ಅಫ್ಘಾನಿಸ್ತಾನ ತೊರೆಯುವ ಮುನ್ನ 73 ಏರ್ಕ್ರಾಫ್ಟ್ ಶಸ್ತ್ರಸಜ್ಜಿತ ವಾಹನಗಳನ್ನು ಹಾಳುಗೆಡವಿದ ಅಮೆರಿಕನ್ ಸೈನಿಕರು!

ಅಮೆರಿಕದ ಕಡೆಯ ಸೈನಿಕ ಆಫ್ಘನ್ ನೆಲದಲ್ಲಿ ಇರುವವರೆಗೂ ನಮ್ಮ ಶಸ್ತ್ರಾಗಾರವನ್ನು ಉಳಿಸಿಕೊಳ್ಳಲು ತೀರ್ಮಾನಿಸಿದ್ದೆವು ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ಅಮೆರಿಕದ ಕಟ್ಟ ಕಡೆಯ ಸೇನಾ ತುಕಡಿಯ ಸೈನಿಕರು ಅಫ್ಘಾನಿಸ್ತಾನ ತೊರೆಯುವ ಮುನ್ನ ಕೊಂಡೊಯ್ಯಲಾಗದ ರಾಕೆಟ್ ರಕ್ಷಣಾ ವ್ಯವಸ್ಥೆ ಸೇರಿದಂತೆ ಹಲವು ಸೇನಾವಾಹನಗಳನ್ನು ನಿಷ್ಕ್ರಿಯಗೊಳಿಸಿ ಹೋಗಿದ್ದಾರೆ. ಈ ಬಗ್ಗೆ ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. 

ಅಮೆರಿಕ ಸೈನಿಕರು ನಿಷ್ಕ್ರಿಯಗೊಳಿಸಿರುವ ಸೇನಾ ಸಾಮಗ್ರಿಯಲ್ಲಿ 73 ಯುದ್ಧವಿಮಾನಗಳೂ ಸೇರಿವೆ. ನಿಷ್ಕ್ರಿಯಗೊಳಿಸಲಾಗಿರುವ ಯುದ್ಧವಿಮಾನಗಳನ್ನು ಇನ್ನುಮುಂದೆ ಯಾರೂ ಬಳಸಲಾಗುವುದಿಲ್ಲ ಎಂದು ಅಮೆರಿಕ ಖಚಿತ ಪಡಿಸಿದೆ.

70 ಸೇನಾ ಲಾರಿಗಳು, 27 ಹಮ್ಮರ್ ಜೀಪುಗಳನ್ನೂ ಸೇನೆ ತಾಲಿಬಾನ್ ಕೈಗೆ ಸಿಗದಂತೆ, ಸಿಕ್ಕರೂ ಬಳಸಲು ಸಾಧ್ಯವಾಗದಂತೆ ಅಮೆರಿಕನ್ ಸೈನಿಕರು ಹಾಳುಗೆಡವಿದ್ದಾರೆ. ಒಂದೊಂದು ವಾಹನದ ಬೆಲೆಯೂ ಕೋಟ್ಯಂತರ ರೂ. ಗಳಷ್ಟಿದೆ.

ಅಮೆರಿಕದ ಕಡೆಯ ಸೈನಿಕ ಆಫ್ಘನ್ ನೆಲದಲ್ಲಿ ಇರುವವರೆಗೂ ನಮ್ಮ ಶಸ್ತ್ರಾಗಾರವನ್ನು ಉಳಿಸಿಕೊಳ್ಳಲು ತೀರ್ಮಾನಿಸಿದ್ದೆವು. ತಾಲಿಬಾನ್ ಆಡಳಿತದಲ್ಲಿ ಪರಿಸ್ಥಿತಿ ಯಾವ ಕ್ಷಣದಲ್ಲಿ ಅಪಾಯಕಾರಿಯಾಗುವುದೋ ಎಂದು ಹೇಳಲು ಆಗದೆ ಇರುವುದರಿಂದ ತಮ್ಮ ಶಸ್ತ್ರಾಗಾರವನ್ನು ಉಳಿಸಿಕೊಂಡೆವು ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com