'ಉರಿ' ದಾಳಿಯ ಬಳಿಕ ರದ್ದುಗೊಂಡಿದ್ದ ಸಾರ್ಕ್ ಶೃಂಗಸಭೆ ಮರು ಆಯೋಜನೆಗೆ ಪಾಕಿಸ್ತಾನ ಉತ್ಸುಕ

ಉರಿ ದಾಳಿಯ ಬಳಿಕ ಭಾರತದ ರಾಜತಾಂತ್ರಿಕ ನಡೆಯ ಪರಿಣಾಮ ರದ್ದುಗೊಂಡಿದ್ದ ಸಾರ್ಕ್ ಶೃಂಗಸಭೆಯನ್ನು ಮರು ಆಯೋಜನೆ ಮಾಡಲು ಪಾಕಿಸ್ತಾನ ಉತ್ಸಾಹ ತೋರಿದೆ. 
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಉರಿ ದಾಳಿಯ ಬಳಿಕ ಭಾರತದ ರಾಜತಾಂತ್ರಿಕ ನಡೆಯ ಪರಿಣಾಮ ರದ್ದುಗೊಂಡಿದ್ದ ಸಾರ್ಕ್ ಶೃಂಗಸಭೆಯನ್ನು ಮರು ಆಯೋಜನೆ ಮಾಡಲು ಪಾಕಿಸ್ತಾನ ಉತ್ಸಾಹ ತೋರಿದೆ. 

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಕೃತಕಾಗಿ ಸೃಷ್ಟಿಸಲಾಗಿದ್ದ ಅಡೆತಡೆಗಳು ಕೊನೆಗೊಂಡಾಗ, ಈಗಾಗಲೇ ವಿಳಂಬಗೊಂಡಿರುವ ಸಾರ್ಕ್ ರಾಷ್ಟ್ರಗಳ ಶೃಂಗಸಭೆಯನ್ನು ಪಾಕಿಸ್ತಾನ ಆಯೋಜನೆ ಮಾಡುವ ವಿಶ್ವಾಸ ವ್ಯಕಪಡಿಸಿದ್ದಾರೆ.

ಸಾರ್ಕ್ ನ ದಕ್ಷಿಣ ಏಷ್ಯಾ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳೊಂದಿಗಿನ ಸಭೆಯಲ್ಲಿ ಪಾಕ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. 

ಸಾರ್ಕ್ ರಾಷ್ಟ್ರಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ, ಪಾಕಿಸ್ತಾನಗಳಿದ್ದು 2014 ರಲ್ಲಿ ನಡೆದ ಶೃಂಗಸಭೆಯನ್ನು ಹೊರತುಪಡಿಸಿದರೆ 2016 ರಿಂದ ದ್ವೈವಾರ್ಷಿಕವಾಗಿ ಆಗಬೇಕಿದ್ದ ಸಭೆಗಳು ಪರಿಣಾಮಕಾರಿಯಾಗಿ ನಡೆದಿಲ್ಲ. 

2016 ರ ಸಾರ್ಕ್ ಶೃಂಗಸಭೆಯನ್ನು ಇಸ್ಲಾಮಾಬಾದ್ ನಲ್ಲಿ ನ.15-19 ರಂದು ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿತ್ತು. ಅದರೆ ಸೆ.18 ರಂದು ಜಮ್ಮು-ಕಾಶ್ಮೀರದ ಉರಿಯಲ್ಲಿನ ಭಾರತೀಯ ಸೇನಾ ಕ್ಯಾಂಪ್ ಮೇಲೆ ಪಾಕ್ ಉಗ್ರರು ನಡೆಸಿದ ದಾಳಿಯ ಪರಿಣಾಮ ಭಾರತದ ರಾಜತಾಂತ್ರಿಕ ನಡೆಯ ಪರಿಣಾಮ ಭಾರತಕ್ಕೆ ಎಲ್ಲಾ ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಿ ಸಾರ್ಕ್ ಶೃಂಗಸಭೆಯಿಂದ ಹೊರಗುಳಿದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com