ಕೋವಿಡ್-19 ಡೆಲ್ಟಾ ರೂಪಾಂತರಿ ತಡೆಗೆ ಲಸಿಕೆ ಅಭಿಯಾನದ ರೇಸ್ ನಲ್ಲಿ ಯುರೋಪ್

ಯುರೋಪ್ ನ ರಾಷ್ಟ್ರಗಳು ಕೋವಿಡ್-19 ಡೆಲ್ಟಾ ರೂಪಾಂತರಿ ತಡೆಗೆ ತೀವ್ರವಾಗಿ ಯತ್ನಿಸುತ್ತಿದ್ದು ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲು ಯತ್ನಿಸುತ್ತಿವೆ. 
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ಲಿಸ್ಬಾನ್: ಯುರೋಪ್ ನ ರಾಷ್ಟ್ರಗಳು ಕೋವಿಡ್-19 ಡೆಲ್ಟಾ ರೂಪಾಂತರಿ ತಡೆಗೆ ತೀವ್ರವಾಗಿ ಯತ್ನಿಸುತ್ತಿದ್ದು ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲು ಯತ್ನಿಸುತ್ತಿವೆ. 

ಯುರೋಪ್ ನಲ್ಲಿ ಬೇಸಿಗೆ ರಜೆಗಳ ತಿಂಗಳು ಪ್ರಾರಂಭವಾಗುತ್ತಿರುವುದು ಕೊರೋನಾ ತಡೆಗೆ   ಮತ್ತಷ್ಟು ಸವಾಲನ್ನೊಡ್ಡುತ್ತಿದೆ. 

ರಜೆ ದಿನಗಳಲ್ಲಿ ಹೆಚ್ಚು ಜನ ಸೇರುವ ಭೀತಿ ಇದ್ದು ಸರ್ಕಾರಕ್ಕೆ ಇವುಗಳನ್ನು ತಡೆಯುವುದು ಸವಾಲಿನ ಸಂಗತಿಯಾಗಿದೆ. ಯುವ ಸಮೂಹ ಸಾಮಾಜಿಕ ಅಂತರವನ್ನು ಕಡೆಗಣಿಸುತ್ತಿದ್ದರೆ ಯುರೋಪ್ ನ ಕೆಲವು ರಾಷ್ಟ್ರಗಳಲ್ಲಿ ಮನೆಯಿಂದ ಹೊರಹೋಗಬೇಕಾದರೆ ಮಾಸ್ಕ್ ಧರಿಸುವುದಕ್ಕೂ ವಿನಾಯಿತಿ ನೀಡಲಾಗಿದೆ. 

ಇನ್ನು ಡೆಲ್ಟಾ ರೂಪಾಂತರಿ ಹರಡುವುದನ್ನು ತಡೆಯುವುದಕ್ಕಾಗಿ ಲಸಿಕೆ ಅಭಿಯಾನ ಚುರುಕುಗೊಳಿಸಲು ಕೆಲವು ಸರ್ಕಾರಗಳು ಜನರಿಗೆ ಉಚಿತ ದಿನಸಿ, ಪ್ರಯಾಣ ಹಾಗೂ ಮನರಂಜನೆ, ಉಡುಗೊರೆಯ ವೋಚರ್ ಗಳೇ ಮೊದಲಾದ ಪ್ರೋತ್ಸಾಹ ಧನಗಳನ್ನು ಕೆಲವು ಸರ್ಕಾರಗಳು ಘೋಷಣೆ ಮಾಡಿವೆ. 

ಸೈಪ್ರಸ್ ಅಧ್ಯಕ್ಷ ಜನತೆಗೆ ಲಸಿಕೆ ಪಡೆಯುವುದನ್ನು ಉತ್ತೇಜಿಸಲು ದೇಶಭಕ್ತಿಯ ಪ್ರಜ್ಞೆಯನ್ನು ಜಾಗೃತಗೊಳಿಸುವಂತೆ ಕರೆ ನೀಡಿದ್ದಾರೆ. ಭಾಗಶಃ ಲಸಿಕೆ ಪಡೆಯುವ ಮಂದಿಗೆ ಅಥವಾ ಲಸಿಕೆ ಪಡೆಯದೇ ಇರುವ ಮಂದಿಯಲ್ಲಿ ಡೆಲ್ಟಾ ರೂಪಾಂತರಿಯ ಅಪಾಯ ಹೆಚ್ಚು ಕಾಡಲಿದೆ. 

ಆಗಸ್ಟ್ ತಿಂಗಳಾಂತ್ಯಕ್ಕೆ ಯುರೋಪಿಯನ್ ಯೂನಿಯನ್ ನಲ್ಲಿನ ಕೊರೋನಾ ಪ್ರಕರಣಗಳ ಪೈಕಿ ಶೇ.90 ರಷ್ಟು ಡೆಲ್ಟಾ ರೂಪಾಂತರಿಯಾಗಿರಲಿವೆ ಎಂದು ಅಲ್ಲಿನ ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹೇಳಿದೆ. 

ಡೆಲ್ಟಾ ವೈರಾಣುವಿನ ಹೋರಾಡಲು ಅತಿ ಹೆಚ್ಚಿನ ವೇಗದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಬಹಳ ಮುಖ್ಯವಾಗುತ್ತದೆ ಎಂದು ಇಸಿಡಿಸಿ ಎಚ್ಚರಿಸಿದೆ. "ವಿಶ್ವ ಆರೋಗ್ಯ ಸಂಸ್ಥೆ ಸಹ ಆತಂಕಕ್ಕೊಳಗಾಗಿದೆ. ಈ ರೂಪಾಂತರಿಗೆ ಘಾತೀಯ ಪ್ರಮಾಣದಲ್ಲಿ ಪ್ರಸರಣ ಬೆಳವಣಿಗೆ ಸಾಮರ್ಥ್ಯವಿದೆ" ಎಂದು ಯುರೋಪ್ ನ ಕೋವಿಡ್-19 ಸಂಬಂಧಿತ ತಾಂತ್ರಿಕ ಮುಖ್ಯಸ್ಥರಾದ ಮಾರಿಯಾ ವ್ಯಾನ್ ಕೆರ್ಖೋವ್ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com