ಕಾಬೂಲ್ ನಲ್ಲಿ ಅಮೆರಿಕ ಡ್ರೋನ್ ಸ್ಟ್ರೈಕ್: 3 ಮಕ್ಕಳ ಸಾವು, ಜೀವ ಹಾನಿಯ ಬಗ್ಗೆ ಸಂಪೂರ್ಣ ಅರಿವಿದೆ ಎಂದ ಯುಎಸ್

ಕಾಬೂಲ್ ನಲ್ಲಿ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಸಾಗುತ್ತಿದ್ದ ವಾಹನದ ಮೇಲೆ ಅಮೆರಿಕ ನಡೆಸಿದ ಡ್ರೋನ್ ಸ್ಟ್ರೈಕ್ ಘಟನೆಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿವೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಡ್ರೋನ್ ದಾಳಿಗೆ ಗುರಿಯಾಗಿದ್ದ ವಾಹನ
ಡ್ರೋನ್ ದಾಳಿಗೆ ಗುರಿಯಾಗಿದ್ದ ವಾಹನ

ಕಾಬೂಲ್: ಕಾಬೂಲ್ ನಲ್ಲಿ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಸಾಗುತ್ತಿದ್ದ ವಾಹನದ ಮೇಲೆ ಅಮೆರಿಕ ನಡೆಸಿದ ಡ್ರೋನ್ ಸ್ಟ್ರೈಕ್ ಘಟನೆಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿವೆ ಎಂಬ ಮಾಹಿತಿ ಬಹಿರಂಗಗೊಂಡಿದೆ. 

ಅಮೆರಿಕ ಹೇಳುವ ಪ್ರಕಾರ ವಿಮಾನ ನಿಲ್ದಾಣದತ್ತ ಸಾಗುತ್ತಿದ್ದ ವಾಹನದಲ್ಲಿ ಬೃಹತ್ ಪ್ರಮಾಣದ ಸ್ಫೋಟಕಗಳಿದ್ದವು ಹಾಗೂ ಈ ಮೂಲಕ ವಿಮಾನ ನಿಲ್ದಾಣದಕ್ಕೆ ಅಪಾಯ ತಂದೊಡ್ಡುವ ಸಂಚನ್ನು ಐಎಸ್ಐಎಸ್-ಕೆ ರೂಪಿಸಿತ್ತು. 

"ಡ್ರೋನ್ ಸ್ಟ್ರೈಕ್ ಬಳಿಕ ಉಂಟಾಗಿರುವ ದಾಳಿಯ ಪರಿಣಾಮಗಳ ಬಗ್ಗೆ ಅಮೆರಿಕದ ಕೇಂದ್ರ ಕಮಾಂಡ್ ನ ವಕ್ತಾರ ಕ್ಯಾಪ್ಟನ್ ಬಿಲ್ ಅರ್ಬನ್, ವಾಹನದ ಮೇಲೆ ಡ್ರೋನ್ ದಾಳಿ ನಡೆದ ಬಳಿಕ ಉಂಟಾಗಿರಬಹುದಾದ ಸಾವು-ನೋವುಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ" ಎಂದು ಹೇಳಿದ್ದಾರೆ

"ಡ್ರೋನ್ ದಾಳಿಯ ಪರಿಣಾಮವನ್ನು ಮೌಲ್ಯಮಾಪನ ಮಾಡುತ್ತಿದ್ದು, ಈ ದಾಳಿಯಲ್ಲಿ ಏರ್ ಪೋರ್ಟ್ ಗೆ ಬಂದೊದಗಿದ್ದ ಬಹುದೊಡ್ಡ ಆಪತ್ತು ನಿವಾರಣೆಯಾಗಿದೆ" ಎಂದು ಅರ್ಬನ್ ಹೇಳಿದ್ದಾರೆ.

"ಈ ದಾಳಿಯಲ್ಲಿ ಒಂದು ವೇಳೆ ಅಮಾಯಕ ಜೀವಗಳಿಗೆ ಹಾನಿಯಾಗಿದ್ದಲ್ಲಿ ಅಮೆರಿಕ ಅದಕ್ಕಾಗಿ ತೀವ್ರವಾಗಿ ದುಃಖಿಸುತ್ತದೆ" ಎಂದು ಹೇಳಿದ್ದಾರೆ. "ದಾಳಿಯ ನಂತರ ಏನಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ,  ತನಿಖೆ ಪ್ರಗತಿಯಲ್ಲಿದೆ" ಎಂದಷ್ಟೇ ಅರ್ಬನ್ ಮಾಹಿತಿ ನೀಡಿದ್ದಾರೆ

ಇದೇ ವೇಳೆ ಅಫ್ಘಾನಿಸ್ತಾನದ ಅಧಿಕಾರಿ ದಾಳಿಯ ಬಗ್ಗೆ ಮಾಹಿತಿ ನೀಡಿದ್ದು ಮೂವರು ಮಕ್ಕಳು ಅಮೆರಿಕದ ಡ್ರೋನ್ ಸ್ಟ್ರೈಕ್ ನಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ.

ಅಮೆರಿಕದ ಅಧಿಕಾರಿಗಳ ಪ್ರಕಾರ ಸ್ಫೋಟಕ ತುಂಬಿದ್ದ ವಾಹನದ ಮೂಲಕ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಮತ್ತೊಂದು ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿದೇಶಗಳ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿರುವಾಗ ಇಂತಹ ದಾಳಿಗೆ ಯೋಜನೆ ರೂಪಿಸಲಾಗಿತ್ತು ಎನ್ನುವುದು ಗಮನಾರ್ಹ ಅಂಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com