ಕಾಬೂಲ್ ಅಂತಾರಾಷ್ಟ್ರೀ ವಿಮಾನ ನಿಲ್ದಾಣದ ಬಳಿ ಅವಳಿ ಬಾಂಬ್ ಸ್ಫೋಟ; 13 ಸಾವು

ಕಾಬೂಲ್‌ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು ಉಗ್ರ ದಾಳಿ ಬೆದರಿಕೆ ಇದೆ ಎಂದು ಬ್ರಿಟನ್ ಹೇಳಿಕೆ ಬೆನ್ನಲ್ಲೇ ನಿಲ್ದಾಣದ ಹೊರಗೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. 
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಕಾಬೂಲ್: ಕಾಬೂಲ್‌ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು ಉಗ್ರ ದಾಳಿ ಬೆದರಿಕೆ ಇದೆ ಎಂದು ಬ್ರಿಟನ್ ಹೇಳಿಕೆ ಬೆನ್ನಲ್ಲೇ ನಿಲ್ದಾಣದ ಹೊರಗೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. 

ಆಗಸ್ಟ್ 31ರೊಳಗೆ ಕಾಬೂಲ್ ತೊರೆಯುವಂತೆ ಅಮೆರಿಕಾ, ಬ್ರಿಟನ್ ಸೇರಿದಂತೆ ಇನ್ನಿತರ ರಾಷ್ಟ್ರಗಳಿಗೆ ತಾಲಿಬಾನ್ ಎಚ್ಚರಿಕೆ ನೀಡಿತ್ತು. ಇನ್ನು ಗಡುವು ಮುಗಿಯುವುದರೊಳಗಾಗಿ ಕಾಬೂಲ್ ನಲ್ಲಿ ಬಾಂಬ್ ಸ್ಫೋಟಗಳು ವರದಿಯಾಗುತ್ತಿವೆ. 

ಮೂಲಗಳ ಪ್ರಕಾರ, ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದ್ದು ಇನ್ನು 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅರ್ಧ ಗಂಟೆ ಅವಧಿಯಲ್ಲಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನದ ಪಕ್ಕದಲ್ಲೇ ಎರಡು ಬಾಂಬ್ ಸ್ಫೋಟಗಳು ನಡೆದಿವೆ. ಸ್ಫೋಟದಲ್ಲಿ ಹಲವರು ಸಾವನ್ನಪ್ಪಿರುವ ಸಂಖ್ಯೆ ಇದೆ. ನಿಲ್ದಾಣದ ಗೇಟ್ ಬಳಿ ಒಂದು ಸ್ಫೋಟ ಸಂಭವಿಸಿದ್ದರೆ ಮತ್ತೊಂದು ಸ್ಫೋಟ ವಿಮಾನ ನಿಲ್ದಾಣದ ಹೊರಗೆ ಹೋಟೆಲ್ ಬಳಿ ನಡೆದಿದೆ. ಅಮೆರಿಕಾ, ಬ್ರಿಟನ್ ದೇಶದ ಯೋಧರಿದ್ದ ಹೋಟೆಲ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com