ಮಾಸ್ಕ್ ಬದಲು ಮುಖಕ್ಕೆ ಅಂಡರ್ ವೇರ್ ಹಾಕಿದ ಪ್ರಯಾಣಿಕ: ವಿಮಾನದಿಂದ ಕೆಳಗಿಳಿಸಿದ ಸಿಬ್ಬಂದಿ!
ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೃಷ್ಟಿಸಿದ ಅವಾಂತರದಿಂದ ಬೇಸತ್ತ ಸಿಬ್ಬಂದಿಯೇ ಸದರಿ ವ್ಯಕ್ತಿಯನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.
Published: 17th December 2021 01:51 PM | Last Updated: 17th December 2021 02:12 PM | A+A A-

ಅಂಡರ್ ವೇರ್ ಧರಿಸಿದ ಪ್ರಯಾಣಿಕ
ಫ್ಲೋರಿಡಾ: ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೃಷ್ಟಿಸಿದ ಅವಾಂತರದಿಂದ ಬೇಸತ್ತ ಸಿಬ್ಬಂದಿಯೇ ಸದರಿ ವ್ಯಕ್ತಿಯನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.
ಇದರೊಂದಿಗೆ ಈ ಘಟನೆ ವಿಡಿಯೋ ಈಗ ವೈರಲ್ ಆಗಿದೆ. ಫ್ಲೋರಿಡಾದ ಆಡಮ್ ಜೆನ್ನಿ ಎಂಬ ವ್ಯಕ್ತಿ ವಾಷಿಂಗ್ಟನ್ ಡಿಸಿಗೆ ತೆರಳಲು ಫೋರ್ಟ್ ಲಾಡರ್ ಡೇಲ್‌ನಿಂದ ಯುನೈಟೆಡ್ ಏರ್‌ಲೈನ್ಸ್ ವಿಮಾನ ಹತ್ತಿದರು.
ವಿಮಾನ ಹತ್ತಿದ ನಂತರ, ಎಲ್ಲಾ ಪ್ರಯಾಣಿಕರು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸಿಬ್ಬಂದಿ ಸೂಚಿಸಿದರು. ಇದರಿಂದ ಎಲ್ಲಾ ಪ್ರಯಾಣಿಕರು ಮಾಸ್ಕ್ ಧರಿಸಿದರು. ಆದರೆ, ಈ ಕ್ರಮದಲ್ಲಿ ಆಡಮ್ ಮುಖಕ್ಕೆ ಮಾಸ್ಕ್ ಬದಲು ಬದಲಿಗೆ ಅಂಡರ್ ವೇರ್ ಧರಿಸಿದ್ದರು. ಇದನ್ನು ಗಮನಿಸಿದ ಸಹ ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶದ ಹಳ್ಳಿಯಿಂದ ಕಳವಾಗಿದ್ದ ದೇವರ ವಿಗ್ರಹ ಲಂಡನ್ ನಲ್ಲಿ ಪತ್ತೆ: ಭಾರತ ಹೈಕಮಿಷನ್ ಮಾಹಿತಿ
ದೂರಿನ ಹಿನ್ನಲೆಯಲ್ಲಿ ಕೂಡಲೇ ಆಡಂ ಬಳಿಗೆ ಬಂದ ವಿಮಾನ ಸಿಬ್ಬಂದಿ ಮುಖಕ್ಕೆ ಹಾಕಿಕೊಂಡಿದ್ದ ಒಳ ಉಡುಪು ತೆಗೆದು ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದರು. ನಾನು ಈವರೆಗೆ ಹತ್ತಾರು ವಿಮಾನಗಳಲ್ಲಿ ಅಂಡರ್ ವೇರ್ ಧರಿಸಿ ಪ್ರಯಾಣಿಸಿದ್ದೇನೆ ಯಾರೂಬ್ಬರು ಇದಕ್ಕೆ ಆಕ್ಷೇಪಿಸಿಲ್ಲ. ದೇಶದಲ್ಲಿ ಬಹಳಷ್ಟು ಸಂಗತಿಗಳು ಬದಲಾಗುತ್ತಿವೆ. ಇದು ಅಷ್ಟೇ ಇದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು? ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಆಡಂ ಉತ್ತರಿಸಿದ್ದಾನೆ.
ಆದರೆ ಸಿಬ್ಬಂದಿ ಬಹಳ ಹೊತ್ತು ಬುದ್ದಿ ಹೇಳಿದರೂ ಆಡಮ್ ಅವರ ಮಾತುಗಳನ್ನು ಕಡೆಗಣಿಸಿದ್ದಾನೆ, ಇದರಿಂದ ಸಿಟ್ಟಿಗೆದ್ದ ಸಿಬ್ಬಂದಿ ಆತನನ್ನು ವಿಮಾನದಿಂದ ಕೆಳಗಿಳಿಸಿದ್ದು ಈ ವಿಡಿಯೋ ವೈರಲ್ ಆಗುತ್ತಿದೆ.