ಓಮಿಕ್ರಾನ್ ರೂಪಾಂತರಿಯಿಂದ ಇಲ್ಲಿಯವರೆಗೂ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ: ಡಬ್ಲ್ಯೂಹೆಚ್ ಒ

ಕೋವಿಡ್-19 ರೂಪಾಂತರಿ ಓಮಿಕ್ರಾನ್ ಹೊಸ ತಳಿಯಿಂದ ಇಲ್ಲಿಯವರೆಗೂ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಿನಿವಾ: ಕೋವಿಡ್-19 ರೂಪಾಂತರಿ ಓಮಿಕ್ರಾನ್ ಹೊಸ ತಳಿಯಿಂದ ಇಲ್ಲಿಯವರೆಗೂ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ. ಹೊಸ ರೂಪಾಂತರದೊಂದಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿರುವ ರಾಷ್ಟ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಇಲ್ಲಿಯವರೆಗೂ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 

ಇಲ್ಲಿಯವರೆಗೂ ಯಾವುದೇ ಓಮಿಕ್ರಾನ್ ಸಂಬಂಧಿತ ಸಾವಿನ ಪ್ರಕರಣಗಳನ್ನು ನೋಡಿಲ್ಲ ಎಂದು ಡಬ್ಲ್ಯೂ ಹೆಚ್ ಒ ವಕ್ತಾರ ಕ್ರಿಶ್ಚಿಯನ್ ಲಿಂಡ್ಮಿಯರ್ ಸುದ್ದಿಗಾರರಿಗೆ ತಿಳಿಸಿದರು. ಎಲ್ಲಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ, ಇನ್ನೂ ಹೆಚ್ಚಿನ  ಸಾಕ್ಷ್ಯಾಧಾರಗಳನ್ನು ಹುಡುಕುತ್ತೇವೆ.  ಹೆಚ್ಚಿನ ರಾಷ್ಟ್ರಗಳು ಜನರಲ್ಲಿ ಪರೀಕ್ಷೆ ನಡೆಸುತ್ತಿದ್ದು, ಓಮಿಕ್ರಾನ್ ರೂಪಾಂತರ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿವೆ, ಇನ್ನೂ ಹೆಚ್ಚಿನ ಕೇಸ್ ಗಳು, ಮಾಹಿತಿಯನ್ನು ಪತ್ತೆ ಮಾಡುತ್ತೇವೆ ಎಂದು ಅವರು ಹೇಳಿದರು.

ಓಮಿಕ್ರಾನ್ ಹೆಚ್ಚಾಗಬಹುದು, ಅದು ಎಲ್ಲಿ ಪ್ರಾಬಲ್ಯ ಎಂಬ ಅಂಶವನ್ನು ಪತ್ತೆ ಮಾಡಲಾಗುವುದು, ರೂಪಾಂತರ ಪ್ರಬಲವಾಗುವ ಹಂತಕ್ಕೂ ಬರಬಹುದು, ಆದರೆ,  ಈ ಹಂತದಲ್ಲಿ, ಅತ್ಯಂತ ಪ್ರಬಲವಾದ ರೂಪಾಂತರವು ಡೆಲ್ಟಾ ಆಗಿ ಉಳಿದಿದೆ. ಎರಡು ವಾರಗಳ ಮುಂಚೆಯೇ ಕೆಲವೊಂದು ರಾಷ್ಟ್ರಗಳಲ್ಲಿ ನಿರ್ಬಂಧಗಳನ್ನು ಹೇರಿದ್ದರಿಂದ ಸಾವಿನ ಸಂಖ್ಯೆ ವರದಿಯಾಗಿಲ್ಲ ಎಂದು ಹೇಳಿದ ಕ್ರಿಶ್ಚಿಯನ್ ಲಿಂಡ್ಮಿಯರ್, ಜನರು ಡೆಲ್ಟಾ, ಓಮಿಕ್ರಾನ್ ವಿರುದ್ಧ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com