳಿಕೆ ನೀಡಿದ್ದಾರೆ.

ಕೂಡಲೇ ಪಿಟಿಐ ನಾಯಕಿಯನ್ನು ಎಚ್ಚರಿಸಿದ ಆ್ಯಂಕರ್, ನೀವು ಏನು ಹೇಳುತ್ತಿದ್ದೀರಾ ಎಂಬುದರ ಬಗ್ಗೆ ಅರಿವಿದೆಯೇ? ಈ ಶೋ ವಿಶ್ವದಾದ್ಯಂತ ಪ್ರಸಾರವಾಗಲಿದ್ದು, ಭಾರತೀಯರು ವೀಕ್ಷಿಸಲಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, ತನ್ನ ಹೇಳಿಕೆಯನ್ನು ಮುಂದುವರೆಸಿದ ಇರ್ಶಾದ್ ಶೇಕ್,  ತಾಲಿಬಾನ್ ಗಳನ್ನು ಸರಿಯಾಗಿ ಕಾಣದ ಕಾರಣ ಪಾಕಿಸ್ತಾನಕ್ಕೆ ನೆರವು ನೀಡಲಿದ್ದಾರೆ ಎಂದರು.

ಇದಕ್ಕೂ ಮುನ್ನ ತಾಲಿಬಾನ್ ಪೋಷಣೆಯಲ್ಲಿ   ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆಗಳು ಪ್ರಮುಖ ಪಾತ್ರವಿರುವುದಾಗಿ ಅಫ್ಘಾನಿಸ್ತಾನ ಸರ್ಕಾರ ಆರೋಪಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com