
ಕಟ್ಟಡ ಉರಿಯುತ್ತಿರುವ ದೃಶ್ಯ
ಮಿಲಾನ್: ಇಟಲಿಯ ಮಿಲಾನ್ ನಗರದಲ್ಲಿನ ಬಹುಮಹಡಿಗಳ ಜನವಸತಿ ಕಟ್ಟಡ ಜನರು ನೋಡ ನೋಡುತ್ತಿರುವಂತೆಯೇ ಸುಟ್ಟು ಭಸ್ಮವಾಗಿದೆ.
ಅದೃಷ್ಟವಶಾತ್ ಬೆಂಕಿ ಪೂರ್ತಿ ಕಟ್ಟಡಕ್ಕ ಹಬ್ಬುವ ಮುನ್ನವೇ ಅಲ್ಲಿನ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಹೀಗಾಗಿ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
No injuries reported after a high-rise fire spread rapidly through a 20-story residential building in Milan, Italy.
— ABC News (@ABC) August 29, 2021
The city’s mayor said firefighters were kicking down doors, apartment by apartment, to make sure there were no victims. https://t.co/B2kYnc5YOC pic.twitter.com/cucs2Si9Vf
200 ಅಡಿಗಳಷ್ಟು ಎತ್ತರದ 20 ಮಹಡಿಗಳ ಕಟ್ಟಡ ಹೊತ್ತಿ ಉರಿಯಲು ಕಾರಣ ಇನ್ನೂ ಪತ್ತೆಯಾಗಿಲ್ಲ. ಇಡೀ ಕಟ್ಟಡಕ್ಕೆ ಬೆಂಕಿ ಹತ್ತಿ ಉರಿಯುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಟ್ಟಡದ ಒಂದೊಂದು ಕೋಣೆಯ ಬಾಗಿಲನ್ನೂ ತಟ್ಟಿ ಯಾರೊಬ್ಬರೂ ಕಟ್ಟಡದಲ್ಲಿ ಸಿಲುಕಿಕೊಂಡಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ.