ಕೋವಿಡ್ ಬೂಸ್ಟರ್ ಲಸಿಕೆ ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡುತ್ತದೆ: ಫೈಜರ್
ಆರಂಭಿಕ ಎರಡು ಡೋಸ್‌ಗಳು ಗಮನಾರ್ಹವಾಗಿ ಕಡಿಮೆ ಪರಿಣಾಮಕಾರಿಯಾಗಿ ಕಂಡುಬಂದರೂ ಸಹ ತನ್ನ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಹೊಸ ಓಮಿಕ್ರಾನ್ ರೂಪಾಂತರದಿಂದ ರಕ್ಷಿಸಬಹುದು ಎಂದು ಫೈಜರ್ ಬುಧವಾರ ಹೇಳಿದೆ.
Published: 08th December 2021 09:59 PM | Last Updated: 09th December 2021 01:22 PM | A+A A-

ಫೈಜರ್
ನ್ಯೂಯಾರ್ಕ್: ಆರಂಭಿಕ ಎರಡು ಡೋಸ್‌ಗಳು ಗಮನಾರ್ಹವಾಗಿ ಕಡಿಮೆ ಪರಿಣಾಮಕಾರಿಯಾಗಿ ಕಂಡುಬಂದರೂ ಸಹ ತನ್ನ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಹೊಸ ಓಮಿಕ್ರಾನ್ ರೂಪಾಂತರದಿಂದ ರಕ್ಷಿಸಬಹುದು ಎಂದು ಫೈಜರ್ ಬುಧವಾರ ಹೇಳಿದೆ.
ಫೈಜರ್ ಮತ್ತು ಅದರ ಪಾಲುದಾರ ಬಯೋಎನ್‌ಟೆಕ್ ಲ್ಯಾಬ್ ಪರೀಕ್ಷೆಗಳು ಬೂಸ್ಟರ್ ಡೋಸ್ ಓಮಿಕ್ರಾನ್ ವೈರಸ್ ಅನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಸೃಷ್ಟಿಸುವ ಮಟ್ಟವನ್ನು 25 ಪಟ್ಟು ಹೆಚ್ಚಿಸಿದೆ ಎಂದು ತೋರಿಸಿದೆ.
ಫೈಜರ್ ಪ್ರಾಥಮಿಕ ಪ್ರಯೋಗಾಲಯದ ಡೇಟಾವನ್ನು ಪತ್ರಿಕಾ ಪ್ರಕಟಣೆ ನೀಡಿದೆ. ಆದರೆ ಇದು ಇನ್ನೂ ವೈಜ್ಞಾನಿಕ ಪರಿಶೀಲನೆಗೆ ಒಳಪಟ್ಟಿಲ್ಲ. ಕಂಪನಿಗಳು ಈಗಾಗಲೇ ಅಗತ್ಯವಿದ್ದಲ್ಲಿ ಓಮಿಕ್ರಾನ್-ನಿರ್ದಿಷ್ಟ ಲಸಿಕೆಯನ್ನು ಕಂಡುಹಿಡಿಯುವ ಕೆಲಸದಲ್ಲಿ ತೊಡಗಿದೆ.
COVID-19 ಲಸಿಕೆಗಳ ಮೂರನೇ ಡೋಸ್ ಪ್ರತಿಕಾಯಗಳಲ್ಲಿನ ಎತ್ತರದ ಜಿಗಿತವು ಪರಿಣಾಮಕಾರಿತ್ವದಲ್ಲಿನ ಯಾವುದೇ ಇಳಿಕೆಯನ್ನು ಎದುರಿಸಲು ಸಾಕಾಗಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
'ಲಸಿಕೆಯ ಎರಡು ಡೋಸ್‌ಗಳು ಇನ್ನೂ ಒಮಿಕ್ರಾನ್ ರೂಪಾಂತರಿಯಿಂದ ಉಂಟಾಗುವ ತೀವ್ರವಾದ ಕಾಯಿಲೆಯ ವಿರುದ್ಧ ರಕ್ಷಣೆ ನೀಡಬಹುದಾದರೂ, ನಮ್ಮ ಲಸಿಕೆಯ ಮೂರನೇ ಡೋಸ್‌ನೊಂದಿಗೆ ರಕ್ಷಣೆಯನ್ನು ಗರಿಷ್ಠಗೊಳಿಸಲಾಗಿದೆ ಎಂಬುದು ಈ ಪ್ರಾಥಮಿಕ ಮಾಹಿತಿಯಿಂದ ಸ್ಪಷ್ಟವಾಗಿದೆ ಎಂದು ಫೈಜರ್ ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.