ತಾಲಿಬಾನ್ ಆಡಳಿತದಲ್ಲಿ ಯುವಕ, ಯುವತಿ ಒಟ್ಟಿಗೆ ಕಲಿಯುವಂತಿಲ್ಲ; ಆದರೆ, ಮಹಿಳೆಯರ ಶಿಕ್ಷಣಕ್ಕೆ ಅವಕಾಶ

ಮಹಿಳೆಯರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಡೆಸಲು ತಾಲಿಬಾನ್ ಅವಕಾಶ ನೀಡಿದೆ. ಆದರೆ, ಹೊಸ ನಿಯಮಗಳ ಅಡಿಯಲ್ಲಿ ಯುವಕ ಮತ್ತು ಯುವತಿಯರು ಒಟ್ಟಿಗೆ ಕಲಿಕೆಯಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ ಎಂದು ತಾಲಿಬಾನ್ ಹಂಗಾಮಿ ಉನ್ನತ ಶಿಕ್ಷಣ ಸಚಿವ ಭಾನುವಾರ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರು
ಮುಸ್ಲಿಂ ಮಹಿಳೆಯರು
Updated on

ಕಾಬೂಲ್: ಮಹಿಳೆಯರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಡೆಸಲು ತಾಲಿಬಾನ್ ಅವಕಾಶ ನೀಡಿದೆ. ಆದರೆ, ಹೊಸ ನಿಯಮಗಳ ಅಡಿಯಲ್ಲಿ ಯುವಕ ಮತ್ತು ಯುವತಿಯರು ಒಟ್ಟಿಗೆ ಕಲಿಕೆಯಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ ಎಂದು ತಾಲಿಬಾನ್ ಹಂಗಾಮಿ ಉನ್ನತ ಶಿಕ್ಷಣ ಸಚಿವ ಭಾನುವಾರ ಹೇಳಿದ್ದಾರೆ.

ತಾಲಿಬಾನ್ ಆಡಳಿತ 90ರ ದಶಕದಲ್ಲಿ ಹುಡುಗಿಯರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು, ಆಗಸ್ಟ್ 15 ರಂದು ಮತ್ತೆ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಗಳು ಭಿನ್ನ ಆಡಳಿತ ನೀಡುವ ಭರವಸೆ ನೀಡಿದ್ದರು.

ಶರಿಯಾ ಕಾನೂನಿನ ಅನ್ವಯ ಅಫ್ಘಾನಿಸ್ತಾನದ ಜನತೆ ಉನ್ನತ ಶಿಕ್ಷಣ ಪಡೆಯುವುದನ್ನು ಮುಂದುವರೆಸಬಹುದಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕಲಿಯುವ ವಾತಾವರಣ ಸೃಷ್ಟಿಸಲಾಗುತ್ತದೆ ಎಂದು ತಾಲಿಬಾನ್ ಹಂಗಾಮಿ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಖಿ ಹಖಾನಿ ಸಭೆಯಲ್ಲಿ ತಿಳಿಸಿದರು.

ಇಸ್ಲಾಮಿಕ್ , ರಾಷ್ಟ್ರೀಯತೆ ಮತ್ತು ಐತಿಹಾಸಿಕ ಮೌಲ್ಯಗಳ ಆಧಾರದ ಮೇಲೆ ಇಸ್ಲಾಮಿಕ್ ಶೈಕ್ಷಣಿಕ ವ್ಯವಸ್ಥೆ ಸೃಷ್ಟಿಸುವುದು ಹಾಗೂ ಮತ್ತೊಂದು ಕಡೆ ಇತರೆ ರಾಷ್ಟ್ರಗಳೊಂದಿಗೆ ಸ್ಪರ್ಧಿಸುವುದು ತಾಲಿಬಾನ್ ನಿರೀಕ್ಷೆಯಾಗಿದೆ ಎಂದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಟ್ಟದಿಂದಲೂ ಹುಡುಗು- ಹುಡುಗಿ ಪ್ರತ್ಯೇಕವಾಗಿ ಕಲಿಯುವ ವ್ಯವಸ್ಥೆ ಅಫ್ಘಾನಿಸ್ತಾನದಲ್ಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com